ಹೆಬ್ಬಾಳದಲ್ಲಿ ಯುವತಿ ಅನುಮಾನಾಸ್ಪದ ಸಾವು
ಟಿ. ನರಸೀಪುರ: ನೇಣು ಬಿಗಿದುಕೊಂಡು ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೈಸೂರು ನಗರದ ಹೆಬ್ಬಾಳದಲ್ಲಿ ಕಳೆದ ರಾತ್ರಿ ಜರುಗಿದೆ.
ತಾಲೂಕಿನ ಚೌಹಳ್ಳಿ ಗ್ರಾಮದ ಶಿವರುದ್ರೇಗೌಡ ಎಂಬವರ ಪುತ್ರಿ ಮಂಜುಳಾ (23) ಮೃತಪಟ್ಟಿರುವ ಯುವತಿ. ಈಕೆ ಭಾನುವಾರ ರಾತ್ರಿ ಮೈಸೂರಿನ ಹೆಬ್ಬಾಳದ ಮನೆಯೊಂದರ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ.
ಮೃತಳ ತಾಯಿ ಲಕ್ಷ್ಮಮ್ಮ, ಸಹೋದರ ನಾಗರಾಜು ಅವರು ಮೃತದೇಹವನ್ನು ಸೋಮವಾರ ಚೌಹಳ್ಳಿ ಗ್ರಾಮಕ್ಕೆ ತಂದಾಗ ಕುಟುಂಬದವರು, ಬಂಧುಗಳು ಸಾವಿನ ಬಗ್ಗೆ ಅನುಮಾನಗೊಂಡು ಯುವತಿಯ ಚಿಕ್ಕಪ್ಪ ನಾಗರಾಜು ಎಂಬವರು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೊಲೆ ಶಂಕೆ: ಮಂಜುಳಾಳನ್ನು ಇತೀಚೆಗಷ್ಟೆ ವಿವಾಹವಾಗಿದ್ದ ಆಕೆಯ ಪತಿಯೆ ಕೊಲೆ ಮಾಡಿರಬಹುದು ಎಂಬ ಶಂಕೆಯನ್ನು ಮೃತಳ ಚಿಕ್ಕಪ್ಪ ನಾಗರಾಜು ವ್ಯಕ್ತಪಡಿಸಿದ್ದಾರೆ.
ಮಳವಳ್ಳಿ ತಾಲೂಕಿನ ಹುಲ್ಲಂಬಳ್ಳಿ ಗ್ರಾಮದ ಬಂಗಾರಸ್ವಾಮಿ ಎಂಬಾತ ಕಳೆದ ಆರೇಳು ತಿಂಗಳ ಹಿಂದೆಯಷ್ಟೇ ಮಂಜುಳಾಳನ್ನು ವಿವಾಹವಾಗಿದ್ದ ಎನ್ನಲಾಗಿದ್ದು, ಮೈಸೂರಿನ ಹೆಬ್ಬಾಳದಲ್ಲಿ ಇಬ್ಬರೂ ವಾಸವಾಗಿದ್ದರು. ಮನೆಯಲ್ಲಿ ಮಂಜುಳಾ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾಳೆ. ಬಂಗಾರಸ್ವಾಮಿ ಆಕೆಯನ್ನು ಕೊಲೆ ಮಾಡಿ, ನೇಣು ಹಾಕಿರಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶಂಕಿತ ಆರೋಪಿ ಬಂಗಾರಸ್ವಾಮಿಯನ್ನು ವಶಕ್ಕೆ ಪಡೆದಿರುವ ನರಸೀಪುರ ಠಾಣೆ ಪ್ರಭಾರ ಎಸ್ಐ ಎಸ್. ಆನಂದ್ ಘಟನೆ ಬಗ್ಗೆ ತನಿಖೆಗಾಗಿ ಪ್ರಕರಣವನ್ನು ಮೈಸೂರು ಹೆಬ್ಬಾಳು ಪೊಲೀಸರಿಗೆ ವರ್ಗಾಯಿಸಲು ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

