ಅತ್ತಿಗೆಗೆ ಬಾಳು ಕೊಟ್ಟಿದ್ದ ಸುದರ್ಶನ್
ನಂಜನಗೂಡು: ಅಪಘಾತದಲ್ಲಿ ಮೃತಪಟ್ಟ ಮೈಸೂರಿನ ನಿವಾಸಿ ಹಾಗೂ ಉದ್ಯಮಿ ಸುದರ್ಶನ್ ಅವರು 3 ವರ್ಷದ ಹಿಂದೆ ತನ್ನ ಅಣ್ಣ ಮೋಹನ್ಕುಮಾರ್ ನಿಧನರಾದ ಹಿನ್ನೆಲೆಯಲ್ಲಿ ಅತ್ತಿಗೆ ಲಕ್ಷ್ಮಿ ಅವರನ್ನು ವಿವಾಹವಾಗುವ ಮೂಲಕ ಬಾಳು ನೀಡಿದ್ದರು. ಲಕ್ಷ್ಮಿ ಮಾತನಾಡಿ, ನನಗೆ 3 ವರ್ಷದ ಹಿಂದೆ ನನ್ನ ಪತಿ ಮೋಹನ್ಕುಮಾರ್ ಮೃತಪಟ್ಟರು. ಒಂದು ಹೆಣ್ಣು ಮಗು ಇದ್ದು, ಜೀವನ ಅತಂತ್ರದಲ್ಲಿದ್ದಾಗ ಸುದರ್ಶನ್ ಅವರು ನನ್ನ ಜೀವನದ ದಿಕ್ಕನ್ನೇ ಬದಲಿಸಿದ್ದರು. ಈಗ ಅವರು ಅಪಘಾತದಲ್ಲಿ ಮೃತ ಪಟ್ಟಿರುವುದರಿಂದ ನನ್ನ ಬದುಕು ಬರಡಾಗಿದೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದುದು ಮನಕಲಕುವಂತಿತ್ತು.
ಯಶಸ್ವಿಯಾಗಿ ನಡೆದ ಪಲ್ಸ್ ಪೋಲಿಯೊ ಕಾರ್ಯಕ್ರಮ
ಮೈಸೂರು: ಮಕ್ಕಳಲ್ಲಿ ಹರಡುವ ಪೋಲಿಯೊ ರೋಗವನ್ನು ನಿರ್ಮೂಲನೆ ಮಾಡಲು ಭಾನುವಾರ ಹಮ್ಮಿಕೊಂಡಿದ್ದ ಎರಡನೇ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮ ಯಶಸ್ವಿಯಾಯಿತು. ನಗರದ ಪೆರುಮಾಳ್ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಟಿ. ಪುಟ್ಟಸ್ವಾಮಿ ಅವರು ಮಗುವಿಗೆ ಪೋಲಿಯೊ ಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾದ್ಯಂತ 1588 ಲಸಿಕಾ ಕೇಂದ್ರಗಳನ್ನು ತೆರೆದು, 3,13161 ಮಕ್ಕಳಿಗೆ ಪೋಲಿಯೊ ಹನಿ ನೀಡುವ ಯೋಜನೆಯನ್ನು ರೂಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 6,352 ಜನ ಲಸಿಕೆ ನೀಡಲಿದ್ದು, 318 ಮೇಲ್ವಿಚಾರಕರನ್ನು ನೇಮಿಸಲಾಗಿತ್ತು. ಇದೇ ವೇಳೆ ಡಾ. ಕೆ.ಎಚ್. ಪ್ರಸಾದ್, ಡಾ. ಶಿವಣ್ಣ ರೆಡ್ಡಿ, ಡಾ. ಉಮಾ, ಡಾ. ನಾಗಲಕ್ಷ್ಮೀ, ಶುಶ್ರೂಷಕರು ಇದ್ದರು.
ವಿದ್ಯಾರ್ಥಿಗಳಿಂದ ಜಾಥಾ
ವಿದ್ಯಾವಿಕಾಸ್ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳು ನಾದನಹಳ್ಳಿಯಲ್ಲಿ ಪೊಲೀಯೊ ಮುಕ್ತ ಭಾರತ ಜಾಥಾ ನಡೆಸಿದರು. ಪ್ರಥಮ ದರ್ಜೆ ಕಾಲೇಜು ಹಾಗೂ ನರ್ಸಿಂಗ್ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಜಾಥಾಗೆ ರೋಟರಿಯನ್ ಡಾ. ಎ.ಎಂ. ಧನಂಜಯ ಚಾಲನೆ ನೀಡಿದರು. ವಿದ್ಯಾವಿಕಾಸ್ ಸಮಾಜ ಸೇವಾ ಕ್ಲಬ್ನ ಸಂಯೋಜಕ ಜಿ.ವಿ. ಇಂದೂಶೇಖರ್ ಅತಿಥಿಗಳಾಗಿ ಭಾಗವಹಿಸಿದ್ದರು. ಒಟ್ಟು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

