ಮೈಸೂರು

ರೈಲು ನಿಲ್ದಾಣದಲ್ಲಿ ಇಬ್ಬರು ಅಪರಿಚಿತರ ಶವ ಪತ್ತೆ

Published On :

ಮೈಸೂರು: ಮೈಸೂರು ಮತ್ತು ಹಂಪಾಪುರ ರೈಲು ನಿಲ್ದಾಣಗಳಲ್ಲಿ ಇಬ್ಬರು ಅಪರಿಚಿತರು ಮೃತಪಟ್ಟಿದ್ದಾರೆ.
ಮೈಸೂರಿನ ರೈಲು ನಿಲ್ದಾಣದ ಫ್ಲಾಟ್ ಫಾರಂ 3ರಲ್ಲಿ ನಿಂತಿದ್ದ ರೈಲಿನ ಸಾಮಾನ್ಯ ಬೋಗಿಯ ಶೌಚಾಲಯದ ಬಳಿ 50 ವರ್ಷದ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ.
ಚಹರೆ- 5.2 ಅಡಿ ಎತ್ತರ, ಕೃಶವಾದ ಶರೀರ, ಎಣ್ಣೆಗಂಪು ಮೈಬಣ್ಣ, ಕೋಲು ಮುಖ, ಚೂಪಾದ ಮೂಗು, ತಲೆಯಲ್ಲಿ 2 ಇಂಚು ಉದ್ದದ ಕಪ್ಪು- ಬಿಳಿ ಮಿಶ್ರಿತ ಕೂದಲು, 1 ಇಂಚು ಉದ್ದದ ಕುರುಚಲು ಗಡ್ಡ- ಮೀಸೆ ಬಿಟ್ಟಿರುತ್ತಾರೆ. ತಿಳಿ ನೀಲಿ ಬಣ್ಣದ ಗೆರೆಯುಳ್ಳ ಅರ್ಧ ತೋಳಿನ ಶರ್ಟ್, ನೀಲಿ ಮತ್ತು ಕಪ್ಪು ಬಣ್ಣದ ಚೌಕಳಿಯ ಕಾಟನ್ ಲುಂಗಿ ಧರಿಸಿದ್ದಾರೆ. ಕೆ.ಆರ್. ನಗರ ತಾಲೂಕು ಹಂಪಾಪುರ ರೈಲು ನಿಲ್ದಾಣದ ನಿರೀಕ್ಷಣಾ ಕೊಠಡಿಯಲ್ಲಿ 50 ವರ್ಷದ ಅಪರಿಚಿತ ವ್ಯಕ್ತಿಯ ಶವ ಮಂಗಳವಾರ ಪತ್ತೆಯಾಗಿದೆ.
ಚಹರೆ- 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಗಿಡ್ಡ ಮೂಗು, ಕಪ್ಪು ಮೈಬಣ್ಣ, ತಲೆಯಲ್ಲಿ ಅರ್ಧ ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಕೂದಲು, ಅರ್ಧ ಇಂಚು ಉದ್ದದ ಕುರುಚಲ ಗಡ್ಡ- ಮೀಸೆ ಬಿಟ್ಟಿರುತ್ತಾರೆ. ಬಿಳಿ ಮತ್ತು ನೀಲಿ ಬಣ್ಣದ ಚುಕ್ಕಿಗಳುಳ್ಳ ಹಾಗೂ ಕಪ್ಪು ಬಣ್ಣದ ಗೆರೆಯುಳ್ಳ ತುಂಬು ತೋಳಿನ ಶರ್ಟ್, ಬಿಳಿ ಮತ್ತು ಕಪ್ಪು ಬಣ್ಣದ ಎಲಾಸ್ಟಿಕ್ ರೆಡಿಮೇಡ್ ನಿಕ್ಕರ್, ಸೊಂಟದಲ್ಲಿ ಬಿಳಿ ಬಣ್ಣದ ಉಡದಾರ ಧರಿಸಿದ್ದಾರೆ. ಇಬ್ಬರು ವ್ಯಕ್ತಿಗಳ ಮೃತ ದೇಹವನ್ನು ಮೈಸೂರು ವೈದ್ಯಕೀಯ ಕಾಲೇಜಿನ ಶವಗಾರದಲ್ಲಿ ಇರಿಸಲಾಗಿದೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2516579 ಸಂಪರ್ಕಿಸಲು ಮೈಸೂರು ರೇಲ್ವೆ ಠಾಣೆ ಪೊಲೀಸರು ಕೋರಿದ್ದಾರೆ.


ದೊಡ್ಡಹುಂಡಿ ವೃದ್ಧ ನಾಪತ್ತೆ
ಮೈಸೂರು: ತಾಲೂಕಿನ ಜಯಪುರ ಹೋಬಳಿ ದೊಡ್ಡಹುಂಡಿ ನಿವಾಸಿ ಲೇ. ಚಿಕ್ಕಮಾಲೇಗೌಡ ಎಂಬವರ ಪುತ್ರ ಪುಟ್ಟಬಸವೇಗೌಡ(75)  ಮೂರು ತಿಂಗಳ ಹಿಂದೆ ಮೈಸೂರಿನ ದೇವಸ್ಥಾನಕ್ಕೆ ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2595781 ಸಂಪರ್ಕಿಸಲು ಜಯಪುರ ಠಾಣೆ ಎಎಸ್ಐ ಮಂಗಳ ಕೋರಿದ್ದಾರೆ.
 


ದೂರು ಸ್ವೀಕರಿಸಲು ಎಸ್ಐ ನಕಾರ; ಆರೋಪ
ಮೈಸೂರು: ಬೈಕ್ ಕಳವಾಗಿರುವ ಬಗ್ಗೆ ದೂರು ನೀಡಿದರೂ ಎಸ್ಐ ಪ್ರಕರಣ ದಾಖಲಿಸಿಕೊಳ್ಳದೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಸ್ಪಿ ಅಭಿನವ್ ಅಶೋಕ್ ಖರೆ ಅವರಿಗೆ ಪೇದೆಯೊಬ್ಬರು ದೂರು ನೀಡಿದ್ದಾರೆ. ಬಂಡಿಪಾಳ್ಯದ ಬಳಿ ನಿಲ್ಲಿಸಿದ್ದ ಬೈಕ್ ಕಳವಾಗಿ, ಮಾರನೇ ದಿನವೇ ಪತ್ತೆಯಾಯಿತು. ಬೈಕ್ ಕಳವು ಮಾಡಿದವರ ಬಗ್ಗೆ ದೂರು ನೀಡಲು ಹೋದಾಗ ಮೈಸೂರು ದಕ್ಷಿಣ ಠಾಣೆಯ ಅಪರಾಧ ವಿಭಾಗದ ಎಸ್ಐ ಪ್ರಶಾಂತ್ ಮತ್ತು ಪೇದೆ ನಾರಾಯಣ ಅವರು ದೂರು ತೆಗೆದುಕೊಂಡಿಲ್ಲ. ಈ ಸಂಬಂಧ ಕ್ರಮ ವಹಿಸುವಂತೆ ನೊಂದ ಪೇದೆ ಎಸ್ಪಿ ಅವರಿಗೆ ದೂರು ನೀಡಿದ್ದಾರೆ. ಈ ಸಂಬಂಧ ವಿಚಾರಣೆಗ ಎಸ್ಪಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.