ಮಣ್ಣು, ಮನುಷ್ಯನ ಆರೋಗ್ಯ ರೈತನ ಕೈಯಲ್ಲಿದೆ: ಗುರುಮೂರ್ತಿ
ಸುತ್ತೂರು: ಮಣ್ಣಿನ ಮತ್ತು ಮನುಷ್ಯನ ಆರೋಗ್ಯ ರೈತನ ಕೈಯಲ್ಲಿದೆ ಎಂದು ಕಬಿನಿ ಯೋಜನೆ ಮಹಾಮಂಡಳಿಯ ಅಧ್ಯಕ್ಷ ಗುರುಮೂರ್ತಿ ಅಭಿಪ್ರಾಯಪಟ್ಟರು.
ನಂಜನಗೂಡು ತಾಲೂಕಿನ ಕಲ್ಕುಂದ ಗ್ರಾಮದಲ್ಲಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗಮರಾಮದ ನೀರು ಬಳಕೆದಾರ ಸಂಘದ ಸದಸ್ಯರಿಗೆ ನಡೆದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಗೆ ಹಾಗೂ ಭೂಮಿ ಮೇಲೆ ವಾಸಿಸುವ ಎಲ್ಲ ಜೀವಿಗಳಿಗೆ ನೀರು ಅಮೂಲ್ಯ ಮತ್ತು ರೈತರು ಕಡಿಮೆ ನೀರು ಉಪಯೋಗಿಸಿಕೊಂಡು ಬೆಳೆಗಳನ್ನು ಬೆಳೆಯಲು ಸಂಘದಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಸದಸ್ಯರು ಮುಂದೆ ಬರಲು ತಿಳಿಸಿದರು.
ಕೃಷಿ ಇಲಾಖೆಯ ಮಾಜಿ ನಿರ್ದೇಶಕ ಎಚ್.ಎಂ. ಹೊಂಬಯ್ಯ ಸ್ವಾಮಿಗೌಡ ರೈತರಿಗೆ ಬೆಳೆಗಳ ಬಗ್ಗೆ ಹಾಗೂ ಸಹಕಾರ ಸಂಘಗಳ ಬಗ್ಗೆ ಮಾಹಿತಿ ನೀಡಿದರು.
ನೀರು ಬಳಕೆದಾರರ ಸಂಘದ ಅಧ್ಯಕ್ಷ ರತ್ನಶೇಖರ್, ಕಾಡಾ ಸಹಾಯಕ ಕೃಷಿ ನಿರ್ದೇಶಕ ಎನ್. ತಿಮ್ಮರಾಜು, ಸಂಘದ ನಿರ್ದೇಶಕ ಮಲ್ಲಿಕಾರ್ಜುನಪ್ಪ, ರತ್ನಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರು, ಹಾಲು ಉತ್ಪಾದಕರ ಮಾಜಿ ಅಧ್ಯಕ್ಷ ಮಹದೇವಸ್ವಾಮಿ ಭಾಗವಹಿಸಿದ್ದರು. ಕಾರ್ಯದರ್ಶಿ ರಾಜಪ್ಪ ಸ್ವಾಗತಿಸಿದರು. ಶಿವಶಂಕರಮೂರ್ತಿ ನಿರೂಪಿಸಿದರು, ಗುರುಸ್ವಾಮಿ ವಂದಿಸಿದರು.
ಮಾನವನ ಸುಖ, ಶಾಂತಿ, ನೆಮ್ಮದಿಗೆ
ಧರ್ಮ ಅವಶ್ಯ: ಮಹಾಬಲ ಭಯ್ಯಾಜಿ
ಸಾಲಿಗ್ರಾಮ: ಮಾನವನ ಸುಖ, ಶಾಂತಿ, ನೆಮ್ಮದಿಗೆ ಧರ್ಮ ಅತ್ಯಂತ ಅವಶ್ಯ. ವಿಶ್ವದ ವಸ್ತು ಸ್ವರೂಪವೇ ಧರ್ಮವಾಗಿದೆ ಎಂದು ಆಚಾರ್ಯ ವಿದ್ಯಾಸಾಗರ ಮಹಾರಾಜರ ಶಿಷ್ಯರಾದ ಬ್ರಹ್ಮಚಾರಿ ಮಹಾಬಲ ಭಯ್ಯಾಜಿ ಹೇಳಿದರು.
ಸಾಲಿಗ್ರಾಮದ ಗುರುಗಳ ತಪೋ ಭೂಮಿ ಗುರುಗಳಾರೆಯಲ್ಲಿ ಕುಂದ ಕುಂದ ಆಚಾರ್ಯರ ಪಾದ ಸ್ಥಾಪನೆ ಮಾಡಿದ ಬೆಳ್ಳಿಹಬ್ಬದ ನೆನಪಿಗಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಜಾತಿ, ಪಂಗಡವಿರಲಿ ಅವರು ಧರ್ಮದ ಆಚರಣೆಯಿಂದ ಸುಖದ ಮಾರ್ಗವನ್ನು ಕಂಡುಕೊಳ್ಳಬೇಕು. ಮಾನವನು ಕೆಟ್ಟದ್ದನ್ನು ಮಾಡಿ ಒಳ್ಳೆಯದರ ಫಲವನ್ನು ಅಪೇಕ್ಷಿಸುತ್ತಾನೆ. ತಾನು ಸುಖದಿಂದ ಇರಲು ಗುರುಗಳ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು. ತನ್ನಲ್ಲಿರುವ ಕೋಪ, ಅಹಂಕಾರ, ಕಪಟ, ಅಸತ್ಯ, ಹಿಂಸೆ ಮೊದಲಾದವುಗಳನ್ನು ಬಿಡಬೇಕು ಎಂದು ತಿಳಿಸಿದರು.
ಧಾರ್ಮಿಕ ಪ್ರವರ್ತಕ ಎಸ್.ಬಿ. ಗುಣಚಂದ್ರಕುಮಾರ್ ಮಾತನಾಡಿದರು. ಬ್ರಹ್ಮಚಾರಿ ಜಯವರ್ಮ ಭಯ್ಯಾಜಿ, ಭಾರತೀಯ ಜೈನ್ ಮಿಲನ್ ಎಸ್.ಸಿ. ಜಿನರಾಜಯ್ಯ, ಎಸ್.ಬಿ. ದೇವೇಂದ್ರಕುಮಾರ್, ಗುಣಪಾಲ್ ಜೈನ್, ಹೇಮಂತ್ಕುಮಾರ್, ಸುನಿಲ್ಕುಮಾರ್, ಜೈ ಭಾರತಿ ಜೈನ ಮಹಿಳಾ ಸಮಾಜದ ಸುಜಾತ ರಾಜೇಂದ್ರಪ್ರಸಾದ್, ಸಾಲಿಗ್ರಾಮ ಜೈನ್ ಮಿಲನ್ನ ಉಷಾ ಸುರೇಶ್ಕುಮಾರ್, ಮಣಿಮಾಲಾ ಜೈನ್, ನಿರಜಾ ಇದ್ದರು. ಇದೇ ವೇಳೆ ವಿಶೇಷ ಪೂಜೆ ನೆರವೇರಿತು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

