ಮೈಸೂರು

ಗ್ರಾಮ ಸ್ವಚ್ಛತೆಗೆ ಮುಂದಾದ ವೃದ್ಧ ದಂಪತಿ

Published On :

ಪಿರಿಯಾಪಟ್ಟಣ: ತಮ್ಮ ಗ್ರಾಮದ ಜನತಾ ಬಡಾವಣೆಯ ರಸ್ತೆ ದುರಸ್ತಿ ಪಡಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳು, ಲೋಕಾಯುಕ್ತ, ನ್ಯಾಯಾಧೀಶರು ಹಾಗೂ ರಾಷ್ಟ್ರಪತಿವರೆಗೂ ಪತ್ರಗಳನ್ನು ಬರೆದು ಹೋರಾಟ ಮಾಡಿದ ತಾಲೂಕಿನ ಕುಂದನಹಳ್ಳಿಯ ಶಿವಣ್ಣ ಮತ್ತು ಜಯಮ್ಮ ದಂಪತಿ ಈಗ ಗ್ರಾಮದ ಸ್ವಚ್ಛತೆಗೆ ತಾವೇ ಮುಂದಾಗಿದ್ದಾರೆ.
ಗ್ರಾಮದ ನೀರಿನ ಟ್ಯಾಂಕ್ನ ಸುತ್ತ ಹಾಕಿರುವ ತಂತಿ ಬೇಲಿಯ ಆಳೆತ್ತರ ಮುಳ್ಳಿನ ಗಿಡಗಳು ಬೆಳೆದು, ವಿಷ ಜಂತುಗಳು ಮನೆ ಮಾಡಿಕೊಂಡಿದ್ದವು. ಈ ಗಿಡಗಳನ್ನು ಕಿತ್ತು ಸ್ವಚ್ಛಗೊಳಿಸುವಂತೆ ಅನೇಕ ಬಾರಿ ಪಂಚಾಯಿತಿಗೆ, ಪಿಡಿಒ ಹೇಳಿದರೂ ಅವರು ಇತ್ತ ಗಮನ ಹರಿಸಲಿಲ್ಲ. ಆಕಾಶವಾಣಿಯಲ್ಲಿ ಪ್ರಸಾರವಾಗುವ ಸಲಾಂ ಅಪ್ನಾದೇಶ್ ಕಾರ್ಯಕ್ರಮದಿಂದ ಸ್ಫೂರ್ತಿಗೊಂಡು, ಈ ದಂಪತಿ ಟ್ಯಾಂಕ್ನ ಸುತ್ತ ಬೆಳೆದಿದ್ದ ಗಿಡಗಳನ್ನು ಕಿತ್ತು, ಸ್ವಚ್ಛಗೊಳಿಸಿದ್ದಾರೆ.
ಹಾಗೆಯೇ ಕುಂದನಹಳ್ಳಿಯಲ್ಲಿರುವ ಬಸ್ ನಿಲ್ದಾಣದಲ್ಲಿ ಕಸ ತುಂಬಿಕೊಂಡಿದೆ. ಇದನ್ನು ಗುಡಿಸುವವರು ಇಲ್ಲದೆ ಪಂಚಾಯಿತಿಯವರು ಇತ್ತ ತಿರುಗಿ ನೋಡದೆ ಇದ್ದ ಕಾರಣ, ಕಳೆದ ಮೂರು ತಿಂಗಳಿಂದ ವಾರಕ್ಕೆ 2 ಬಾರಿಯಂತೆ ಬಸ್ ನಿಲ್ದಾಣವನ್ನು ಸ್ವಚ್ಛ ಮಾಡುತ್ತಿದ್ದಾರೆ. ಇದೇ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ನೆಟ್ಟಿರುವ ಸಸಿಗಳಿಗೆ ವಾರಕ್ಕೊಮ್ಮೆ ಶಾಲಾ ಮಕ್ಕಳ ಜೊತೆ ಸೇರಿಕೊಂಡು ನೀರು ಹಾಕುತ್ತಾರೆ. ನಮ್ಮ ಬಡಾವಣೆಯ ಅಭಿವೃದ್ಧಿಗೆ ಬೇಕಾಗುವ ಅನುದಾನವನ್ನು ಕೊಡಲು ಸರ್ಕಾರ ಮೀನಮೇಷ ಎಣಿಸುತ್ತಿದ್ದು, ಕಳೆದ 5 ವರ್ಷದಿಂದ ನಿರಂತರವಾಗಿ ಮನವಿ ಮಾಡುತ್ತಾ ಬಂದಿದ್ದೇನೆ. ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮನಸ್ಸು ಮಾಡುತ್ತಿಲ್ಲ ಎಂದು ಅವರು ದೂರಿದ್ದಾರೆ.
ಗ್ರಾಮದಲ್ಲಿರುವ ಕುಂದನಹಳ್ಳಿ ಸರ್ಕಾರಿ ಶಾಲೆಗೆ ಶಾಶ್ವತ ಕುಡಿಯುವ ನೀರನ್ನು ಕಲ್ಪಿಸಿಕೊಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.