ಮೈಸೂರು

ಕಳ್ಳನ ಬಂಧನ

Published On :

ಮೈಸೂರು; ಶ್ರೀರಾಂಪುರದ ಸಿಎಸ್ಆರ್ಟಿಐ ಕೀಟ ನಿರ್ವಹಣಾ ಪ್ರಯೋಗಾಲಯದಲ್ಲಿ ಕಳವು ಮಾಡಿದ್ದ ಆರೋಪಿಯನ್ನು ವಿದ್ಯಾರಣ್ಯಪುರಂ ಪೊಲೀಸರು ಬಂಧಿಸಿದ್ದಾರೆ.
ಸ್ಥಳದಲ್ಲಿ ದೊರೆತ ಬೆರಳು ಮುದ್ರೆಯ ಆಧಾರದ ಮೇಲೆ ಮೂಲತಃ ಪ.ಬಂಗಾಳದ ಡಾರ್ಜಿಲಿಂಗ್ ರೇಲ್ವೆ ಪಾಟಕ್ ನಿವಾಸಿ ಹಾಲಿ ಶ್ರೀರಾಂಪುರ ಬಿಇಎಂಎಲ್ ರಸ್ತೆ ನಿವಾಸಿ ಕಮಲ್ ತಮನ್(28) ಬಂಧಿತ ಆರೋಪಿ.
ಈತ ಪ್ರಯೋಗಾಲಯದ ಕಿಟಕಿಯ ಗ್ರಿಲ್ನ ಸ್ಕ್ರೂ ಕಳಚಿ ಒಳ ಪ್ರವೇಶಿಸಿ 23,500 ಬೆಲೆ ಬಾಳುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳುವು ಮಾಡಿದ್ದ. ಆರೋಪಿಯಿಂದ ಪೊಲೀಸರು 21 ಇಂಚಿನ ಟಿವಿ, ಒಂದು ಎಚ್.ಪಿ ಕಂಪನಿಯ ಲ್ಯಾಪ್ಟಾಪ್, ಒಂದು ಟೇಪ್ರೆಕಾರ್ಡರ್, ಒಂದು ಡಿವಿಡಿ ಪ್ಲೇಯರ್, ಒಂದು ಎಚ್ಸಿಎಲ್ ಕಂಪನಿಯ ಎಲ್ಸಿಡಿ ಮಾನೀಟರ್ ಮತ್ತು ಅದರ ಪರಿಕರ ವಶಪಡಿಸಿಕೊಂಡಿದ್ದಾರೆ.
ಬೆರಳು ಮುದ್ರೆ ಘಟಕದ ಎಸಿಪಿ ಎಂ.ಬಿ. ಸೋಮೇಶ್ ಅವರ ವರದಿಯ ಆಧಾರದ ಮೇಲೆ ವಿದ್ಯಾರಣ್ಯಪುರಂ ಠಾಣೆ ಇನ್ಸ್ಪೆಕ್ಟರ್ ಕೆ.ಸಿ. ಪ್ರಕಾಶ್, ಎಸ್ಐ ಎಲ್. ಶ್ರೀನಿವಾಸ್, ಸಿಬ್ಬಂದಿ ಸೋಮೇಗೌಡ, ಬೀರಯ್ಯ, ಕೆ.ಎಸ್. ಗೋಪಾಲ್, ಕೆ. ಮಹದೇವ, ರಂಗಸ್ವಾಮಿ, ವೀರಭದ್ರ ಶೆಟ್ಟಿ ಅವರು ಆರೋಪಿಯನ್ನು ಬಂಧಿಸಿದ್ದಾರೆ.


ಯುವತಿ ನಾಪತ್ತೆ


ಮೈಸೂರು: ಬೆಳವಾಡಿ ಗ್ರಾಮದ ನಿವಾಸಿ ಸಿದ್ದೇಗೌಡ ಎಂಬವರ ಪುತ್ರಿ ಶ್ವೇತಾ (21) ನಾಪತ್ತೆಯಾಗಿದ್ದಾರೆ. ಫೆ. 15ರ ರಾತ್ರಿ ಮನೆಯಿಂದ ಹೊರ ಹೋದವರು ಇದುವರೆಗೂ ಪತ್ತೆಯಾಗಿಲ್ಲ ಎಂದು ಸಿದ್ದೇಗೌಡ ವಿಜಯನಗರ ಠಾಣೆಗೆ ದೂರು ನೀಡಿದ್ದಾರೆ. 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗುಂಡು ಮುಖ, ಗೋಧಿ ಬಣ್ಣ ಹೊಂದಿರುವ ಇವರು ಕನ್ನಡ ಮಾತನಾಡುತ್ತಾರೆ. ಇವರ ಸುಳಿವು ದೊರೆತಲ್ಲಿ ವಿಜಯನಗರ ಠಾಣೆ ದೂ. 2418117, 2418317 ಸಂಪರ್ಕಿಸಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.