ಕೆಟ್ಟ ರಾಜಕಾರಣಿಗಳಿದ್ದರೆ ದೇಶ ಉದ್ಧಾರವಾಗದು
ಮೈಸೂರು: ಯಾವುದೇ ಪಕ್ಷವಿರಲಿ ಕೆಟ್ಟ ರಾಜಕಾರಣಿಗಳಿದ್ದರೆ ದೇಶ ಉದ್ಧಾರವಾಗದು ಎಂದು ಧಾರವಾಡದ ಗುರು ಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ ಹೇಳಿದರು.
ನಮೋ ಬ್ರಿಗೇಡ್ ಮೈಸೂರು ಸಂಘಟನೆಯು ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಚಕ್ರವರ್ತಿ ಸೂಲಿಬೆಲೆ ತಂಡದವರ ನಮೋ ಭಾರತ್ ದೇಶಭಕ್ತಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗುವಾಗ ಬಡವರಾಗಿರುತ್ತಾರೆ. ಎರಡನೇ, ಮೂರನೇ ಬಾರಿಗೆ ಆಯ್ಕೆ ಆದಾಗ ಕೋಟ್ಯಧೀಶರಾಗುತ್ತಾರೆ. ಹಾಗಾದರೆ ಅಷ್ಟೊಂದು ಹಣ ಎಲ್ಲಿಂದ ಬಂತು ಎಂದು ಜನರೇ ತಿಳಿಯಬೇಕು. ದೇಶದ ಉದ್ಧಾರವಾಗಬೇಕಾದರೆ ಉತ್ತಮ ರಾಜಕಾರಣಿಗಳ ಆಯ್ಕೆ ಅವಶ್ಯಕ. ದೇಶದ ಅಭಿವೃದ್ಧಿಗೆ ನಮ್ಮ ರಾಜಕಾರಣಿಗಳಲ್ಲಿ ಇಚ್ಛಾಶಕ್ತಿಯ ಕೊರತೆಯಿದೆ ಎಂದರು.
ಭ್ರಷ್ಟಾಚಾರ, ಪರಿಸರ ನಾಶ, ಮೋಸ, ವಂಚನೆ ತುಂಬಿ ತುಳುಕುತ್ತಿದ್ದು, ಇದು ಅದರ ಅಂತಿಮ ಕಾಲಘಟ್ಟ ಎನ್ನಿಸುತ್ತಿದೆ. ದೇಶದ ಈ ಎಲ್ಲ ಸಮಸ್ಯೆಗೆ ನರೇಂದ್ರ ಮೋದಿಯೊಂದೇ ಪರಿಹಾರ. 13 ವರ್ಷಗಳಿಂದ ಗುಜರಾತಿನ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದು, ಈವರೆಗೆ ಭ್ರಷ್ಟಾಚಾರದ ಯಾವುದೇ ಕಪ್ಪು ಚುಕ್ಕಿಯು ಅವರ ಮೇಲಿಲ್ಲ. ಅಂಥವರನ್ನು ದೇಶದ ಪ್ರಧಾನಿಯಾಗಿ ಬೆಂಬಲಿಸುವಲ್ಲಿ ಜನರು ಸಂಕಲ್ಪ ತೊಡಬೇಕು ಎಂದರು.
ಸ್ಥಿರ ಸರ್ಕಾರ ಇಲ್ಲದಿದ್ದರೆ ಚೀನಾ ಹಾಗೂ ಪಾಕಿಸ್ತಾನಗಳಿಗೆ ಹಬ್ಬವಾಗಲಿದೆ. ಆದ್ದರಿಂದ ಕಿಚಡಿ ಸರ್ಕಾರದ ಬದಲು ಬಿಜೆಪಿ ಬಹುಮತ ಸರ್ಕಾರ ಆರಿಸಿ ಎಂದು ಅವರು ಮನವಿ ಮಾಡಿದರು.
ಹುತಾತ್ಮ ಮಲ್ಲಿಕಾರ್ಜುನ ಬಂಡೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ದತ್ತಾಪೀಠದ ಕಿರಿಯಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಓ. ಶ್ಯಾಂ ಭಟ್, ಪಿ.ಡಿ. ಮೇದಪ್ಪ, ಉದ್ಯಮಿಗಳಾದ ಎಸ್.ಕೆ. ದೀನೇಶ್, ಲೋಹಿತ್ ಅರಸ್, ಡಾ. ಮಂಜುನಾಥ್ ಇದ್ದರು. ಸಮಿತಿಯ ಸಂಚಾಲಕ ಗೋಕುಲ್ ಪ್ರಾಸ್ತಾವಿಕ ಮಾತುಗಳಾಡಿದರು. ನಂತರ ಚಕ್ರವರ್ತಿ ಸೂಲಿಬೆಲೆ ತಂಡದವರು ನಮೋ ಭಾರತ್ ದೇಶಭಕ್ತಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

