ಜಾತಿ ವ್ಯವಸ್ಥೆ ತೊಡೆಯಲು ಸೂಫಿಯೇ ಅಸ್ತ್ರ: ದಳವಾಯಿ
ಮೈಸೂರು: ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಸೂಫಿ ಜೀವನ ಕ್ರಮವೇ ಪ್ರಬಲ ಅಸ್ತ್ರ ಎಂದು ಸಾಹಿತಿ ಡಾ. ರಾಜಪ್ಪ ದಳವಾಯಿ ಅಭಿಪ್ರಾಯಪಟ್ಟರು.
ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸೂಫಿ- ಸಂತ- ಸಾಮರಸ್ಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಹಿಂದು, ಮುಸ್ಲಿಂ ಎಂದು ವಿಂಗಡಿಸದಂತೆ ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಇರುವುದು ಸೂಫಿ ಪಂಥಕ್ಕೆ ಮಾತ್ರ ಎಂದರು.
ಜಾತಿ ವ್ಯವಸ್ಥೆಯು ಪ್ರಜಾಪ್ರಭುತ್ವಕ್ಕೆ ಮಾರಕವಾದದು. ಕೋಮು ಸೌಹಾರ್ದತೆಯನ್ನು ಕದಲುವಂತ ಘಟನೆಗಳು ನಡೆಯಬಾರದು ಎನ್ನುವುದಾದರೆ ಸೂಫಿ ಜೀವನ ಕ್ರಮವನ್ನು ಅನುಸರಿಸಬೇಕು ಎಂದರು.
ಹಿಂದುಳಿದವರಿಗೆ ವಿವೇಕವಿಲ್ಲ: ನಾವೆಲ್ಲ ಹಿಂದೂ ಎನ್ನುವವರು ಎಂದಿಗೂ ಹಿಂದುಳಿದ ವರ್ಗದವರಿಗೆ ಮಾತಾಡಲ್ಲ. ಅವರಿಗೆ ಸಿಗುತ್ತಿರುವ ಮೀಸಲಾತಿಯನ್ನು ವಿರೋಧಿಸುತ್ತಾರೆ. ಪಾಪ, ಹಿಂದುಳಿದವರಿಗೆ ವಿವೇಕವಿಲ್ಲ. ಅದಕ್ಕಾಗಿಯೇ ತಮಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿದೆ ಮೇಲ್ವರ್ಗದವರ ವಿಚಾರಗಳಿಗೆ ಮಾರು ಹೋಗುತ್ತಾರೆ. ಸೂಫಿ ಕ್ರಾಂತಿಕಾರಿ ವಿಚಾರಗಳನ್ನು ಜನಸಾಮಾನ್ಯರಲ್ಲಿ ಹರಡಿ ಸೌಹಾರ್ದತೆಯತ್ತ ನಾವೆಲ್ಲ ಹೆಜ್ಜೆ ಹಾಕಬೇಕು ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಾಹಿತಿ ಪ್ರೊ. ಕಿಕ್ಕೇರಿ ನಾರಾಯಣ, ಅನುಭಾವ ಆಂತರಿಕವಾದದು. ತಮ್ಮ ಒಳ ಮನಸ್ಸನ್ನು ತಾವು ಅರಿತುಕೊಂಡಾಗ ಬೇರೆಯವರ ಸ್ಥಾನದಲ್ಲಿ ನಿಂತು ಯೋಚಿಸುವ ಶಕ್ತಿ ಬರುತ್ತದೆ. ಅರಿವಿನ ಕುರುಹು ಉಳಿದಾಗ ಬದಲಾಗಲು ಸಾಧ್ಯ. ಮುಸ್ಲಿಂ ಧರ್ಮದ ಮೂಲಭೂತವಾದವನ್ನು ವಿರೋಧಿಸುವ ಆರ್‌ಎಸ್‌ಎಸ್‌ನವರು ಮತ್ತೊಂದು ರೀತಿಯಲ್ಲಿ ಅವರೇ ಮೂಲಭೂತವಾದಿಗಳಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಮಾತನಾಡಿ, ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದ್ದು ಕೋಮುಶಕ್ತಿಗಳು ಸದೃಢಗೊಳ್ಳುತ್ತಿವೆ. ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡ, ಬಾಬರಿ ಮಸೀದಿ ಧ್ವಂಸದಂತ ಪ್ರಕರಣಗಳು ಈ ದೇಶದ ಜಾತ್ಯತೀತ ವ್ಯವಸ್ಥೆಗೆ ಧಕ್ಕೆ ತರುತ್ತಿವೆ. ಆದ್ದರಿಂದ ರಾಜ್ಯದ ಜನರು ಇವರ ಬಗ್ಗೆ ಎಚ್ಚರದಿಂದಿರಬೇಕು ಎಂದು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

