ಮೈಸೂರು

ಹೋರಾಟಗಾರರ ವಿರುದ್ಧ ಹೂಡಿದ್ದ ಮೊಕದ್ದಮೆ ವಾಪಸ್

Published On :

ಮೈಸೂರು: ಕನ್ನಡಪರ ಹೋರಾಟಗಾರರ ವಿರುದ್ಧ ಹೂಡಿದ್ದ ಮೊಕದ್ದಮೆ ವಾಪಸ್ ಪಡೆಯಲು ಸಿಎಫ್‌ಟಿಆರ್‌ಐ ನಿರ್ದೇಶಕ ಪ್ರೊ.ರಾಮ್ ರಾಜಶೇಖರನ್ ನಿರ್ಧರಿಸಿದ್ದಾರೆ.
ಸಿಎಸ್‌ಐಆರ್ - ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ಅಸೆಂಬ್ಲಿ ಹಾಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಕನ್ನಡ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದ ವೇಳೆ ಈ ಕುರಿತ ಲಿಖಿತ ಹೇಳಿಕೆಯನ್ನು ಅವರು ನೀಡಿದರು.
ಸಂವಿಧಾನತ್ಮಕ ತ್ರಿಭಾಷಾ ಸೂತ್ರ ಜಾರಿ, ಸಂಸ್ಥೆಯ ಎಲ್ಲಾ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯ ಸ್ಥಾನ, ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ, ಸಂಸ್ಥೆಯ ತಂತ್ರಜ್ಞಾನ ಮತ್ತು ಆಹಾರ ವಿಜ್ಞಾನ ಕನ್ನಡದ ಮಾಸ ಹಾಗೂ ತ್ರೈಮಾಸಿಕ ಪ್ರಕಟಣೆ, ಸಂಸ್ಥೆಯಲ್ಲಿ ಹಿಂದಿಗೆ ಸಮಾನಾಂತರವಾಗಿ ಕನ್ನಡಕ್ಕೆ ಸ್ಥಾನಮಾನ, ಕನ್ನಡ ಸಹೃದಯ ಬಳಗಕ್ಕೆ ಸುಸಜ್ಜಿತವಾದ ಕಚೇರಿ, ಕನ್ನಡದ ಎಲ್ಲಾ ಕಾರ್ಯಕ್ರಮದಲ್ಲಿ ಸಂಸ್ಥೆ ಭಾಗವಹಿಸುವಿಕೆ ಮತ್ತು ಒತ್ತಾಸೆ, ಕನ್ನಡೇತರ ಬಂಧುಗಳು ಕನ್ನಡ ಕಲಿಯಲು ಪ್ರೇರಣೆ ಸೇರಿದಂತೆ 8 ಬೇಡಿಕೆಗಳನ್ನು ಈಡೇರಿಸಲು ಅವರು ಒಪ್ಪಿದ್ದಾರೆ. ಒಪ್ಪಿಗೆ ಪತ್ರಕ್ಕೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಚಂದ್ರಶೇಖರ್ ಹಾಗೂ ನಿರ್ದೇಶಕ ಪ್ರೊ.ರಾಮ್ ರಾಜಶೇಖರನ್ ಅವರು ಸಹಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪರಿಷತ್ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪ್ರಧಾನ ಕಾರ್ಯದರ್ಶಿಗಳಾದ ಡಾ.ವೈ.ಡಿ. ರಾಜಣ್ಣ, ಕೆ.ಎಸ್. ಶಿವರಾಂ, ಖಜಾಂಚಿ ರಾಜಶೇಖರ ಕದಂಬ, ಸಾಹಿತಿಗಳಾದ ಪ್ರೊ.ಗುಂಡಣ್ಣ, ಜಯಪ್ಪ ಹೊನ್ನಾಳಿ, ಶ್ರೀಮತಿ ಹರಿಪ್ರಸಾದ್ ಹಾಗೂ ಎನ್. ಪ್ರಸನ್ನ ಇದ್ದರು.
ದಿನದರ್ಶಿಕೆ ಬಿಡುಗಡೆ: ಸಿಎಫ್‌ಟಿಆರ್‌ಐ ಹೊರತಂದಿರುವ ಕನ್ನಡ ಅಂಕಿಗಳ ದಿನದರ್ಶಿಕೆಯನ್ನು ಡಿಎಫ್‌ಆರ್‌ಎಲ್ ಹೆಚ್ಚುವರಿ ನಿರ್ದೇಶಕ ಡಾ.ಕೆ. ರಾಧಾಕೃಷ್ಣ ಬಿಡುಗಡೆಗೊಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆ ನಿರ್ದೇಶಕ ಪ್ರೊ.ರಾಮ್ ರಾಜಶೇಖರನ್, ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಮಾತು ಆರಂಭಿಸಿ, ದಯವಿಟ್ಟು ಕ್ಷಮಿಸಿ ಮುಂದಿನ ಕ್ಯಾಲೆಂಡರ್ ಬಿಡುಗಡೆ ವೇಳೆಗೆ ಕನ್ನಡದಲ್ಲೇ ಮಾತನಾಡುತ್ತೇನೆ ಎಂದು ಇಂಗ್ಲಿಷ್‌ನಲ್ಲಿ ತಮ್ಮ ಅಭಿಪ್ರಾಯ ತಿಳಿಸಿ, ಕನ್ನಡದಲ್ಲಿ ಧನ್ಯವಾದೆಗಳು ಎಂದು ಕನ್ನಡದ ನುಡಿಯೊಂದಿಗೆ ಭಾಷಣ ಮುಗಿಸಿದರು. ಬಳಗದ ಕಾರ್ಯದರ್ಶಿ ರಂಗಧಾಮಯ್ಯ ಸ್ವಾಗತಿಸಿದರು. ಕೊಳ್ಳೇಗಾಲ ಶರ್ಮ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.