ಹದಿಹರೆಯದ ಸಮಸ್ಯೆ ಬಗಹರಿಸಿಕೊಳ್ಳಲು ಸಲಹೆ
ಕ.ಪ್ರ.ವಾರ್ತೆ , ಹುಣಸೂರು , ಜ.13
ಹದಿಹರೆಯದ ವಯಸ್ಸಿನಲ್ಲಿ ಹೆಣ್ಣು ಮಕ್ಕಳು ಎದುರಿಸುವ ಹಲವು ಗೊಂದಲಗಳನ್ನು ವೈದ್ಯರಲ್ಲಿ ನೇರವಾಗಿ ತಿಳಿಸಿ ಪರಿಹರಿಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದು ಡಾ.ಮಣಿಕರ್ಣಿಕ ಕರೆ ನೀಡಿದರು.
ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆ, ತಾಲೂಕು ಆರೋಗ್ಯ ಇಲಾಖೆ ಹಾಗೂ ಮೈಸೂರಿನ ಯೂತ್ಸ್ ಫಾರ್ ಆಲ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಹದಿಹರೆಯದ ವಯಸ್ಸಿನ ಸಮಸ್ಯೆಗಳು ಮತ್ತು ಪರಿಹಾರ ಕುರಿತಾದ ಉಚಿತ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಪ್ರಮುಖವಾಗಿ ಈ ವಯೋವಾನದ ಅವಧಿ ಹೆಣ್ಣು ಮಕ್ಕಳ ಜೀವನದ ಮಹತ್ವದ ಘಟ್ಟವಾಗಿದೆ. ದೈಹಿಕ ಹಾಗೂ ಮಾನಸಿಕವಾಗಿ ಮಹತ್ತರ ಬದಲಾವಣೆ ಹೊಂದುವ ಈ ಸಂಧಿಕಾಲದಲ್ಲಿ ಹೆಣ್ಣು ಮಗಳು ಅತ್ಯಂತ ಸೂಕ್ಷ್ಮಮತಿ ಆಗಿರುತ್ತಾಳೆ. ತನ್ನ ದೇಹ ಹಾಗೂ ಮನದಲ್ಲಾಗುತ್ತಿರುವ ಗೊಂದಲಗಳ ಪರಿಹಾರವನ್ನು ತಾನೆ ಹುಡುಕಿಕೊಳ್ಳಬೇಕು. ಸಂಕೋಚ ತೊರೆದು ಪೋಷಕರು ಮತ್ತು ಆಪ್ತಸ್ನೇಹಿತರಲ್ಲಿ ಹಾಗೂ ಪ್ರಮುಖವಾಗಿ ವೈದ್ಯರಲ್ಲಿ ಮನದಾಳವನ್ನು ತಿಳಿಸಿ ಸೂಕ್ತ ಪರಿಹಾರಕ್ಕೆ ಯತ್ನಿಸಿದಲ್ಲಿ ಮಾತ್ರ ಯಶಸ್ಸು ಸಾಧ್ಯ ಎಂದರು.
ತಾಲೂಕು ಆರೋಗ್ಯಾಧಿಕಾರಿ ಮಹದೇವಪ್ಪ, ಅರ್ಬನ್ ಫ್ಯಾಮಿಲಿ ವೆಲ್‌ಫೇರ್ ಸೆಂಟರ್‌ನ ಡಾ. ಶೈಲಜಾ, ಪುರಸಭಾ ಸದಸ್ಯೆ ಸುನೀತ ಜಯರಾಂ, ರೋಟರಿ ವಿದ್ಯಾಸಂಸ್ಥೆ ಅಧ್ಯಕ್ಷ ಆರ್. ಆನಂದ್ ಮಾತನಾಡಿದರು. ಕಾರ್ಯದರ್ಶಿ ಹನಗೋಡು ನಟರಾಜ್, ಕಾಲೇಜಿನ ಅಧ್ಯಾಪಕ ರವೀಂದ್ರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

