ಮೈಸೂರು

ಕರುಣಾಮಯಿ ಫೌಂಡೇಶನ್‌ಗಾಗಿ ಇಂದು ಅನ್ನಸಂತರ್ಪಣೆ: ನವೀನ್

Published On :

ಮೈಸೂರು: ಕರುಣಾಮಯಿ ಫೌಂಡೇಶನ್ ಜನತಾನಗರದಲ್ಲಿ ನಡೆಸುತ್ತಿರುವ ಬುದ್ದಿಮಾಂದ್ಯ ಮಕ್ಕಳ ಶಾಲೆಯ ಅಭಿವೃದ್ಧಿಗಾಗಿ ಫೆ.28ರ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಬಿಗ್‌ಬಜಾರ್ ಸೂಪರ್ ಮಾರ್ಕೆಟ್‌ನ ವ್ಯವಸ್ಥಾಪಕ ನವೀನ್ ಪ್ರಕಾಶ್ ತಿಳಿಸಿದರು.
ನಗರದ ಚಾಮರಾಜಪುರಂನಲ್ಲಿರುವ ಬಿಗ್ ಬಜಾರ್‌ನಲ್ಲಿ ಗ್ರಾಹಕರಿಗೆ ಅನ್ನಸಂತರ್ಪಣೆ ಮಾಡಲಾಗುವುದು. ಊಟದ ನಂತರ ಗ್ರಾಹಕರು ಅಲ್ಲಿರುವ ಹುಂಡಿಯಲ್ಲಿ ತಮ್ಮ ಇಚ್ಛಾನುಸಾರ ಹಣ ದಾನ ಮಾಡಬಹುದು. ಹೀಗೆ ಸಂಗ್ರಹವಾಗುವ ಹಣವನ್ನು ಕರುಣಾಮಯಿ ಫೌಂಡೇಶನ್‌ಗೆ ನೀಡಲಾಗುವುದು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕರುಣಾಮಯಿ ಫೌಂಡೇಶನ್‌ನ ಕಾರ್ಯದರ್ಶಿ ಕೆ.ವಿ. ಸೌಮ್ಯಾ ಮಾತನಾಡಿ, ಸಂಸ್ಥೆ ಆರಂಭಿಸಿ ನಾಲ್ಕು ವರ್ಷಗಳಾಗಿದ್ದು, ಮಾನಸಿಕ ಅಸ್ವಸ್ಥ ಮಕ್ಕಳಿಗೆ ಆಶ್ರಯ ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ಪ್ರಸ್ತುತ 22 ಮಕ್ಕಳಿಗೆ ಆಶ್ರಯ ಪಡೆದಿದ್ದು, ಇವರಿಂದ ಯಾವುದೇ ರೀತಿಯ ಶುಲ್ಕ ತೆಗೆದುಕೊಂಡಿಲ್ಲ. ವಿಶೇಷ ಮಕ್ಕಳನ್ನು ಹೆತ್ತವರು ತಾವಾಗಿಯೇ ನೀಡಿದರೇ ಮಾತ್ರ ನಾವು ಸ್ವೀಕರಿಸುತ್ತೇವೆ. ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆದಿಲ್ಲ. ದಾನಿಗಳನ್ನು ಸಂಸ್ಥೆಗೆ ಸಹಕರಿಸಬಹುದು ಎಂದರು. ಶಿಕ್ಷಕಿ ಲಕ್ಷ್ಮಿ ಇದ್ದರು. ದಾನಿಗಳು ಮೊ. 87620 32229 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.