ಮರಳು ಲಾರಿ ಮೇಲೆ ಜಿಪಿಎಸ್ ಹದ್ದಿನ ಕಣ್ಣು
ಮೈಸೂರು,: ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕಲು ನಿರ್ಧರಿಸಿರುವ ಪೊಲೀಸರು ಮರಳು ಯಾರ್ಡ್ಗಳು ಇರುವ ಪ್ರದೇಶದಲ್ಲಿ ಜಿಪಿಎಸ್ ಅಳವಡಿಸಲು ತೀರ್ಮಾನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗುರುವಾರ ಜಿಪಿಎಸ್ ಅಳವಡಿಕೆಗೆ ಕಡೆ ದಿನವಾಗಿದೆ. ಶುಕ್ರವಾರದಿಂದ ಜಿಪಿಎಸ್ ಅಳವಡಿಸಿದ ಲಾರಿಗಳಿಗೆ ಆನ್ಲೈನ್ ಮೂಲಕ ರಹದಾರಿ ನೀಡಲಾಗುತ್ತದೆ. ಯಾರು ಜಿಪಿಎಸ್ ಅಳವಡಿಸಿಕೊಂಡು ಆಫ್ ಮಾಡಿ ವಾಹನ ಚಲಾಯಿಸುತ್ತಾರೋ ಮತ್ತು ರೀಚಾರ್ಜ್ ಮಾಡಿಸಿಕೊಂಡಿಲ್ಲವೋ ಅವರಿಗೆ ಗುರುವಾರವೆ ಕಡೆಯ ದಿನವಾಗಿತ್ತು.
ಜಿಪಿಎಸ್ ತಂತ್ರಜ್ಞಾನವನ್ನು ಟಿ.ನರಸೀಪುರ ಮತ್ತು ನಂಜನಗೂಡು ತಾಲೂಕು ವ್ಯಾಪ್ತಿಯ ಮರಳು ಯಾರ್ಡ್ಗಳು ಇರುವ ಕಡೆಗಳಲ್ಲಿ ಅಳವಡಿಸಲಾಗುತ್ತಿದೆ. ಇದರಿಂದ ಯಾವ ಲಾರಿ ಯಾರ್ಡ್ ಪ್ರವೇಶಿಸಿ ಮರಳು ತರುತ್ತಿದೆ. ಯಾವ ಲಾರಿ ಎಷ್ಟು ಬಾರಿ ಸಂಚರಿಸಿದೆ ಎಂಬೆಲ್ಲಾ ಮಾಹಿತಿ ಲಭ್ಯವಾಗುತ್ತದೆ. ಒಂದು ರಹದಾರಿ ಉಳ್ಳ ಲಾರಿ ದಿನದಲ್ಲಿ ನಾಲ್ಕು ಬಾರಿ ಮಾತ್ರ ಮರಳು ಸಾಗಿಸಬಹುದು. ಅದಕ್ಕೂ ಹೆಚ್ಚು ಬಾರಿ ಕಾಣಿಸಿಕೊಂಡರೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೊರಗುತ್ತಿಗೆ ಆಧಾರದ ಮೇಲೆ ತಂತ್ರಜ್ಞಾರೊಬ್ಬರನ್ನು ನೇಮಿಸಿಕೊಂಡು ತಮ್ಮ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ತೆರೆದು ಮರಳು ಲಾರಿಯ ಕಾರ್ಯಾಚರಣೆ ವೀಕ್ಷಿಸಲಾಗುವುದು. ರಾತ್ರಿ ವೇಳೆ ಅಕ್ರಮವಾಗಿ ಜಿಪಿಎಸ್ ಅಥವಾ ರಹದಾರಿ ಇಲ್ಲದೆ ಮರಳು ಸಾಗಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ಆರೇಳು ತಿಂಗಳಿಂದ ಸುಮಾರು 350 ಲಾರಿ ವಶಕ್ಕೆ ಪಡೆದು, 750 ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

