ಚಾಮುಂಡೇಶ್ವರಿ ಕ್ಷೇತ್ರ ಸಿಎಂಗೆ ತವರು: ವಿಶ್ವನಾಥ್
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರವಾದ್ದರಿಂದ ತಾಯಿ ಮನೆ ಇದ್ದಂತೆ. ಆದ್ದರಿಂದ ಪ್ರತಿ ಊರಿಗೂ ಮೂಲಭೂತ ಸೌಲಭ್ಯ ಸಿಗಬೇಕು ಎಂದು ಸಂಸದ ಎಚ್.ವಿಶ್ವನಾಥ್ ಹೇಳಿದರು.
ತಾಲೂಕಿನ ಡಿ. ಸಾಲುಂಡಿಯಲ್ಲಿ 86 ಲಕ್ಷ ವೆಚ್ಚದಲ್ಲಿ ಪ್ರೌಢಶಾಲಾ ಕಟ್ಟಡ ನಿರ್ಮಾಣಕ್ಕೆ ಮಂಗಳವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಬಿಸಿಯೂಟ, ಕ್ಷೀರಭಾಗ್ಯ, ಹೆಣ್ಣು ಮಕ್ಕಳಿಗೆ ದಿನಕ್ಕೆ 2 ಪ್ರೋತ್ಸಾಹ ಧನ, ಉಚಿತ ಬಟ್ಟೆ, ಪುಸ್ತಕ ನೀಡುತ್ತಿದೆ. ರಾಜ್ಯದಲ್ಲಿ 65 ಲಕ್ಷ ಮಕ್ಕಳು ಬಿಸಿಯೂಟ ಮಾಡುತ್ತಿದ್ದಾರೆ. 1.5 ಲಕ್ಷ ಮಹಿಳೆಯರು ಬಿಸಿಯೂಟ ತಯಾರಿಕೆಯಲ್ಲಿ ತೊಡಗಿದ್ದಾರೆ. ಅನ್ನ ಕೊಟ್ಟು, ಅಕ್ಷರ ಕೊಡುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದರು. ಜಿಪಂ ಮಾಜಿ ಅಧ್ಯಕ್ಷ ಕೆ.ಮರಿಗೌಡ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರ ಕೊಡುಗೆ ಅಪಾರ. 204 ಕೋಟಿ ವೆಚ್ಚದಲ್ಲಿ 47 ಹಳ್ಳಿಗಳಿಗೆ ಕಾವೇರಿ ಹಿನ್ನೀರಿನಿಂದ ಕುಡಿಯುವ ನೀರು ಸರಬರಾಜು ಯೋಜನೆ ಪ್ರಗತಿಯಲ್ಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎನ್.ಧರ್ಮಸೇನ, ಜಿಪಂ ಅಧ್ಯಕ್ಷ ಎಂ.ಮಹದೇವ್, ಮಾಜಿ ಶಾಸಕ ಎಂ.ಸತ್ಯನಾರಾಯಣ, ಸಿ.ಬಸವೇಗೌಡ, ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕೋಟೆಹುಂಡಿ ಮಹದೇವು, ಗ್ರಾಪಂ ಅಧ್ಯಕ್ಷೆ ಸುಂದ್ರಮ್ಮ, ತಾಪಂ ಸದಸ್ಯೆ ವೀಣಾ ಬಸವರಾಜು, ಮುಖಂಡರಾದ ಸಿ.ಎಂ.ಸಿದ್ದರಾಮೇಗೌಡ, ಕೆ.ಪ್ರಭುಸ್ವಾಮಿ, ಕೆ.ಹೆಬ್ಬಾಳೆಗೌಡ, ಸಿದ್ದಯ್ಯ, ಎಂ.ಟಿ.ರವಿಕುಮಾರ್, ಬಸವಣ್ಣ, ಮಾರ್ಬಳ್ಳಿ ಕುಮಾರ್, ಕೆಂಚಪ್ಪ, ಕನಕೇಗೌಡ, ಬಸಪ್ಪ, ಮಂಜುಳಾ, ಶೋಭಾ ಶಿವರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

