ಮೈಸೂರು

ಶ್ರೀರಂಗಪಟ್ಟಣಕ್ಕೆ ವೋಲ್ವೋ ಬಸ್ ಸೇವೆ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಜ. 17
ಜೆ.ಪಿ. ನಗರ ಹಾಗೂ ಶ್ರೀರಂಗಪಟ್ಟಣದ ನಡುವೆ ನಗರ ಸಾರಿಗೆ ವೋಲ್ವೋ ಬಸ್ ಸೇವೆಗೆ ಕೃಷ್ಣರಾಜ ಶಾಸಕ ಎಂ.ಕೆ. ಸೋಮಶೇಖರ್ ಶುಕ್ರವಾರ ಚಾಲನೆ ನೀಡಿದರು.
ಮೈಸೂರು ನಗರ ಸಾರಿಗೆ ವಿಭಾಗದ ವತಿಯಿಂದ ಜೆ.ಪಿ. ನಗರದ ಗೊಬ್ಬಳ್ಳಿಮರದ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಹಸಿರು ಬಾವುಟ ಪ್ರದರ್ಶಿಸಿ ಬಸ್ ಸೇವೆಗೆ ಚಾಲನೆ ನೀಡಿದರು.
ನಗರ ಪಾಲಿಕೆ ಸದಸ್ಯರಾದ ಉಮಾಮಣಿ ಮಾದೇಗೌಡ, ಬಿ.ಎಲ್. ಬೈರಪ್ಪ, ಸುನಿಲ್. ಸುನಿಲ್‌ಕುಮಾರ್, ಮಂಜುಳಾ ಮಾನಸ, ಪುರುಷೋತ್ತಮ್, ರತ್ನಮ್ಮ ಶಾಂತವೀರೇಂದ್ರಸ್ವಾಮಿ, ಜಗದೀಶ್ ಹಾಗೂ ಮುಖಂಡರಾದ ಸಾದಿಕ್, ಬ್ಲಾಕ್ ಅಧ್ಯಕ್ಷ ಸೋಮಶೇಖರ್ ಹಾಗೂ ಜೆ. ರವಿ, ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಎಂ. ರಮೇಶ್ ಇದ್ದರು.
ಈ ಸೇವೆಗಾಗಿ 5 ನೂತನ ಸಾರಿಗೆ ವೋಲ್ವೋ ಬಸ್ ಕಲ್ಪಿಸಲಾಗಿದ್ದು, ಜೆ.ಪಿ.ನಗರದಿಂದ ನಗರ ಬಸ್‌ನಿಲ್ದಾಣದ ಮುಖಾಂತರ ಶ್ರೀರಂಗಪಟ್ಟಣದ ನಡುವೆ ಸಂಚರಿಸಲಿದೆ.
ವೋಲ್ವೋ ಪ್ರಯಾಣ ದರ ಕಡಿತ: ನಗರ ಸಾರಿಗೆ ವೋಲ್ವೋ ಅನುಸೂಚಿಗಳಲ್ಲಿ ಮಧ್ಯಂತರ ಹಂತಗಳಲ್ಲಿ ಪ್ರಮಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ದರವನ್ನು ಕಡಿಮೆಗೊಳಿಸಿ ನಿಗದಿಗೊಳಿಸಲಾಗಿದೆ ಎಂದು ಮೈಸೂರು ನಗರ ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿ ಎಚ್.ಎಂ. ರಮೇಶ್ ತಿಳಿಸಿದ್ದಾರೆ.
ನಗರ ಬಸ್ ನಿಲ್ದಾಣದಿಂದ ಎಲ್ ಆ್ಯಂಡ್ ಟಿ ಮಾರ್ಗ ಸಂಖ್ಯೆಯ 116 ಹಾಗೂ 119 ರಲ್ಲಿ ನಬನಿಯಿಂದ ಗ್ರಾಮಾಂತರ ಬಸ್ ನಿಲ್ದಾಣಕ್ಕೆ 10, ದಾಸಪ್ಪ ವೃತ್ತ 10, ಆಕಾಶವಾಣಿ 13, ಪಿ.ಕೆ. ಸ್ಯಾನಿಟೋರಿಯಂ 15, ಬಸವನಗುಡಿ 18, ಸೂರ್ಯಬೇಕರಿ 20, ಸಂಕ್ರಾಂತಿ ಸರ್ಕಲ್ 22, ಭಾರತ್ ಕ್ಯಾನ್ಸರ್ ಅಸ್ಪತ್ರೆ 25 ಹಾಗೂ ಎಲ್ ಅಂಡ್ ಟಿ 30 ನಿಗದಿಗೊಳಿಸಲಾಗಿದೆ.
