ನಿರ್ಮಲಾನಂದನಾಥ ಶ್ರೀಗಳಿಗೆ ಅದ್ಧೂರಿ ಸ್ವಾಗತ
ಎಚ್.ಡಿ. ಕೋಟೆ: ಶ್ರೀ ಬಾಲಗಂಗಾದರನಾಥ ಸ್ವಾಮೀಜಿ ಗುರುವಂದನೆ ಹಾಗೂ ನಿರ್ಮಲಾನಂದ ಸ್ವಾಮೀಜಿಗಳ ಪುರ ಪ್ರವೇಶ ಕಾರ್ಯಕ್ರಮವು ಪಟ್ಟಣದ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಆವರಣದಲ್ಲಿ ಸಡಗರ, ಸಂಭ್ರಮದಿಂದ ಮಂಗಳವಾರ ನೆರವೇರಿತು.
ಪಟ್ಟಣದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಿಂದ ಮೆರವಣಿಗೆಯು ಸಂಸ್ಥೆಯ ಆವರಣದವರೆಗೆ ನಡೆಯಿತು. ಶಾಲಾ ಮಕ್ಕಳು, ಸ್ತಬ್ಧ ಚಿತ್ರ, ಡೊಳ್ಳು ಕುಣಿತ, ನಂದಿ ಧ್ವಜ, ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಕರೆ ತರಲಾಯಿತು.
ಸಂಸದ ಆರ್.ಧ್ರುವನಾರಾಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲಗಂಗಾದರನಾಥ ಸ್ವಾಮೀಜಿ ರಾಜ್ಯಕ್ಕೆ ಅಪಾರ ಕಾಣಿಕೆ ನೀಡಿದ್ದಾರೆ. ರಾಜ್ಯದಲ್ಲಿ ಹೆಚ್ಚು ಮಠಗಳು ಇದ್ದು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ತಮ್ಮ ಸೇವೆಯನ್ನು ಒಂದು ಕಡೆ ನಡೆಸುತ್ತಿದ್ದರೆ, ಮತ್ತೊಂದು ಕಡೆ ಮಠಗಳ ಸ್ವಾಮೀಜಿಗಳು ತಮ್ಮ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದರು.
ಶಾಸಕರಾದ ಜಿ.ಟಿ. ದೇವೇಗೌಡ, ಎಸ್. ಚಿಕ್ಕಮಾದು, ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿದರು. ನಿರ್ಮಲಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ರಾಜ್ಯದಲ್ಲಿ ಅಸಂಘಟಿತರಾಗಿದ್ದವರಿಗೆ ಬಾಲಗಂಗಾದರನಾಥ ಸ್ವಾಮೀಜಿ ಚೈತನ್ಯ ತುಂಬಿದರು. ಅವರು ಪ್ರತಿಯೊಬ್ಬರಲ್ಲಿಯೂ ಇರುವ ಶಕ್ತಿಯ ಅರಿವು ಮಾಡಿಕೊಟ್ಟರು. ತಮ್ಮ ಕೆಲಸ ಮಾಡಿ ನಾಲ್ಕು ಮಂದಿಗೆ ಹಂಚಿ ತಿನ್ನಬೇಕು. ಪ್ರತಿಯೊಬ್ಬರೂ ವಿದ್ಯಾವಂತರಾದರೆ ನಾಗರಿಕತೆ ಬೆಳೆಯುತ್ತದೆ. ಇದರಿಂದ ಬದುಕು ರೂಢಿಸಿಕೊಳ್ಳಲು ಸಾಧ್ಯ ಎಂದು ಕರೆ ನೀಡಿದರು.
ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ಚುಂಚನಕಟ್ಟೆಯ ಶಿವನಂದ ಸ್ವಾಮೀಜಿ, ಹಾಸನ ಶಂಭುನಾಥ ಸ್ವಾಮೀಜಿ, ಜಿಪಂ ಅಧ್ಯಕ್ಷ ಎಂ. ಮಹದೇವು, ಮಾಜಿ ಶಾಸಕ ಚಿಕ್ಕಣ್ಣ, ಎಂ. ಶಿವಣ್ಣ, ತಾಪಂ ಅಧ್ಯಕ್ಷ ಚಂದ್ರಮ್ಮ, ಜಿಪಂ ಸದಸ್ಯೆ ನಂದಿನಿ ಚಂದ್ರಶೇಖರ್, ತಾ. ಒಕ್ಕಲಿಗ ಸಂಘದ ಅಧ್ಯಕ್ಷ ನರಸಿಂಹೇಗೌಡ, ಮಹೇಂದ್ರ, ಕೆ.ಪಿ. ಬಸವೇಗೌಡ, ವಕೀಲರ ಸಂಘದ ಅಧ್ಯಕ್ಷ ಮಹೇಶ್, ತಾ. ಕೃಷಿಕ ಸಮಾಜದ ಅಧ್ಯಕ್ಷ ಕಾಳೇಗೌಡ, ಮೈಮುಲ್ ನಿರ್ರ್ದೇಶಕ ಈರೇಗೌಡ, ಸುಬ್ಬೇಗೌಡ, ಕೃಷ್ಣೇಗೌಡ, ಮಾಜಿ ಸೆನೆಟ್ ಸದಸ್ಯ ಕೃಷ್ಣೇಗೌಡ, ಮಾಜಿ ಜಿಪಂ ಸದಸ್ಯ ರವಿ, ಮಾಜಿ ಪ್ರಧಾನ ಎಂ.ಸಿ. ದೊಡ್ಡನಾಯಕ, ರಾಮು, ರಾಜೇಂದ್ರ, ರಾಜಶೇಖರ್, ಬೋರೇಗೌಡ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

