ಮೈಸೂರು

ಜಾತಿ ಸಮಾವೇಶಗಳಲ್ಲಿ ಶಕ್ತಿ ಪ್ರದರ್ಶನ ಬೇಡ

Published On :

ಕೆ.ಆರ್. ನಗರ: ಜಾತಿ ಜನಾಂಗದ ಸಭೆ, ಸಮಾವೇಶಗಳನ್ನು ಸಂಘಟನೆಗಳಿಗೆ ಬಳಸಿಕೊಳ್ಳಬೇಕೆ ಹೊರತು ಶಕ್ತಿ ಪ್ರದರ್ಶನಕ್ಕಲ್ಲ ಎಂದು ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಮಿತ್ ವಿ. ದೇವರಹಟ್ಟಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾ. ಭಗೀರಥ ಉಪ್ಪಾರರ ಸರ್ಕಾರಿ ನೌಕರರ ಸಂಘದ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮರಸ್ಯ ಬದುಕಿನ ಮುಂದೆ ಎಲ್ಲವೂ ಗೌಣವಾಗಿದ್ದು, ಸಮಾಜ ಸಂಪೂರ್ಣ ರಾಜಕೀಯದಿಂದ ಹೊರತಾಗಿ ಶೈಕ್ಷಣಿಕವಾಗಿ ಸಾಧನೆ ಮಾಡುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.
ವಾಣಿಜ್ಯ ಇಲಾಖೆಯ ಬೆಂಗಳೂರು ಕೇಂದ್ರ ಕಚೇರಿ ಜಂಟಿ ಆಯುಕ್ತ ಜಗನ್ನಾಥ್ ಸಾಗರ್ ಮಾತನಾಡಿ, ರಾಜ್ಯದಲ್ಲಿ ಉಪ್ಪಾರ ಸಮಾಜ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಶೇ.46 ಮಂದಿ ಮಾತ್ರ ಸಾಕ್ಷರರಿದ್ದಾರೆ. ಶಿಕ್ಷಿತರು ಸಮಾಜದ ಹಿಂದುಳಿದವರನ್ನು ಮೇಲೆತ್ತಲು ಕಂಕಣಬದ್ಧರಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸಂಘದ ತಾಲೂಕು ಅಧ್ಯಕ್ಷ ಎಚ್.ಡಿ. ಪಾಂಡು, ಉಪಾಧ್ಯಕ್ಷ ಎಂ.ಎ. ಮಂಜುನಾಥ್, ಕೆ. ಸತೀಶ್, ಪ್ರಧಾನ ಕಾರ್ಯದರ್ಶಿ ಕೆ.ಟಿ. ಮಾಸ್ತೀಗೌಡ, ಖಜಾಂಚಿ ಸುಂದರ್‌ಕುಮಾರ್, ಸೋಮಣ್ಣ, ಜಿಲ್ಲಾಧ್ಯಕ್ಷ ಲಿಂಗಣ್ಣ, ನಿರ್ದೇಶಕ ಭಾಸ್ಕರ್, ತಿಮ್ಮಪ್ಪ, ಕೆ.ಪಿ. ದೇವರಾಜು, ತಿಪ್ಪೂರು ರಾಜಣ್ಣ, ಪುರಸಭಾ ಮಾಜಿ ಸದಸ್ಯ ಎಸ್. ಯೋಗಾನಂದ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಬಿ. ಅಶೋಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.