ವಿವಿಧ ಪಕ್ಷಗಳಿಗೆ ಪದಾಧಿಕಾರಿಗಳ ನೇಮಕ
ಮೈಸೂರು: ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿಯಾಗಿ ಕುವೆಂಪುನಗರದ ಬಿ. ರಾಮಪ್ಪ, ಕಾರ್ಯದರ್ಶಿಯಾಗಿ ವಿಜಯನಗರದ ಬಿ. ಮಂಜುನಾಥ್, ಇಂದಿರಾಗಾಂಧಿ ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾಗಿ ವಿಜಯನಗರದ ಆರ್. ವಿನೋದ್, ದೇವರಾಜ ಬ್ಲಾಕ್ ಉಪಾಧ್ಯಕ್ಷರಾಗಿ ಎಂ.ಎನ್. ಧರಣಿ ವೆಂಕಟೇಶ್, ಕಾರ್ಯದರ್ಶಿಯಾಗಿ ಎಸ್. ಜಯಕುಮಾರ್, ಅಜೀಜ್ಸೇಠ್ ಬ್ಲಾಕ್ ಎಸ್ಸಿ ವಿಭಾಗದ 45ನೇ ವಾರ್ಡಿನ ಅಧ್ಯಕ್ಷರಾಗಿ ಕೋಕಿಲ, ಉಪಾಧ್ಯಕ್ಷರಾಗಿ ಹಂಸ, ಸಂಚಾಲಕರಾಗಿ ವಿಜಿ ನೇಮಕವಾಗಿದ್ದಾರೆ.
ಬಿಜೆಪಿ ಚಾಮರಾಜ ಕ್ಷೇತ್ರ ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ಡಿ. ಮಹದೇವ, ಸಮಾಜ ರಕ್ಷಣಾ ವೇದಿಕೆಯ ಅಧ್ಯಕ್ಷರಾಗಿ ಕೆ.ಐ. ಲೈಕ್ ಅಹಮ್ಮದ್, ನಗರದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಸಲೀಂ ಪಾಷಾ, ಭಾರತೀಯ ಕಲಾ ವೇದಿಕೆಯ ಜಿಲ್ಲಾಧ್ಯಕ್ಷರಾಗಿ ಎಸ್. ರಾಜಪ್ಪ, ಕಾರ್ಯದರ್ಶಿ ಎಚ್. ರುದ್ರೇಶ್, ಕರ್ನಾಟಕ ಗಡಿ ಹೋರಾಟ ಸಮಿತಿ ಗುಂಡ್ಲುಪೇಟೆ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಗುರುರಾಜ್ ನೇಮಕವಾಗಿದ್ದಾರೆ.
ಹುದ್ದೆ ನೇಮಕಾತಿಗೆ ಅನುಮೋದನೆ ಬೇಡ
ಮೈಸೂರು: ಕರ್ನಾಟಕ ಸಂಸ್ಕೃತ ವಿವಿ ವತಿಯಿಂದ ಆರು ಸಹಪ್ರಾಧ್ಯಾಪಕ ಹಾಗೂ ಐದು ಬ್ಯಾಕ್ಲಾಗ್ ಹುದ್ದೆಗಳ ಸಂದರ್ಶನದ ಆಯ್ಕೆ ಪಟ್ಟಿಗೆ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ನೀಡಬಾರದು ಎಂದು ಅಖಿಲ ಕರ್ನಾಟಕ ಸಂಸ್ಕೃತ ವಿಚಾರ ವೇದಿಕೆ ಆಗ್ರಹಿಸಿದೆ.
ಸಹ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ ವಿವಿಯ 25 ವಿಭಾಗಗಳ ಪೈಕಿ ಯಾವ ಯಾವ ವಿಭಾಗಗಳ ಎಷ್ಟು ಸಹ ಪ್ರಾಧ್ಯಾಪಕ ಹುದ್ದೆಗಳನ್ನು ತುಂಬಲಾಗುವುದೆಂದು ಸ್ಪಷ್ಟವಾಗಿ ತಿಳಿಸಿಲ್ಲ.
ಅಲ್ಲದೇ ಯಾವುದೇ ಬೋಧನಾ ವಿಭಾಗದ ಉದ್ಘೋಷಣೆಯಾಗಿಲ್ಲ. ವಿದ್ಯಾರ್ಥಿಗಳ ಪ್ರವೇಶ ನಡೆದಿಲ್ಲ. ಈಗಿರುವ 22 ಜನ ಬೋಧಕ ಸಿಬ್ಬಂದಿ ಕೆಲಸವಿಲ್ಲದೆ ವೇತನ ಪಡೆಯುತ್ತಿದ್ದಾರೆ. ಹೀಗಾಗಿ ಮತ್ತೆ ಆರು ಮಂದಿಯನ್ನು ನೇಮಿಸಿಕೊಳ್ಳುವ ಅಗತ್ಯವಿಲ್ಲ. ಸಿಂಡಿಕೇಟ್ ಸಭೆಯ ನಿರ್ಧಾರಗಳುಅಸಿಂಧುವಾದುವು ಎಂದು ವೇದಿಕೆಯ ಅಧ್ಯಕ್ಷರಾದ ಶ್ರೀ ಶಾಂತವೀರೇಂದ್ರ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಟಿ.ಜಿ. ಗಂಗಾಧರಯ್ಯ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

