ಬಣ್ಣಾರಿ ವಿರುದ್ಧ ಮೊಕದ್ದಮೆ ದಾಖಲಿಸಿ: ರೈತರ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಫೆ. 26
ರಾಜ್ಯ ಸರ್ಕಾರವು ಕಬ್ಬು ದರ ನಿಗದಿಪಡಿಸಿ ಆದೇಶಿಸಿ 3 ತಿಂಗಳಾದರೂ ಕಬ್ಬಿನ ಪೂರ್ಣ ಹಣ ರೈತರಿಗೆ ಪಾವತಿಸದ ಬಣ್ಣಾರಿ ಸಕ್ಕರೆ ಕಾರ್ಖಾನೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದವರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.
ರಾಜ್ಯ ಸರ್ಕಾರವು ಟನ್ ಕಬ್ಬಿಗೆ 2500 ನಿಗದಿಪಡಿಸಿದೆ. ಆದರೆ, ಬಣ್ಣಾರಿ ಕಾರ್ಖಾನೆಯವರು ಟನ್ ಕಬ್ಬಿಗೆ 2400 ಮಾತ್ರ ನೀಡುವ ಮೂಲಕ ರೈತರನ್ನು ವಂಚಿಸುತ್ತಿದೆ.
ಕಾರ್ಖಾನೆಗೆ ಪಕ್ಕದ ಜಿಲ್ಲೆಯಿಂದ 3 ಲಕ್ಷ ಟನ್ ಕಬ್ಬು ಸರಬರಾಜು ಮಾಡಲಾಗಿದೆ. ಇಂಥ ರೈತರಿಗೂ ಟನ್‌ಗೆ 100 ಹಾಗೂ ಸರ್ಕಾರದ ಸಹಾಯಧನ 150 ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಬೆಳಗಾವಿಯಲ್ಲಿ ಪ್ರಾಣ ತ್ಯಾಗ ಮಾಡಿದ ರೈತ ವಿಠಲ್ ಅರಬಾವಿ ಕುಟುಂಬಕ್ಕೆ ನೆರವಾಗಲು ಸರ್ಕಾರದ ಆದೇಶದಂತೆ ರೈತರು ಪ್ರತಿಟನ್ ಕಬ್ಬಿಗೆ 1 ಕಡಿತ ಮಾಡಿಕೊಳ್ಳಲು ಸ್ವಯಂ ಒಪ್ಪಿಗೆ ಪತ್ರ ನೀಡಿದ್ದರೂ, ಕಡಿತ ಮಾಡಲು ಕಾರ್ಖಾನೆಯವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗಾಗಿ ಕಾರ್ಖಾನೆಯವರ ಈ ಉದ್ಧಟತನಕ್ಕೆ ಜಿಲ್ಲಾಧಿಕಾರಿಯವರು ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಕಾಡಾ ಕಚೇರಿಗೆ ಮುತ್ತಿಗೆ: ಕೆರೆ ಕಟ್ಟೆಗಳ ತುಂಬಿಸಲು ಕಬಿನಿ ಬಲದಂಡೆ ನಾಲೆಯಿಂದ ತಕ್ಷಣ ನೀರು ಬಿಡಲು ಆಗ್ರಹಿಸಿ ಕಾಡಾ ಆವರಣದಲ್ಲಿರುವ ನೀರಾವರಿ ಮುಖ್ಯ ಎಂಜಿನಿಯರ್ ಕಚೇರಿಗೆ ಕಬ್ಬು ಬೆಳೆಗಾರರ ಸಂಘದವರು ಮುತ್ತಿಗೆ ಹಾಕಿದರು. ರೈತರ ಮನವಿ ಸ್ವೀಕರಿಸಿದ ಮುಖ್ಯ ಎಂಜಿನಿಯರ್ ಶಿವಶಂಕರ್, ಮಾರ್ಚ್ 2ನೇ ವಾರದಲ್ಲಿ ನೀರು ಕೊಡಿಸಲು, ಏಪ್ರಿಲ್‌ನಲ್ಲಿ 10 ದಿನ ನೀರು, ಏಪ್ರಿಲ್ ಮತ್ತು ಮೇನಲ್ಲಿ ನೀರು ಲಭ್ಯತೆ ಮೇಲೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಮುಖಂಡರಾದ ಅತ್ತಹಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಸೋಮಶೇಖರ್, ಕುಪ್ಯ ಜವರಯ್ಯ, ಬಸವರಾಜು, ನಾರಾಯಣ್, ಟಿ.ಸಿ. ಮಹದೇವಪ್ಪ, ಕುರುಬೂರು ಸಿದ್ದೇಶ್, ಗೋವಿಂದನಾಯಕ, ಯಾಕನೂರು ಬಸವಣ್ಣ, ಕಿರಗಸೂರು ಶಂಕರ್, ಹಾಡ್ಯ ರವಿ, ಪುರುಷೋತ್ತಮ್, ಪಿ. ರಾಜು, ಎಂ.ಕೆ. ರಂಗಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

