ರೆವಿನ್ಯೂ ಬಡಾವಣೆಗಳಲ್ಲೂ ತೆರಿಗೆ ಸಂಗ್ರಹಿಸಿ
ಮೈಸೂರು: ರೆವಿನ್ಯೂ ಬಡಾವಣೆ ಮತ್ತು ಹೊರವಲಯದ ಬಡಾವಣೆಗಳಲ್ಲೂ ಕರ ವಸೂಲಿ ಮಾಡುವಂತೆ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಲ್. ಬೈರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ, ರೆವಿನ್ಯೂ ಬಡಾವಣೆಗಳಲ್ಲಿಯೂ ತೆರಿಗೆ ವಸೂಲಿ ಮಾಡಬೇಕು. ವಾರ್ಡ್ವಾರು ಅಥವಾ ಬಡಾವಣೆವಾರು ತೆರಿಗೆ ಸಂಗ್ರಹಿಸಿ, ಪ್ರತ್ಯೇಕ ಕಡತ ನಿರ್ವಹಿಸಬೇಕು. ಮುಂದೆ ಅಕ್ರಮ- ಸಕ್ರಮದ ವೇಳೆ ಸಹಾಯಕ್ಕೆ ಬರುತ್ತದೆ. ಸದ್ಯಕ್ಕೆ ರೆವಿನ್ಯೂ ಬಡಾವಣೆಯಲ್ಲಿ ರಸ್ತೆ, ಚರಂಡಿ ಮುಂತಾದ ಸೌಲಭ್ಯ ಇಲ್ಲ. ಆದರೆ ಮುಂದೆ ಸಕ್ರಮವಾದಾಗ ಆ ಎಲ್ಲಾ ಸೌಲಭ್ಯವನ್ನೂ ಕಲ್ಪಿಸುವುದಾಗಿ ಹೇಳಿದರು.
ವಿಜಯನಗರ, ದಟ್ಟಗಳ್ಳಿ ಮುಂತಾದ ಹೊರವರ್ತುಲ ರಸ್ತೆಯ ಆಚೆಯ ಬಡಾವಣೆಗಳಿಗೆ ನೀರು ಪೂರೈಕೆ ಮತ್ತು ಕಸ ಸಂಗ್ರಹ ಮಾಡಲಾಗುತ್ತಿದೆ. ಆದರೆ ಅಲ್ಲಿನ ತೆರಿಗೆ ನಮಗೆ ಸೇರುತ್ತಿಲ್ಲ. ಕೂಡಲೆ ಅಲ್ಲಿಯೂ ತೆರಿಗೆ ವಸೂಲಿ ಮಾಡಬೇಕು. ಇದರಿಂದ ಪಾಲಿಕೆಗೆ ಸುಮಾರು 40 ಕೋಟಿ ಆದಾಯ ಬರುತ್ತದೆ. ಶಿಕ್ಷಣ ಸಂಸ್ಥೆಗಳಿಗೂ ತೆರಿಗೆ ಕಡ್ಡಾಯಗೊಳಿಸಬೇಕು. ರಸ್ತೆ ಸಾರಿಗೆ ಸೆಸ್ ಅನ್ನು ಶೇ.2ರಷ್ಟು ಹೆಚ್ಚಿಸಬೇಕು ಎಂದು ಅವರು ತಿಳಿಸಿದರು.
ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಬೇಕು: ನಗರ ಪಾಲಿಕೆಯಲ್ಲಿ ಕರಪಾವತಿ ತೆಗೆದು, ಖಾತೆ ಮಾಡಿಕೊಡುವ ಸಂಬಂಧ ನಿರ್ಣಯ ಕೈಗೊಳ್ಳಬೇಕು. ಗ್ರಾಹಕರಿಗೆ ನಗರ ಪಾಲಿಕೆಯಲ್ಲಿ ಖಾತೆ ಮಾಡಿಕೊಡುತ್ತಿಲ್ಲ. ಬದಲಿಗೆ ಕರಪಾವತಿ ಪತ್ರ ನೀಡಲಾಗುತ್ತಿದೆ. ಈ ವ್ಯವಸ್ಥೆ ಹೋಗಬೇಕು. ಈ ಹಿನ್ನೆಲೆಯಲ್ಲಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕಿದೆ. ಆಸ್ತಿಗೆ ಸಂಬಂಧಿಸಿದಂತೆ ಯಾವುದೆ ತಕರಾರು ಇದ್ದಲ್ಲಿ ಕೂಡಲೆ ಗ್ರಾಹಕರಿಗೆ ಸೂಚನೆ ನೀಡಬೇಕು ಎಂದು ಅವರು ಹೇಳಿದರು.
1 ಲಕ್ಷ ತೆರಿಗೆ ಪಾವತಿಸುವ 395 ನೀರಿನ ಸಂಪರ್ಕಗಳಿವೆ. ಇವುಗಳಿಂದ ಸುಮಾರು 25 ಕೋಟಿ, 55 ಸಾವಿರದಿಂದ 1 ಲಕ್ಷ ವರೆಗೆ 881 ಸಂಪರ್ಕಗಳಿವೆ. ಇದರಿಂದ 5.89 ಕೋಟಿ ಬಾಕಿ ಮತ್ತು ರು. 5 ರಿಂದ 50 ಸಾವಿರ ಬಾಕಿ ಉಳಿಸಿಕೊಂಡ 28,999 ಸಂಪರ್ಕ ಇದೆ. ಇದರಿಂದ ರು. 44.24 ಕೋಟಿ ಸೇರಿ ಒಟ್ಟು 85 ಕೋಟಿ ಬಾಕಿ ಇದೆ ಎಂದು ಅವರು ತಿಳಿಸಿದರು.
ಉಳಿದಂತೆ ವಲಯ ಕಚೇರಿ- 8ರ ವ್ಯಾಪ್ತಿಯಲ್ಲಿನ ಶೂನ್ಯ ಘನತ್ಯಾಜ್ಯ ಘಟಕ ನಿರ್ವಹಣೆ ಜವಾಬ್ದಾರಿಯನ್ನು ಪೇಜ್ ಟ್ರಸ್ಟ್ ಇಂಡಿಯಾ ಸಂಸ್ಥೆಗೆ ವಹಿಸುವ ಸಂಬಂಧ ಸಭೆ ತೀರ್ಮಾನಿಸಿ ಕೌನ್ಸಿಲ್ ಒಪ್ಪಿಗೆಗೆ ಕಳುಹಿಸಿದೆ. ವಲಯ ಕಚೇರಿ 1, 2, 3, 5 ಮತ್ತು 6ರ ಶೂನ್ಯ ಘನತ್ಯಾಜ್ಯ ಘಟಕದ ಆರು ತಿಂಗಳ ನಿರ್ವಹಣೆಗೆ 5,85,252 ವೆಚ್ಚವಾಗುತ್ತದೆ ಎಂದರು.
ಅಲ್ಲದೆ ರಂಗಭೂಮಿ ಕಲಾವಿದರು, ಕುಸ್ತಿಪಟುಗಳು ಮತ್ತು ಉದಯೋನ್ಮುಖ ಸಾಹಿತಿಗಳಿಗೆ ಪ್ರೋತ್ಸಾಹಧನ ನಿಗದಿಪಡಿಸಿ, ಪಾಲಿಕೆ ಸಭೆಯಲ್ಲಿ ಒಪ್ಪಿಗೆ ಪಡೆಲು ಅಧಿಕಾರಿಗಳಿಗೆ ಸೂಚಿಸಿದರು. ಸಮಿತಿ ಸದಸ್ಯರಾದ ಎಂ.ಕೆ. ಶಂಕರ್, ಹಸೀನಾ ತಾಜ್, ಕಂದಾಯಾಧಿಕಾರಿ ಜಗದೀಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

