ಒಕ್ಕಲಿಗರ ಸಂಘ: ಇಬ್ಬರು ಹಳಬರು, ಹೊಸಬರು ಒಬ್ರು
ಮೈಸೂರು: ರಾಜ್ಯ ಒಕ್ಕಲಿಗರ ಸಂಘಕ್ಕೆ ಮೈಸೂರು- ಚಾಮರಾಜನಗರ ಜಿಲ್ಲೆಗಳಿಂದ ಮೂವರು ನಿರ್ದೇಶಕರ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಹಾಲಿ ನಿರ್ದೇಶಕರಾದ ಡಾ.ಕೆ. ಮಹದೇವ್, ಪಿ. ವೆಂಕಟೇಶ್ ಪಾಪಣ್ಣ ಪುನರಾಯ್ಕೆಯಾಗಿದ್ದು, ಎನ್. ಪ್ರಸನ್ನ ಅವರು ಮೊದಲ ಬಾರಿ ಆಯ್ಕೆಯಾಗಿದ್ದಾರೆ.
ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬೆಳಗ್ಗೆ 9.30ಕ್ಕೆ ಮತ ಎಣಿಕೆ ಕಾರ್ಯ ಆರಂಭವಾಯಿತು. ಜಿಲ್ಲೆಯ 5 ಕೇಂದ್ರಗಳಲ್ಲಿ ನಡೆದ ಮತದಾನದ ಮತ ಪೆಟ್ಟಿಗೆಗಳನ್ನು ಅಭ್ಯರ್ಥಿಗಳು ಹಾಗೂ ಏಜೆಂಟರ ಮುಂದೆ ತೆರೆದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಯಾವ ಗೊಂದಲವಿಲ್ಲದೆ 15 ಟೇಬಲ್ ಮೂಲಕ ಎಣಿಕೆ ಮಾಡಿ ಮಧ್ಯಾಹ್ನ 1.30ರ ವೇಳೆಗೆ ಫಲಿತಾಂಶ ಪ್ರಕಟಿಸಿದರು. ಎನ್. ಪ್ರಸನ್ನ 6,120 ಮತ ಪಡೆದು ಮೊದಲ ಸ್ಥಾನ, ಡಾ.ಕೆ. ಮಹದೇವ್ 5,283 ಮತ ಪಡೆದು ಎರಡನೇ ಸ್ಥಾನ ಹಾಗೂ ಪಿ. ವೆಂಕಟೇಶ್ ಪಾಪಣ್ಣ ಅವರು 4,458 ಮತ ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. ಡಾ.ಕೆ.ಮಹದೇವು ಹಾಗೂ ಪಿ. ವೆಂಕಟೇಶ್ ಅವರು ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದರೆ, ಎನ್. ಪ್ರಸನ್ನ ಅವರು ಇದೇ ಮೊದಲ ಬಾರಿಗೆ ಸ್ಪರ್ಧಿಸಿ ಅತಿಹೆಚ್ಚು ಮತ ಗಳಿಸಿರುವುದು ವಿಶೇಷ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

