ಮೈಸೂರು

ಹೊಸಅಗ್ರಹಾರದಲ್ಲಿ ಒತ್ತುವರಿ ತೆರವು

Published On :

ಕ.ಪ್ರ.ವಾರ್ತೆ ,  ಭೇರ್ಯ ,  ಜ. 7
ರೇಲ್ವೆ ಗೇಟ್‌ನಿಂದ ದೊಡ್ಡವಡ್ಡರಗುಡಿ ಗ್ರಾಮಕ್ಕೆ ಹೋಗುವ ಸಂಪರ್ಕ ರಸ್ತೆಯಲ್ಲಿ ಅನಧಿಕೃತವಾಗಿ ತೋಟ ಮಾಡಿಕೊಂಡಿದ್ದನ್ನು ತಹಸೀಲ್ದಾರ್ ವೀಣಾಕುಮಾರ್ ತಮ್ಮ ಸಿಬ್ಬಂದಿ ಮೂಲಕ ಕಾರ್ಯಾಚರಣೆ ನಡೆಸಿ, ತೆರವುಗೊಳಿಸಿದ ಘಟನೆ ಹೊಸ ಅಗ್ರಹಾರ ಗ್ರಾಮದಲ್ಲಿ ಜರುಗಿದೆ.್ಛ
ಕಳೆದ 35 ವರ್ಷಗಳಿಂದ ಈ ಭಾಗದ ರೈತರು ತಮ್ಮ ಜಮೀನಿಗೆ ಎತ್ತಿನ ಗಾಡಿಗಳಲ್ಲಿ ಹೋಗಲು ರಸ್ತೆ ಇಲ್ಲದೆ ಪರದಾಡುವ ಪರಿಸ್ಥಿತಿ ಇತ್ತು. ರಸ್ತೆಯನ್ನು ಗ್ರಾಮದ ವೆಂಕಟರಾಮೇಗೌಡ ಎಂಬವರು ಅಕ್ರಮವಾಗಿ ತೋಟ ಮಾಡಿಕೊಂಡಿರುವ ಬಗ್ಗೆ 1979ರಲ್ಲಿ ನ್ಯಾಯಾಲಯದ ಮೊರೆ ಹೋಗಿ ನಂತರ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಅಕ್ರಮವಾಗಿ ಮಾಡಿಕೊಂಡಿರುವ ತೋಟವನ್ನು ತೆರವುಗೊಳಿಸಿ ರಸ್ತೆ ನಿರ್ಮಿಸಿ ಎಂದು ಕೋರಲಾಗಿತ್ತು. ನ್ಯಾಯಾಲಯ ಕೂಡ ಪೂರಕ ಆದೇಶ ನೀಡಿತ್ತು.
ತಹಸೀಲ್ದಾರ್ ಗಮನ ಹರಿಸದೆ ಇದ್ದಾಗ ಗ್ರಾಮದ ಮಾಜಿ ಸೈನಿಕ ಹವಾಲ್ದಾರ್ ರಾಜೇಗೌಡ ಎಂಬವರು ಜಿಲ್ಲಾಧಿಕಾರಿಗೆ ಪತ್ರ ಬರೆದು, ನಂತರ 2011ರಲ್ಲಿ ಶಾಸಕ ಸಾ.ರಾ. ಮಹೇಶ್ ಅವರ ಅನುದಾನದಲ್ಲಿ 3.50 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲು ಸರ್ಕಾರದಿಂದ ಕಾಮಗಾರಿ ಮಂಜೂರು ಆಗಿತ್ತು. ತೋಟವನ್ನು ತೆರವುಗೊಳಿಸದೆ ಇದ್ದ ಕಾರಣ ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿತ್ತು.
ತಾಲೂಕಿನ ತಹಸೀಲ್ದಾರ್ ವೀಣಾ ಕುಮಾರ್ ಮತ್ತು ಉಪ ತಹಸೀಲ್ದಾರ್ ಯಧುಗಿರೀಶ್ ಅವರ ತಂಡ ದಿಢೀರನೇ ಜೆಸಿಬಿಗಳನ್ನು ತಂದು ತೋಟವನ್ನು ತೆರವುಗೊಳಿಸಿದರು.
ರೈತರಿಗಾಗಿ ತೆರವು: ತಹಸೀಲ್ದಾರ್ ವೀಣಾ ಕುಮಾರ್ ಮಾತನಾಡಿ, ಬಿ ಖರಾಬ್‌ನಲ್ಲಿ 5 ಗುಂಟೆ ಸರ್ಕಾರದ ರಸ್ತೆಯನ್ನು ಅನಧಿಕೃತವಾಗಿ ತೋಟ ಮಾಡಿಕೊಂಡಿದ್ದು, ಹಲವಾರು ಬಾರಿ ತೆರವುಗೊಳಿಸಿ ಎಂದು ತಿಳಿಸಿದ್ದರು. ತೆರವು ಮಾಡದಿದ್ದಾಗ, ಈ ಭಾಗದ ರೈತರ ಅನುಕೂಲಕ್ಕಾಗಿ ತೆರವುಗೊಳಿಸಿದ್ದೇವೆ ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಆರ್‌ಐ ಜಯಪ್ಪ, ಗ್ರಾಮ ಲೆಕ್ಕಿಗ ರವೀಂದ್ರ, ಸರ್ವೆಯರ್ ಗೋಪಾಲ್, ಗ್ರಾಪಂ ಸದಸ್ಯ ಹವಲ್ದಾರ್ ರಾಜೇಗೌಡ, ಗ್ರಾಮಸ್ಥರಾದ ಜಲೇಂದ್ರ, ರೈತ ಮುಖಂಡ ಸತ್ಯಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.