ಮೈಸೂರು

ಸಾರಿಗೆ ಸಚಿವರ ಭೇಟಿಗೆ ನಿವೃತ್ತ ನೌಕರರ ನಿರ್ಧಾರ

Published On :

ಮೈಸೂರು: ಕೆಎಸ್‌ಆರ್‌ಟಿಸಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ಸಂಪೂರ್ಣ ಉಚಿತ ಪಾಸ್ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸಾರಿಗೆ ಸಚಿವ ಆರ್. ರಾಮಲಿಂಗರೆಡ್ಡಿ ಗಮನಕ್ಕೆ ತರಲು ಸಾರಿಗೆ ಸಂಸ್ಥೆಗಳ ನೌಕರರ ಮತ್ತು ನಿವೃತ್ತ ನೌಕರರ ಸಂಘಗಳ ಕ್ಷೇಮಾಭಿವೃದ್ಧಿ ಮಹಾಮಂಡಲ ನಿರ್ಧರಿಸಿದೆ.
ಈ ಸಂಬಂಧ ಜ.17 ರಂದು ಸಚಿವರನ್ನು ಭೇಟಿ ಮಾಡಿ ಬಹುಕಾಲದಿಂದ ಇತ್ಯರ್ಥವಾಗದೆ ಉಳಿದಿರುವ 5.5 ಕೋಟಿ ಕಾರ್ಮಿಕರು ಹಾಗೂ ನಿವೃತ್ತ ನೌಕರರಿಗೆ ಪಿಂಚಣಿ ವಿಚಾರವನ್ನೂ ಅವರ ಗಮನಕ್ಕೆ ತರಲಾಗುವುದು ಎಂದು ಮಹಾಮಂಡಲದ ಗೌರವಾಧ್ಯಕ್ಷ ಆರ್.ಪಿ. ಕೋಪರ್ಡೆ ಶನಿವಾರ ನಗರದ ಸಹಕಾರ ಭವನದಲ್ಲಿ ನಡೆದ ಸಭೆಯಲ್ಲಿ ತಿಳಿಸಿದರು.
ನಿವೃತ್ತ ನೌಕರರಿಗೆ ತಿಂಗಳಿಗೆ ಕನಿಷ್ಠ 7500 ಪಿಂಚಣಿಯೊಂದಿಗೆ ತುಟ್ಟಿ ಭತ್ಯೆ ಸೇರಿಸಿ ನೀಡುವುದು, ಈಗಿರುವ 6500 ವೇತನ ಮಿತಿ ತೆಗೆದುಹಾಕುವುದು, 2003 ರಿಂದ ಇಲ್ಲಿಯವರೆಗೆ ಲೆಕ್ಕ ಮಾಡಿ ಪಿಂಚಣಿ ಹೆಚ್ಚಳ ಡಿಎ ಮತ್ತು ವ್ಹೇಟೇಜ್ ವ್ಯತ್ಯಾಸವನ್ನು ನೀಡುವುದು, ಕಾರ್ಖಾನೆ, ಬ್ಯಾಂಕ್‌ಗೆ ಬಂದ 50 ವರ್ಷದ ಹಣವನ್ನು ಕಾರ್ಮಿಕರಿಗೆ ನೀಡುವುದು, ಪಿಂಚಣಿ ಅರ್ಹತೆಗೆ ಪರಿಗಣಿಸುವಾಗ ಖಾಸಗಿಯಲ್ಲಿ 20 ವರ್ಷ ಹಾಗೂ ಸಹಕಾರಿಯಲ್ಲಿ 50 ವರ್ಷ ಕಾಮಗಾರಿಯನ್ನು ರದ್ದುಗೊಳಿಸುವುದು, ಪಿಎಫ್‌ಆರ್‌ಡಿಎ ರದ್ದುಗೊಳಿಸುವ ಬೇಡಿಕೆಗಳನ್ನು ಒತ್ತಾಯಿಸಲಾಗುವುದು ಎಂದರು.
ರಾಜ್ಯಸಭೆಯಲ್ಲಿ ಪ್ರಕಾಶ ಜಾವಡೇಕರ್  ಸಲ್ಲಿಸಿದ ಕಾರ್ಮಿಕ ಪಿಂಚಣಿ ಯೋಜನೆ ವರದಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು. ಸಮರ್ಪಕ ಪಿಂಚಣಿ ನೀಡಿ ಸಾಮಾಜಿಕ ಭದ್ರತೆ ಒದಗಿಸುವುದು, 1971ರಲ್ಲಿ ಕುಟುಂಬ ಪಿಂಚಣಿ ವಿಲೀನಗೊಂಡ ನಂತರ ಹಣಕಾಸು ಸಮೇತ ಕಾರ್ಮಿಕ ಪಿಂಚಣಿ ಯೋಜನೆಯಲ್ಲಿ ವರ್ಗಾಯಿಸಲ್ಪಟ್ಟಿತ್ತು. ಇದರನ್ವಯ ದೇಶದ ಎಲ್ಲ ಕಾರ್ಮಿಕರು 6500 ಕ್ಕಿಂತ ಕಡಿಮೆ ವೇತನ ಪಡೆಯುತ್ತಿದ್ದಲ್ಲಿ ಈ ಯೋಜನೆಗೆ ಒಳಪಡುತ್ತಾರೆ. ತಿಂಗಳಿಗೆ 3 ಸಾವಿರ ಪಿಂಚಣಿ ಸಿಗಬೇಕು. ಸರ್ಕಾರ ಈವರೆಗೆ ಹಿಂದಕ್ಕೆ ಪಡೆದ ಕಮ್ಯುಟೇಷನ್ ಮತ್ತು ವಿತ್‌ಡ್ರಾವಲ್ ಸವಲತ್ತುಗಳನ್ನು ಪುನಃ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಮಹಾಜನ, ಭಕ್ತವತ್ಸಲ, ರಾಮಭದ್ರಯ್ಯ, ನಿಂಗೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.