ನಂ ತಂಟೇಗ್ ಬಂದ್ರೆ ಸುಮ್ಕಿರಲ್ಲ
ಅನಾದಿ ಕಾಲದಿಂದಲೂ ಕಾಡು ಬೆಳೆಸಿ, ಪ್ರಾಣಿಗಳನ್ನು ರಕ್ಷಿಸುತ್ತಿರುವವರು ಆದಿವಾಸಿಗಳು. ಈಗ ಅಧಿಕಾರ ಮಾಡುತ್ತಿರುವವರು ಅರಣ್ಯಾಧಿಕಾರಿಗಳು.
ಅದಿವಾಸಿ ಮಹಿಳೆ ಚೊಂಬಮ್ಮ ಅರಣ್ಯ ಅಧಿಕಾರಿಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡ ಮಾತಿದು.
ಕಮ್ಮಟದಲ್ಲಿ ಮಾತನಾಡಿದ ಅವರು, ಪ್ರಾಣಿ ಪಕ್ಷಿಗಳು ತಮ್ಮ ಸಹೋದರ, ಸಹೋದರಿಯ ರೀತಿಯಲ್ಲೇ ಬೆಳೆದು ಬಂದಿದ್ದೇವೆ. ಮರಮುಟ್ಟುಗಳು ದೇವಭೂತಗಳೆಂದು ಪರಿಗಣಿಸಿ ಪೂಜೆ ಮಾಡಿಕೊಂಡು ಬಂದಿದ್ದೇವೆ. ಆದರೆ ಈಗ ಅಧಿಕಾರಿಗಳು ಆದಿವಾಸಿಗಳಿಗೆ ಕೆರೆ ಕಟ್ಟೆ ಮತ್ತು ಕಾಡಿನೊಳಗೆ ಹೋಗಲು ಬಿಡುತ್ತಿಲ್ಲ. ಕಾಡಂಚಿನಲ್ಲೆ ಬೆಳೆ ತೆಗೆಯಲು ಬಿಡುತ್ತಿಲ್ಲ ಎಂದು ದೂರಿದರು.
ಎಚ್.ಡಿ. ಕೋಟೆ ತಾ. ಬೆಟ್ಟಕುರುಬ 70 ವರ್ಷದ ವೃದ್ಧೆ ಡಿಸಿಎಫ್ ಬೇಜಾರು ಮಾಡ್ಕೋಬಾರ್ದು ಅಂತ ಮಾತು ಶುರು ಮಾಡಿ, ನಾವು ಗಿಡಮರಗಳು ಬೆಳೆಸೀವಿ. ಗುಂಡಿ ತೋಡಿ ನೀರು ತುಂಬ್ಸೀವಿ. ಪ್ರಾಣಿಗಳೊಂದಿಗೆ ಅಕ್ಕ ತಮ್ಮಂದಿರಂತೆ ಬಾಳ್ಮೆ ನಡ್ಸಿವಿ, ನಿಮ್ಗೇನ್ ಗೊತ್ತು? ನಮ್ಮ ದೇವರು, ಸ್ಮಶಾನ ಅಲ್ಲೇ ಐತೆ. ಸೌದೆಗೋದರೆ ಕೇಸ್ ಹಾಕ್ತೀರಾ, ಕದ್ದು ಮರ ಮಾರ್ಕೊಂಡು ನೀವು ತಿಂತೀರಾ, ನಮ್ಗೆ ಪಾಠ ಹೇಳೋದು ಬುಡಿ. ನಾವೇನ್ ನಿಮ್ಮಂಗೆ ಸುಳ್ಳೇಳಕ್ಕಿಲ್ಲಾ, ನಮ್ಮೇಲೆ ಸುಳ್ಳು ಕೇಸ್ ಹಾಕ್ತೀರಾ? ನಾವು ಕಾಡಲ್ಲೇ ಹುಟ್ಟೀವಿ ಕಾಡಲ್ಲೇ ಸಾಯೀವಿ. ನಮ್ಮೇನು ಮಾಡಾಕಾಯ್ಕಿಲ್ಲಾ. ಕೇಂದ್ರ ಸರ್ಕಾರ ಕಾಡಲ್ಲಿ ವಾಸ ಮಾಡೋರ್ಗೆ ಅಲ್ಲೆ ಭೂಮಿ ಕೊಡ್ಬೋಕೂಂತ ಕಾನೂನು ತಂದದೆ ಗೊತ್ತಾ. ನಂತಂಟೇಗ್ ಬಂದ್ರೆ ಸುಮ್ನಿರಕ್ಕಿಲ್ಲ. ಕಾಡ್ನಲ್ಲಿ ನಂಪಕ್ಕನೇ ಆನೆ, ಹುಲಿ ಓಡಾಡುದ್ರು ಏನೂ ಮಾಡ್ತಿತ್ತಿಲ್ಲ. ಮೃಗಾಲಯದಲ್ಲಿರುವ ಪ್ರಾಣಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಿಗೆ ತರುತ್ತಾರೆ. ಕಾಡಿನಲ್ಲಿರುವ ಕಾಡಾನೆಗಳಿಗೆ ಉಪ್ಪು ಹಾಕಿ ರೋಸ ಬರಿಸಿ ಸಾರ್ವಜನಿಕರ ಮೇಲೆ ಹಲ್ಲೆ ಮಾಡುವ ಕೆಲಸಕ್ಕೆ ಸಹಕಾರ ನೀಡುತ್ತಿದ್ದಾರೆಂದು ಆರೋಪಿಸಿದರು.
ಡಿಸಿ, ಡಿಸಿಎಫ್ ಆಗುವುದು ಬೇಡ. ನಾಲಿಗೆ ಸರಿಯಾಗಿದ್ದರೆ ಕಾಡು ಕುರುಬ ಎಲ್ಲಿ ಬೇಕಾದರು ಜೀವನ ಸಾಗಿಸುತ್ತಾನೆ. ಮಾತು ಕೊಟ್ಟಂತೆ ನಡೆಯುತ್ತಾನೆ. ಈ ಬಗ್ಗೆ ಸರ್ಕಾರದ ಮುಖ್ಯಮಂತ್ರಿಗಳು, ಅಧಿಕಾರಿಗಳು ತೋರುವ ಆಸೆಗಳಿಗೆ ಈ ಆದಿವಾಸಿಗಳು ಬಲಿಯಾಗಲ್ಲ ತಿಳಿದುಕೊಳ್ಳಿ ಎಂದರು.
ಅರಣ್ಯ ನೌಕರರು ಮಾಡುವ ಕಳ್ಳತನ, ಮತ್ತಿತ್ತರ ದಂಧೆಗಳಿಗೆ ಕಾಡುಕುರುಬರನ್ನು ತೋರಿಸಿ ಪ್ರಕರಣ ದಾಖಲು ಮಾಡುತ್ತಾರೆ ಎಂದು ಅರಣ್ಯ ಇಲಾಖೆಯ ಲೋಪದೋಷಗಳನ್ನು ಬಿಚ್ಚಿಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

