ಮೈಸೂರು

ಕುಕ್ಕರಹಳ್ಳಿ ಕೆರೆ; ಸಲಹಾ ಸಮಿತಿ ರಚನೆಗೆ ಸ್ವಾಗತ

Published On :

ಮೈಸೂರು: ಕುಕ್ಕರಹಳ್ಳಿ ಕೆರೆ ಮತ್ತು ಕಾರಂಜಿಕೆರೆಗೆ ಹರಿಯುತ್ತಿರುವ ಒಳ ಚರಂಡಿ ನೀರು ತಡೆಗಟ್ಟುವ ಹಿನ್ನೆಲೆಯಲ್ಲಿ ಸಲಹಾ ಸಮಿತಿ ರಚಿಸಿರುವುದನ್ನು ಕುಕ್ಕರಹಳ್ಳಿ ಕೆರೆ ಸಂರಕ್ಷಣಾ ಸಮಿತಿ ಸಂಚಾಲಕ ಕೆ.ಎಂ. ಜಯರಾಮಯ್ಯ ಸ್ವಾಗತಿಸಿದ್ದಾರೆ.
ಎಸ್ಜೆಸಿಇ ಪ್ರಾಂಶುಪಾಲ ಪ್ರೊ. ಸೈಯದ್ ಶಕೀಬ್ ಉರ್ ರೆಹಮಾನ್ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಲಹಾ ಸಮಿತಿಯಲ್ಲಿ ಸಿ.ಎಸ್. ಬಾಬು, ಟಿ. ಜಯದೇವಪ್ಪ, ಪಿ.ಎಸ್. ಚಂದ್ರಣ್ಣ ಮತ್ತು ಕೆ.ಎಚ್. ಆಚಾರ್ ಅವರು ಸದಸ್ಯರಾಗಿದ್ದಾರೆ. ಅನೇಕ ವರ್ಷಗಳಿಂದ ಒಳ ಚರಂಡಿ ನೀರು ಕೆರೆಗೆ ಸೇರುತ್ತಿತ್ತು. ಈಗ ಅದನ್ನು ತಡೆಗಟ್ಟಲು ಕ್ರಮವಾಗಿ 2, 3 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದ್ದಾರೆ. ಕುಕ್ಕರಹಳ್ಳಿ ಕೆರೆಗೆ ಮಳೆ ನೀರು ಹರಿಯುವಂತೆ 5 ಲಕ್ಷ ವೆಚ್ಚದಲ್ಲಿ ಕಾಲುವೆ ತೋಡಿಸಲಾಗಿದೆ. ಅಂತೆಯೇ ವಾಣಿವಿಲಾಸ ನೀರು ಸರಬರಾಜು ಕೇಂದ್ರದಿಂದ ಪ್ರತಿದಿನ ಸುಮಾರು 10 ಲಕ್ಷ ಲೀಟರ್ ಬ್ಯಾಕ್ವಾಶ್ ನೀರು ಒಳ ಚರಂಡಿ ಸೇರುತ್ತಿತ್ತು. ಆದರೆ ಎ.ಬಿ. ಇಬ್ರಾಹಿಂ ಪಾಲಿಕೆ ಆಯುಕ್ತರಾಗಿದ್ದ ಅವಧಿಯಲ್ಲಿ ವಾಣಿವಿಲಾಸ ಕಾರ್ಯಗಾರದಿಂದ ಕುಕ್ಕರಹಳ್ಳಿ ಕೆರೆಗೆ ಪೈಪ್ಲೈನ್ ಅಳವಡಿಸಿ ಬ್ಯಾಕ್ವಾಶ್ ನೀರು ಕೆರೆಗೆ ಸೇರುವಂತೆ ಮಾಡಿದ್ದಾರೆ. ಈಗ ಕೈಗೊಂಡಿರುವ ಕಾಮಗಾರಿಯಿಂದ ಕೆರೆಯ ಸಂರಕ್ಷಣ ಕಾರ್ಯ ಸುಲಭವಾಗುತ್ತಿದೆ. ಮಾಲಿನ್ಯ ರಹಿತವಾದ ನೀರು ಇಲ್ಲಿನ ಜೀವ ಸಂಕುಲಕ್ಕೆ ದೊರಕುವಂತೆ ಆಗಲಿ ಎಂದು ಜಯರಾಮಯ್ಯ ಆಶಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.