ನಗರ ಬಸ್ ನಿಲ್ದಾಣದಿಂದ ಇಲವಾಲಕ್ಕೆ ಸಂಚರಿಸುವ ಬಸ್‌ನಲ್ಲಿ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣಕ್ಕೆ      10, ದಾಸಪ್ಪ ವೃತ್ತ 10, ಆಕಾಶವಾಣಿ 13, ವಿವಿ ಪುರಂ ಅಂಚೆ ಕಚೇರಿ 14, ಪ್ರಿಮಿಯರ್ ಸ್ಟುಡಿಯೋ 15, ಹಿನಕಲ್ 15, ಹೂಟಗಳ್ಳಿ 16, ಬೆಳವಾಡಿ 18, ಲಿಂಗದೇವರಕೊಪ್ಪಲು 20 ಹಾಗೂ ಇಲವಾಲ 22 ನಿಗದಿಗೊಳಿಸಲಾಗಿದೆ.  
ನಗರ ಬಸ್ ನಿಲ್ದಾಣದಿಂದ ಶ್ರೀರಂಗಪಟ್ಟಣಕ್ಕೆ ಸಂಚರಿಸುವ ಬಸ್‌ನಲ್ಲಿ ಗ್ರಾಮಾಂತರ ಬಸ್ ನಿಲ್ದಾಣಕ್ಕೆ 10, ಫೌಂಟೆನ್ ವೃತ್ತ 10, ಜೆಎಸ್‌ಎಸ್ ಮೆಡಿಕಲ್ ಕಾಲೇಜು 13, ಸಿದ್ದಲಿಂಗಪುರ 15, ಕಳಸ್ತವಾಡಿ 16 , ನಗುವಿನಹಳ್ಳಿ ಕ್ರಾಸ್ 18, ಪಶ್ಚಿಮ ವಾಹಿನಿ 19, ಶ್ರೀರಂಗನಾಥ ದೇವಸ್ಥಾನ 20 ಹಾಗೂ ಶ್ರೀರಂಗಪಟ್ಟಣ 22 ನಿಗದಿಪಡಿಸಲಾಗಿದೆ.
ನಗರ ಬಸ್ ನಿಲ್ದಾಣದಿಂದ ಜೆ.ಪಿ. ನಗರಕ್ಕೆ ಸಂಚರಿಸುವ ವೋಲ್ವೋ ಬಸ್‌ನಲ್ಲಿ ವಿ.ವಿ. ಮಾರುಕಟ್ಟೆ 10, ಚಾಮುಂಡಿಪುರಂ 10, ಸ್ಟರ್ಲಿಂಗ್ ಟಾಕೀಸ್ 13, ಶನಿದೇವರ ದೇವಸ್ಥಾನ 15 ಹಾಗೂ ಜೆ.ಪಿ. ನಗರ ಬಸ್ ನಿಲ್ಧಾಣಕ್ಕೆ 15 ನಿಗದಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶಾಸಕರಿಂದ ಬಡಜನರಿಗೆ ಸವಲತ್ತು ವಿತರಣೆ
ಮೈಸೂರು: ನಗರದ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನಾಗರಿಕರಿಗೆ ಸರ್ಕಾರದ ಮಹತ್ತರವಾದ ಹಾಗೂ ಬಡಜನರಿಗೆ ದೊರಕಬೇಕಾದ ಸವಲತ್ತುಗಳನ್ನು ಶಾಸಕ ಎಂ.ಕೆ. ಸೋಮಶೇಖರ್ ವಿತರಿಸಿದರು. ಶುಕ್ರವಾರ ವಿದ್ಯಾರಣ್ಯಪುರಂನ ನಿತ್ಯಾನಂದ ಕಲ್ಯಾಣ ಮಂಪಟದಲ್ಲಿ ನಡೆದ ಸಮಾರಂಭದಲ್ಲಿ ವಿಧವಾ ವೇತನ, ಅಂಗವಿಕಲ, ಮಾಸಾಶನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಹಾಗೂ ಸರ್ಕಾರದ ನೂತನ ಯೋಜನೆಯಾದ ಮನಸ್ವಿನಿ ಫಲಾನುಭವಿಗಳೂ ಸೇರಿದಂತೆ 200ಕ್ಕೂ ಹೆಚ್ಚು ಮಂದಿಗೆ ಸವಲತ್ತು ವಿತರಿಸಲಾಯಿತು. ಪಾಲಿಕೆ ಸದಸ್ಯರಾದ ಉಮಾಮಣಿ ಮಾದೇಗೌಡ, ಸುನಿಲ್, ಸುನಿಲ್‌ಕುಮಾರ್, ಮಂಜುಳಾ ಮಾನಸ, ಪುರುಷೋತ್ತಮ್, ರತ್ನಮ್ಮ ಶಾಂತವೀರೇಂದ್ರಸ್ವಾಮಿ, ಜಗದೀಶ್, ಮುಖಂಡರಾದ ಸಾದಿಕ್, ಬ್ಲಾಕ್ ಅಧ್ಯಕ್ಷ ಜಿ. ಸೋಮಶೇಖರ್, ರವಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.