ಮೈಸೂರು

18 ಮಂದಿಗೆ ಮೈಸೂರು ವಿವಿ ಪಿಎಚ್.ಡಿ ಪದವಿ

Published On :

ಕ.ಪ್ರ.ವಾರ್ತೆ , ಮೈಸೂರು , ಜ. 15
ಡಾ. ಕೃಷ್ಣಮೂರ್ತಿ ಅವರ ಮಾರ್ಗದರ್ಶನಲ್ಲಿ ಸಂಶೋಧನೆ ನಡೆಸಿದ ಜಾವೈದ್ ಅಹ್ಮದ್ ತಳಿ ಅವರಿಗೆ ಭೂಗೋಳಶಾಸ್ತ್ರ, ಡಾ.ಅಶೋಕ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಸಯ್ಯದ್ ಮಾರ್ಟಿಜ್ ಇಸಾಗಿ ಅವರಿಗೆ ಅಪರಾಧಶಾಸ್ತ್ರ, ಡಾ.ಅಶೋಕ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಆರ್ಸಲಾನ್ ಕಾನ್‌ಮೊಮ್ಮಡಿ ಒಟಸ್‌ಗರಾ ಅವರಿಗೆ ಅಪರಾಧಶಾಸ್ತ್ರ, ಡಾ.ಪ್ರಮೀಳಾ ಕುನ್ನೂರು ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ವೀರೇಶ ಹಿರೇಮಠ ಅವರಿಗೆ ಪತ್ರಿಕೋದ್ಯಮ ವಿಷಯದಲ್ಲಿ ಮೈಸೂರು ವಿವಿ ಪಿಎಚ್.ಡಿ ಪದವಿ ನೀಡಿದೆ.
ಡಾ.ಗೂಟಿ ದಿವಂಜಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಕೆ.ವಿದ್ಯಾಲಕ್ಷ್ಮಿ ಅವರಿಗೆ ಸಂಖ್ಯಾಶಾಸ್ತ್ರ, ಡಾ.ಎಚ್.ಎನ್. ಯಜುರ್ವೇದಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎಂ.ದೇವಕಿ ಅವರಿಗೆ ಪ್ರಾಣಿಶಾಸ್ತ್ರ, ಪ್ರೊ.ಜಿ.ಟಿ. ರಾಮಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಟಿ. ಇಂದಿರಾ ಅವರಿಗೆ ರಾಜ್ಯಶಾಸ್ತ್ರ, ಡಾ.ಎ.ಟಿ. ಈಶ್ವರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎ.ಎಚ್. ಶ್ರೀನಿವಾಸ ಅವರಿಗೆ ಗಣಿತಶಾಸ್ತ್ರ, ಡಾ.ಡಿ.ಎಸ್. ಲೀಲಾವತಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಬಿ.ಕೆ. ಲೋಕೇಶ ಅವರಿಗೆ ಅರ್ಥಶಾಸ್ತ್ರ, ಡಾ.ಕೆ.ಇ. ಶ್ರೀರಾಮಪ್ಪ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ನಾಗೇಶ್ ಅವರಿಗೆ ಅರ್ಥಶಾಸ್ತ್ರ, ಡಾ.ಕೆ.ಬಿ. ಪ್ರವೀಣ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಹಮೀದ್ ಮೊಹಮ್ಮದ್ ಅಜಿಮಿ ಅವರಿಗೆ ಶಿಕ್ಷಣ ವಿಷಯದಲ್ಲಿ ಮೈಸೂರು ವಿವಿ ಪಿಎಚ್.ಡಿ ಪದವಿ ನೀಡಿದೆ.
ಡಾ.ಬಿ.ಎಂ. ವೆಂಕಟೇಶ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಚಂದ್ರಶೇಖರ್ ಅವರಿಗೆ ರಾಸಾಯನಶಾಸ್ತ್ರ, ಡಾ.ಕೆ.ಎನ್. ಅಮೃತೇಶ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎಂ. ಅವರಿಗೆ ಸಸ್ಯಶಾಸ್ತ್ರ, ಡಾ.ಎಲ್.ಜಿ. ಶಶಿಧರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಆರ್. ಚಂದ್ರಶೇಖರ್ ಅವರಿಗೆ ಹಿಂದಿ, ಡಾ.ಎಸ್.ಎಲ್. ಬೆಳಗಳಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎ.ಎಚ್. ರಾಜಣ್ಣ ಅವರಿಗೆ ಪರಿಸರ ವಿಜ್ಞಾನ, ಡಾ.ಎಸ್. ಉಮೇಶ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಶಿವಲಿಂಗಯ್ಯ ಅವರಿಗೆ ಅನ್ವಯಿಕ ಸಸ್ಯಶಾಸ್ತ್ರ ವಿಷಯದಲ್ಲಿ ಮೈಸೂರು ವಿವಿ ಪಿಎಚ್.ಡಿ ಪದವಿ ನೀಡಿದೆ.
ಡಾ.ಎಚ್.ಕೆ. ಶಿವಾನಂದ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಜಿ. ರತ್ನಾಕರ್ ಅವರಿಗೆ ಅನಂತಪುರಂನ ಜೆಎನ್‌ಟಿಯು ವಿವಿಯು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯಕ್ಕೆ ಪಿಎಚ್.ಡಿ ಪದವಿ ನೀಡಿದೆ.
ಡಾ.ಎನ್. ನಾಗೇಶ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎಸ್‌ಜೆಸಿಇ ಕಾಲೇಜಿನ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರಾಧ್ಯಾಪಕ ಎಸ್. ಸೋಮಶೇಖರ್ ಅವರಿಗೆ ಕುವೆಂಪು ವಿವಿಯು ಇಂಡಸ್ಟ್ರಿಯಲ್ ಆ್ಯಂಡ್ ಪ್ರೊಡಕ್ಷನ್ ಎಂಜಿನಿಯರಿಂಗ್ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.