ವೈದ್ಯ ಸೀಟು ಅಕ್ರಮ ಮಾರಾಟ; ಕ್ರಮಕ್ಕೆ ಆಗ್ರಹ
ಮೈಸೂರು: ರಾಜ್ಯ ಒಕ್ಕಲಿಗರ ಸಂಘ ನಡೆಸುತ್ತಿರುವ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶಾತಿ ಪಡೆಯದೆ ಬಿಟ್ಟು ಹೋಗಿರುವ ಸೀಟುಗಳನ್ನು ಅಕ್ರಮವಾಗಿ ಮಾರಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಮಾಜಿ ಕಾರ್ಯದರ್ಶಿ ಹಾಗೂ ಹಾಲಿ ನಿರ್ದೇಶಕ ಡಾ. ಕೆ. ಮಹದೇವ್ ಆಗ್ರಹಿಸಿದರು.
2007- 08ನೇ ಸಾಲಿನ ಈ ಹಗರಣಕ್ಕೆ ಸಂಬಂಧಿದಂತೆ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಬಿ. ಕೆಂಚಪ್ಪಗೌಡ ಅವರನ್ನು ಖಳನಾಯಕರಂತೆ ಇತ್ತೀಚೆಗೆ ಬಿಂಬಿಸುತ್ತಿರುವುದರಿಂದ, ದಾಖಲೆ ಸಹಿತ ಸತ್ಯಾಂಶವನ್ನು ಬಹಿರಂಗಪಡಿಸುತ್ತಿರುವುದಾಗಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆ ಶೈಕ್ಷಣಿಕ ವರ್ಷದಲ್ಲಿ ಕಿಮ್ಸ್ ಮೆಡಿಕಲ್ ಕಾಲೇಜಿಗೆ 44 ವೈದ್ಯಕೀಯ ಸೀಟುಗಳನ್ನು ಕಾಮೆಡ್ ಕೆ ಅಲಾಟ್ ಮಾಡಿತ್ತು. ಇದರಲ್ಲಿ ಎಲ್ಲ 44 ಸೀಟುಗಳ ಮೂಲ ವಿದ್ಯಾರ್ಥಿಗಳು ಡ್ರಾಪ್ ಔಟ್ ಆದರು. ಆದರೆ ಆಗ 44 ಸೀಟುಗಳಿಗೆ ಅನರ್ಹ ವಿದ್ಯಾರ್ಥಿಗಳನ್ನು ಸೇರಿಸಿ ಸಂಘಕ್ಕೆ 10 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.
2008ರಲ್ಲಿ ನಾನು ಸಿಇಒ ಆಗಿದ್ದ ಅವಧಿಯಲ್ಲಿ ಯಾವುದೇ ಎಂಬಿಬಿಎಸ್ ಸೀಟುಗಳನ್ನು ಡ್ರಾಪ್ ಔಟ್ ಮೂಲಕ ಭರ್ತಿ ಮಾಡಲು ಅವಕಾಶ ಕೊಟ್ಟಿರುವುದಿಲ್ಲ. 2011-12ನೇ ಸಾಲಿನ 21 ಎಂಬಿಬಿಎಸ್ ಸೀಟುಗಳನ್ನು ಭರ್ತಿ ಮಾಡಿರುವುದಿಲ್ಲ ಎಂದು ಅವರು ತಿಳಿಸಿದರು.
ಎಂಬಿಬಿಎಸ್ ಡ್ರಾಪ್ ಔಟ್ ಸೀಟುಗಳ ಪ್ರಮುಖ ಆರೋಪ ಎಸಗಿರುವವರ ಮೇಲೆ ಪ್ರಕರಣ ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಅಗ್ರಹಿಸಿದರು.
ಆ ಅವಧಿಯಲ್ಲಿ ನಾನು ಸಿಇಒ ಆಗಿದ್ದರಿಂದ ಮಾಧ್ಯಮದ ಮುಂದೆ ಹೋಗಲು ನಿರ್ಬಂಧ ಇತ್ತು. ಈಗ ನಾನು ಸ್ವತಂತ್ರನಾಗಿರುವುದರಿಂದ ಮಾಧ್ಯಮದ ಮುಂದೆ ಬಂದಿರುವುದಾಗಿ ಹೇಳಿದ ಅವರು, ಅಂದಿನ ಬೆಂಗಳೂರು ಪೊಲೀಸ್ ಉಪಆಯುಕ್ತರಿಗೆ ದೂರು ನೀಡಲು ಹೋದಾಗ ಅವರು ಪ್ರಭಾವಿಗಳ ವಿರುದ್ಧ ದೂರು ದಾಖಲಿಸಲಿಲ್ಲ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

