ಹದಗೆಟ್ಟಿದ್ದ ರಸ್ತೆ ದುರಸ್ತಿ ಮಾಡಿದ ಗ್ರಾಮಸ್ಥರು
ಕೆ.ಆರ್. ನಗರ: ತಾಲೂಕಿನ ಹೊಸೂರು ವಿನಾಯಕ ಆಟೋ ಚಾಲಕರ ಸಂಘದ ಸದಸ್ಯರು ಹದಗೆಟ್ಟ ರಸ್ತೆಯ ದುರಸ್ತಿಯನ್ನು ತಾವೇ ಮಾಡಿದ್ದಾರೆ.
ಕೆ.ಆರ್. ನಗರ- ರಾಮನಾಥಪುರ ಮುಖ್ಯರಸ್ತೆಯಿಂದ ಹೊಸೂರು ಹೊಸಕೋಟೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟು ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ಮತ್ತು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.
ರಸ್ತೆ ಹಾಳಾಗಿ ಹೋಗುತ್ತಿರುವುದನ್ನು ಕಂಡ ಹೊಸೂರಿನ ವಿನಾಯಕ ಆಟೋ ಚಾಲಕರ ಸಂಘದ ಅಧ್ಯಕ್ಷ ಎಚ್.ಟಿ. ಪ್ರಮೋದ್, ಉಪಾಧ್ಯಕ್ಷ ಮಂಜು, ಖಜಾಂಜಿ ಸಂತೋಷ್, ಕಾರ್ಯದರ್ಶಿ ಜವೀದ್ಪಾಷ ನೇತೃತ್ವದಲ್ಲಿ ಸಂಘದ ಸದಸ್ಯರು ಸುಮಾರು 8 ಕಿ.ಮೀ. ದೂರವಿರುವ ಈ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ಕಲ್ಲು ಮತ್ತು ಮಣ್ಣನ್ನು ಹಾಕುವ ಮೂಲಕ ಹದಗೆಟ್ಟಿರುವ ರಸ್ತೆಗೆ ತಾತ್ಕಾಲಿಕ ತೇಪೆಯಾಕುವ ಕೆಲಸ ಮಾಡಿದರು. ಸಂಘದ ಸದಸ್ಯರಾದ ನವೀನ, ಮಧು, ರಾಮ, ರವಿ, ಲೋಕೇಶ್, ಮಂಜು, ಶಾಹಿದ್, ಮಂಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

