ಮೈಸೂರು

ಜೆಡಿಎಸ್ ಕಚೇರಿ

Published On :

ಮೈಸೂರು: ಮೈಸೂರು ನಗರ ಜನತಾದಳ ವತಿಯಿಂದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಗರಾಧ್ಯಕ್ಷ ರಾಜಣ್ಣ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಮಹನೀಯರ ಗುಣಗಾನ ಮಾಡಿದರು. ನಗರಪಾಲಿಕೆ ಸದಸ್ಯರಾದ ಕೆ.ಟಿ.ಚೆಲುವೇಗೌಡ, ಹಸಿನಾ ತಾಜ್, ಮಹಿಳಾ ಘಟಕದ ನಗರಾಧ್ಯಕ್ಷೆ ಪ್ರೇಮ ಶಂಕರೇಗೌಡ, ಮುಖಂಡರಾದ ಪಾಲ್ಕನ್ ಬೋರೇಗೌಡ, ತೇಜಾಮಣಿ, ಪರಮೇಶ್, ಆರ್.ಎಲ್. ಅನಂತನಾರಾಯಣ್, ಎಂ. ಬಸವರಾಜು, ಮುದ್ದುರಾಜು, ರಿಜ್ವಾನ್ ಅಹಮದ್, ಸತ್ಯನಾರಾಯಣ ಇದ್ದರು.
ಕಾಂಗ್ರೆಸ್ ಕಚೇರಿ
ಸಯ್ಯಾಜಿರಾವ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮೈಸೂರು ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ನಗರಾಧ್ಯಕ್ಷ ಸಿ.ದಾಸೇಗೌಡ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ಗಣರಾಜ್ಯೋತ್ಸವದ ಮಹತ್ವ ಹಾಗೂ ದೇಶಕ್ಕಾಗಿ ಹುತಾತ್ಮರಾದ ಮಹನೀಯರ ಸೇವೆ ಸ್ಮರಿಸಿದರು. ನಂತರ ಸಿಹಿ ಹಂಚಲಾಯಿತು. ಮಾಜಿ ಮೇಯರ್ಗಳಾದ ಪುರುಷೋತ್ತಮ್, ಮೋದಮಣಿ, ಮುಖಂಡರಾದ ಭಾಸ್ಕರ್, ಆರ್. ಮೂರ್ತಿ, ಕೆ.ಲೋಕೇಶ್ ರಾವ್ ಇದ್ದರು.
ಗೀತಗಾಯನ
ಮೇಟಗಳ್ಳಿಯ ರಂಗರಾವ್ ಸ್ಮಾರಕ ಅಂಗವಿಕಲರ ಹೆಣ್ಣುಮಕ್ಕಳ ಶಾಲೆಯಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ರಂಗ್ಸನ್ಸ್ ಎಲೆಕ್ಟ್ರಾನಿಕ್ಸ್ ಕಾರ್ಖಾನೆಯ ಮೆಟಿರಿಯಲ್ ವಿಭಾಗದ ಉಪಾಧ್ಯಕ್ಷ ಎಚ್.ಎನ್. ರಮೇಶ್ ಧ್ವಜಾರೋಹಣ ನರೆವೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.