ಮೈಸೂರು

ಬಂದಿದ್ದು ಕೆಲವೇ ಕರೆ, ಸ್ಥಳದಲ್ಲೇ ಪರಿಹಾರಕ್ಕೆ ಯತ್ನ

Published On :

ಮೈಸೂರು: ಮೈಸೂರು ತಾಲೂಕು ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಫೋನ್‌ಇನ್ ಕಾರ್ಯಕ್ರಮಕ್ಕೆ ಬಂದಿದ್ದು ಕಡಿಮೆ ಕರೆಗಳಾದರೂ, ಇಒ ಲಿಂಗರಾಜು ಸ್ಥಳದಲ್ಲಿಯೇ ಪರಿಹಾರ ಹುಡುಕಲು ಪ್ರಯತ್ನಿಸಿ ದೂರುದಾರರಿಗೆ ಭರವಸೆ ನೀಡಿದರು.
ಚಾಮುಂಡಿಬೆಟ್ಟದ ಮಹದೇವಸ್ವಾಮಿ ಎಂಬವರು ಕರೆ ಮಾಡಿ, ಗ್ರಾಪಂನಲ್ಲಿ ಯಾವುದೇ ಕಾರ್ಯಕ್ರಮಗಳು ಅನುಷ್ಠಾನವಾಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ. ಸರಿಯಾದ ಸಮಯಕ್ಕೆ ಗ್ರಾಮಸಭೆಗಳು ನಡೆಯುತ್ತಿಲ್ಲ ಎಂದು ದೂರಿದರು.
ಹಿನಕಲ್ ಗ್ರಾಪಂನಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಡಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಹಿನಕಲ್ ಲೋಕೇಶ್ ದೂರಿದರೆ ಅದೇ ಗ್ರಾಮದ ಎಚ್. ಶಾಂತರಾಜ್ ಕರೆ ಮಾಡಿ, ಹಿನಕಲ್ ಗ್ರಾಪಂನಲ್ಲಿ ಜಂಜರ್ ಪತ್ರ ನೀಡಲು ಆಟ ಆಡಿಸುತ್ತಿದ್ದಾರೆ ಎಂದರು.
ಭುಗತಗಳ್ಳಿಯ ದಸಂಸ ಮುಖಂಡ ಭೀಮರಾಜ್, ಸರ್ವೇ. 170 ಜಮೀನನ್ನು ನಗರಪಾಲಿಕೆ ವ್ಯಾಪ್ತಿಗೆ ಸೇರಿಸಲಾಗಿದೆ. ಆದ್ದರಿಂದ ತಾವು ತಾಪಂ ವ್ಯಾಪ್ತಿಗೆ ಸೇರಿಸಿ ಖಾತೆ ಮಾಡಿಕೊಡುವಂತೆ ಕೋರಿದರು. ತಳೂರು ಗ್ರಾಮದ ಮಹದೇವಸ್ವಾಮಿ, ಖಾತೆಗಾಗಿ ಅರ್ಜಿ ಸಲ್ಲಿಸಿದರೆ ಸ್ಕೆಚ್ ಕಾಪಿ ಕೇಳುತ್ತಾರೆ.
ಸ್ಕೆಚ್ ಕಾಪಿ ಕೊಡುವಂತೆ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದೇನೆ. ತಹಸೀಲ್ದಾರ್ ನಮಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಹಳ್ಳಿಕೆರೆಹುಂಡಿಯ ಕೃಷ್ಣ ಅವರು ತಮ್ಮ ಊರಿನ ಸರ್ಕಾರಿ ಶಾಲೆಯ ಕಾಂಪೌಂಡ್ ಬಿದ್ದು ಹೋಗಿದೆ. ಗ್ರಾಪಂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರು ನೀಡಿದರು. ಹಂಚ್ಯಾ ಗ್ರಾಮದ ರಾಮಚಂದ್ರ ಅವರು ತಮ್ಮ ಗ್ರಾಮದಲ್ಲಿ ಎಂಡಿಎಯಿಂದ ಒಳಚರಂಡಿ ನಿರ್ಮಾಣ ಕಾಮಗಾರಿ ಕೈಗೊಂಡು ಅರ್ಧಕ್ಕೆ ಬಿಟ್ಟಿದ್ದಾರೆ.
ಈ ಬಗ್ಗೆ ವಿಚಾರಿಸಿದರೆ ಕೆಲಸ ಮುಂದುವರೆಸಲು ಅನುದಾನವಿಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. ಈಗ ರಸ್ತೆಯಲ್ಲಿ ಓಡಾಡುಲ ಸಾಧ್ಯವಾಗದೆ, ಒಳಚರಂಡಿ ಕೆಲಸದಿಂದ ಕೊಳಚೆ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿದೆ. ಗಬ್ಬು ವಾಸನೆಯಿಂದ ಗ್ರಾಮಸ್ಥರು ಸಂಕಟ ಅನುಭವಿಸುತ್ತಿದ್ದಾರೆ. ನೀವಾದರು ನಮ್ಮ ಸಮಸ್ಯೆ ಬಗೆಹರಿಸಿಕೊಡಿ ಎಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.