ಮೈಸೂರು

10 ಸಾವಿರ ಲಂಚ; ಗ್ರಾಪಂ ಕಾರ್ಯದರ್ಶಿ 'ಲೋಕಾ' ಬಲೆಗೆ

Published On :

ಮೈಸೂರು: ನಿವೇಶನ ಖಾತೆ ವರ್ಗಾವಣೆಗಾಗಿ ಲಂಚ ಸ್ವೀಕರಿಸುತ್ತಿದ್ದ ಗ್ರಾಪಂ ಕಾರ್ಯದರ್ಶಿ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಹುಣಸೂರು ಪಟ್ಟಣದ ಮಂಜುನಾಥ ಬಡಾವಣೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಹುಣಸೂರು ತಾಲೂಕು ಕರುಣಕುಪ್ಪೆ ಗ್ರಾಪಂ ಕಾರ್ಯದರ್ಶಿ ಸಿ.ಎಸ್. ಶೇಖರ್ ಎಂಬಾತನೇ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದವರು.
ಖಾತೆಗಾಗಿ ಲಂಚ: ಹುಣಸೂರು ತಾಲೂಕು ಹೆಮ್ಮಿಗೆ ಗ್ರಾಮದ ಮಹದೇವೇಗೌಡ ಎಂಬವರ ಪುತ್ರ ದಿನೇಶ್ ಅವರು ಕರುಣಕುಪ್ಪೆ ಗ್ರಾಪಂ ಕಾರ್ಯದರ್ಶಿ ಸಿ.ಎಸ್. ಶೇಖರ್‌ಗೆ 3 ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ತಮ್ಮ ತಾತ ಜವರೇಗೌಡ ಅವರ ಹೆಸರಿನಲ್ಲಿ ದಾಖಲಾಗಿರುವ ಹೆಮ್ಮಿಗೆ ಗ್ರಾಮದ ಜಂಜರ್ ನಂಬರ್ 12ರ ನಿವೇಶನ ಸಂಖ್ಯೆ 13ರ ಖಾತೆಯನ್ನು ತಮ್ಮ ತಂದೆ ಮಹದೇವೇಗೌಡ ಅವರ ಹೆಸರಿಗೆ ವರ್ಗಾವಣೆ ಮಾಡಿಕೊಡಲು ಮನವಿ ಮಾಡಿದ್ದರು. ಈ ಕೆಲಸಕ್ಕಾಗಿ ಕಾರ್ಯದರ್ಶಿ ಸಿ.ಎಸ್. ಶೇಖರ್ ಲಂಚದ ರೂಪದಲ್ಲಿ 12,000 ರು. ಪಡೆದಿದ್ದರೂ ಸಹ ಖಾತಾ ವರ್ಗಾವಣೆಗಾಗಿ ವಿಳಂಬ ಮಾಡುತ್ತಿದ್ದರು. ದಿನೇಶ್ ಅವರು ಮತ್ತೆ ಕಾರ್ಯದರ್ಶಿಯನ್ನು ಭೇಟಿಯಾದಾಗ ಖಾತಾ ವರ್ಗಾವಣೆಗಾಗಿ ಹೆಚ್ಚುವರಿಯಾಗಿ 10,000 ರು. ಲಂಚ ನೀಡುವಂತೆ ಗ್ರಾಪಂ ಕಾರ್ಯದರ್ಶಿ ಸಿ.ಎಸ್. ಶೇಖರ್ ಒತ್ತಾಯಿಸಿದ್ದರು. ಈ ಸಂಬಂಧ ದಿನೇಶ್ ಅವರು ಶುಕ್ರವಾರ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಆರೋಪಿ ಸಿ.ಎಸ್. ಶೇಖರ್ ಹುಣಸೂರು ಪಟ್ಟಣದ ಮಂಜುನಾಥ ಬಡಾವಣೆಯಲ್ಲಿರುವ ವಾಸದ ಮನೆಯಲ್ಲಿ ಶನಿವಾರ ಬೆಳಗ್ಗೆ 10.20ಕ್ಕೆ ದಿನೇಶ್ ಅವರಿಂದ 10,000 ರು. ಲಂಚದ ಹಣವನ್ನು ಪಡೆದಿದ್ದಾರೆ. ಈ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ, ಲಂಚದ ಹಣವನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಲೋಕಾಯುಕ್ತ ಮೈಸೂರು ವಿಭಾಗದ ಎಸ್ಪಿ ಎಸ್.ಎಂ. ಜಗದೀಶ್‌ಪ್ರಸಾದ್, ಡಿವೈಎಸ್ಪಿ ಕೆ.ಬಿ. ಸ್ವಾಮಿಕುಮಾರ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಕೆ.ಟಿ. ಮ್ಯಾಥ್ಯೂಸ್ ಥಾಮಸ್ ಮತ್ತು ಸಿಬ್ಬಂದಿ ಎ.ವಿ. ಕೃಷ್ಣಮೂರ್ತಿ, ರಮೇಶ್, ವೀರಭದ್ರಸ್ವಾಮಿ, ಶಿವಶಂಕರ್, ಎ. ಶಬ್ಬೀರ್ ಅಹಮ್ಮದ್, ಪ್ರದೀಪ್, ದಾಕ್ಷಾಯಿಣಿ, ಸತೀಶ್, ನರಸೇಗೌಡ ದಾಳಿ ತಂಡಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.