ಮೈಸೂರು

ಅರಣ್ಯ ಹಕ್ಕು ಅನುಷ್ಠಾನಗೊಳಿಸಲು ಆಗ್ರಹ

Published On :

ಎಚ್.ಡಿ. ಕೋಟೆ: ಆದಿವಾಸಿ ಅರಣ್ಯ ಹಕ್ಕುಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು ಎಂದು ನಿಸರ್ಗ ಫೌಂಡೇಷನ್ ನಿರ್ದೇಶಕ ನಂಜುಂಡಯ್ಯ, ಎಚ್.ಡಿ. ಕೋಟೆ ತಾಲೂಕು ಆದಿವಾಸಿ ಗ್ರಾಮಸಭಾ ವೇದಿಕೆಯ ಸಂಚಾಲಕಿ ದೇವಮ್ಮ ಆಗ್ರಹಿಸಿದ್ದಾರೆ. ಅದಿವಾಸಿ ಅರಣ್ಯ ಹಕ್ಕು ಕಾಯ್ದೆ ಅನ್ವಯ ಎಚ್.ಡಿ. ಕೋಟೆ ತಾಲೂಕಿನ ಗಡಿಭಾಗದ ದೊಡ್ಡಭೈರನ ಕುಪ್ಪೆ ಗ್ರಾಮಕ್ಕೆ ಕಂದಾಯ ಮತ್ತು ಜಿಲ್ಲಾ ಉಸ್ತುವರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಭೇಟಿ ನೀಡಿ, ಆದಿವಾಸಿಗಳ ಸಮಸ್ಯೆಗಳನ್ನು ಪ್ರತ್ಯೇಕ್ಷವಾಗಿ ಪರಿಶೀಲಿಸಿ ಆಲಿಸಿರುವುದು ಸ್ವಾಗತಾರ್ಹ ವಿಚಾರವಾಗಿದೆ.
ಕಾಡಿನಲ್ಲಿ ತಲೆ ತಲಾಂತರಗಳಿಂದ ವಾಸಿಸುತ್ತಿರುವ ಆದಿವಾಸಿಗಳಿಗೆ ಅರಣ್ಯ ಹಕ್ಕುಗಳ ಮಾನ್ಯತಾ ಕಾನೂನಿನ ಅನ್ವಯ ವಾಸ ಮಾಡುವ ಹಕ್ಕು, ಬೇಸಾಯ ಮಾಡುವ ಹಕ್ಕು ಮತ್ತು ಕಿರುದಿನಸಿ ಸಂಗ್ರಹಿಸುವ ಹಕ್ಕು, ಅಜ್ಜಯ್ಯನ ಕಾಡನ್ನು ಸಂರಕ್ಷಿಸಿ, ಬದುಕುವಂತಹ ಮೂಲಭೂತ ಸೌಕರ್ಯಗಳನ್ನು ಹೊಂದುವ ಹಕ್ಕುಗಳಿವೆ. ಆದರೆ, ಸಚಿವರು ಆದಿವಾಸಿಗಳ ಸಮಸ್ಯೆಗಳನ್ನು ಆಲಿಸುವ ಸಮಯದಲ್ಲಿ ವಾದಕ್ಕಿಳಿದು, ಹುಲಿ ಸಂರಕ್ಷಣೆಯ ಹೆಸರಿನಲ್ಲಿ ಅರಣ್ಯ ಕಾಪಾಡಬೇಕು. ಆದ್ದರಿಂದ ನೀವು ವಾಸ ಮಾಡುವ ಸ್ಥಳದಲ್ಲಿ ಕಿರುದಿನಸಿಯನ್ನು ಸಂಗ್ರಹಿಸಿ, ಬೇಸಾಯ ಮಾಡಿ ಮೂಲ ಸೌಕರ್ಯಗಳನ್ನು ಹೊಂದಿ ಬದುಕುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೆಲವರಿಗೆ ಮಾತ್ರ ಹಕ್ಕುಪತ್ರ: ಅರಣ್ಯ ಹಕ್ಕು ಜಾರಿಯಾಗಿ 7 ವರ್ಷಗಳಾದರೂ ತಾಲೂಕಿನ 119 ಹಾಡಿಗಳ ಪೈಕಿ 14 ಹಾಡಿಗಳಿಗೆ ಮಾತ್ರ ಸಾಮೂದಾಯಿಕ ಹಕ್ಕು ಪತ್ರ ದೊರೆತಿದೆ. 55 ಹಾಡಿಗಳಿಂದ 7650 ಮಂದಿ ಆದಿವಾಸಿಗಳು ವೈಯಕ್ತಿಕ ಹಕ್ಕು ಪತ್ರಕ್ಕಾಗಿ ನಮೂನೆ ಎ ಫಾರಂಗಳನ್ನು ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೆ ಬೆರಳೆಣಿಕೆಯ ಹಕ್ಕು ಪತ್ರವನ್ನೂ ಸಹ ವಿತರಿಸದೇ ಕಡೆಗಣಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.