ಮೈಸೂರು

ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯ ರಕ್ಷಣೆ

Published On :

ಕೆ.ಆರ್. ನಗರ: ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವಯೋವೃದ್ಧೆರೊಬ್ಬರು ಪೊಲೀಸರು ಮತ್ತು ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಬದುಕುಳಿದ ಘಟನೆ ಕೆ.ಆರ್. ನಗರ ತಾಲೂಕಿನ ಚುಂಚನಕಟ್ಟೆ ಸಮೀಪ ಭಾನುವಾರ ಜರುಗಿದೆ.
ಕಟ್ಟೆಕೊಪ್ಪಲು ಗ್ರಾಮದ ಲೇಟ್ ಕಾಡೇಗೌಡರ ಪತ್ನಿ ಸಣ್ಣಕಾಳಮ್ಮ (70) ಬದುಕುಳಿದವರು. ಚುಂಚನಕಟ್ಟೆ ಠಾಣೆಯ ಸಿಬ್ಬಂದಿ ವೆಂಕಟೇಶ್, ಹರೀಶ್, ಹನಸೋಗೆ ಠಾಣೆಯ ಸಿಬ್ಬಂದಿ ಕುಮಾರ್‌ಗೌಡ, ಶಿಕ್ಷಕ ಸಿ.ಎಸ್. ಮಂಜುನಾಥ್ ಮತ್ತು ಸಾರ್ವಜನಿಕರು ಈಕೆಯನ್ನು ಬದುಕುಳಿಸಿದರು. ಬೆಳಗ್ಗೆ 8.45ರ ಸಮಯದಲ್ಲಿ ಚುಂಚನಕಟ್ಟೆ- ಹೊಸೂರು ಮುಖ್ಯ ರಸ್ತೆಯಲ್ಲಿಯೇ ಇರುವ ಚಾಮರಾಜ ಬಲದಂಡೆ ನಾಲೆಯಲ್ಲಿ ಆತ್ಮಹತ್ಯೆಗೆ ಶರಣಾಗಲು ಸಣ್ಣಕಾಳಮ್ಮ ನಾಲೆಗೆ ಹಾರಿದ್ದನ್ನು ಕಂಡ, ಅಲ್ಲಿಯೇ ಸಮೀಪದಲ್ಲಿದ್ದ ಜಾತ್ರೆಯ ಹೊಟೇಲ್‌ನವರು ಮತ್ತು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು.
ತಕ್ಷಣವೆ ಪೊಲೀಸರು ಸ್ಥಳಕ್ಕಾಗಮಿಸಿ ನಾಲೆಯಲ್ಲಿ ತೇಲಿ ಹೋಗುತ್ತಿದ್ದ ಈಕೆಯನ್ನು ಸಾರ್ವಜನಿಕರ ನೆರವಿನಿಂದ ರಕ್ಷಿಸಿದ್ದಾರೆ.
ನಂತರ ಈಕೆಯನ್ನು ನಾಲೆಯ ಸಮೀಪದ ದಡಕ್ಕೆ ತಂದು ಅತಿಯಾಗಿ ನೀರು ಸೇವನೆ ಮಾಡಿದ್ದನ್ನು ಹೊರ ತೆಗೆದು ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್. ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.