ಸ್ವತಂತ್ರ ಮನೋಧರ್ಮ ರೂಢಿಸಿಕೊಳ್ಳಿ: ಪ್ರೊ.ನೀಲಗಿರಿ
ಮೈಸೂರು: ವಿದ್ಯಾರ್ಥಿಗಳು ಸ್ವತಂತ್ರ ಮನೋಧರ್ಮ ರೂಢಿಸಿಕೊಂಡು ಬೆಳವಣಿಗೆ ಹೊಂದುವಂತೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ನೀಲಗಿರಿ ಎಂ. ತಳವಾರ್ ಕರೆ ನೀಡಿದರು. ಡಿ.ಬನುಮಯ್ಯ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಸಾಂಸ್ಕೃತಿಕ ವೇದಿಕೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮೂಲ ಅಂತಃಸತ್ವದೊಂದಿಗೆ ಬೆಳೆಯಲು ಉತ್ತಮ ಮಾದರಿಗಳನ್ನು ಅನುಸರಿಸಬೇಕು. ವಿದ್ಯೆಯಿಂದ ಜ್ಞಾನ, ಜ್ಞಾನದಿಂದ ಆಪತ್ತನ್ನು ನಿಭಾಯಿಸುವ ಸಾಮರ್ಥ್ಯ ಪಡೆದುಕೊಳ್ಳಬೇಕು. ಸಾಧನೆ ಮಾಡಲು ಜ್ಞಾನ, ಪರಿಶ್ರಮದ ಬದುಕು, ಶಾಂತಚಿತ್ತರಾಗಿರುವಂತೆ ಸಲಹೆ ನೀಡಿದರು. ಈಗ ಬಿಕ್ಕಟ್ಟಿನ ಸನ್ನಿವೇಶ ಎದುರಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಶೇ.100 ರಷ್ಟು ಜಾಗೃತರಾಗಿರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ತಪಸ್ವಿಯಂತಿರಬೇಕು. ಕಠಿಣ ತಪ್ಪಿಸ್ಸಿನಿಂದ ಯಶಸ್ಸು ಗಳಿಸಬಹುದು. ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕು. ಈ ಮೂಲಕ ವ್ಯಕ್ತಿತ್ವ ಪೂರ್ಣಗೊಳಿಸಿಕೊಳ್ಳಬೇಕು. ಇದು ಆಡಳಿತ ಮಂಡಳಿಯ ಒತ್ತಾಸೆಯೂ ಆಗಿದೆ. ಅಧ್ಯಾಪಕರ ಮಾರ್ಗದರ್ಶನದಲ್ಲಿ ನಡೆಯುವಂತೆ ಅವರು ತಿಳಿಸಿದರು.
ಡಿ.ಬನುಮಯ್ಯ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ವಿ.ಜಿ. ಜಯದೇವ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎಂ. ಪುಟ್ಟು, ಆಡಳಿತಾಧಿಕಾರಿ ಡಾ.ಎನ್. ತಿಮ್ಮಯ್ಯ, ಧರ್ಮದರ್ಶಿ ರಮೇಶ್ಕುಮಾರ್, ವಿ.ಸಿ. ಕೋಮಲಾ, ಪ್ರಾಂಶುಪಾಲ ಚಂದ್ರಶೇಖರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

