ಕೃಷಿ; ಆತಂಕ ಬೇಡ, ಪರಿಹಾರ ಬೇಕು
ಕ.ಪ್ರ. ವಾರ್ತೆ, ಮೈಸೂರು, ಜ.31
ಇಡೀ ಸಮಾಜ ಕೃಷಿ ಆಧಾರದ ಮೇಲೆ ನಿಂತಿದೆ. ಕೃಷಿ ಉಳಿವಿಗೆ ಚಿಂತಿಸುವ ನಿಟ್ಟಿನಲ್ಲಿ ಆತಂಕ ಸೃಷ್ಟಿಸುವ ಬದಲು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಕಿವಿಮಾತು ಹೇಳಿದರು.
ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೃಷಿ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕೃಷಿ, ರೈತರ ಭವಿಷ್ಯದ ಬಗ್ಗೆ ಚರ್ಚೆ ನಡೆಯುವಾಗ ಕೃಷಿ ನಾಶವಾಗುತ್ತದೆ ಎಂಬಿತ್ಯಾದಿ ಅಂಶಗಳನ್ನು ಮುಂದಿಟ್ಟುಕೊಂಡು ಸಂವಾದ ನಡೆಸುತ್ತ ಎಲ್ಲರಲ್ಲೂ ಆತಂಕ ಸೃಷ್ಟಿಸಲಾಗುತ್ತಿದೆ.
ಇದರ ಬದಲಾಗಿ ಕೃಷಿಯನ್ನು ಉಳಿಸಿ, ಬೆಳೆಸುವ ಬಗ್ಗೆ ಪರ್ಯಾಯ ಮಾರ್ಗಗಳು, ಪರಿಹಾರ ಹುಡುಕಿಕೊಂಡು ಸುಧಾರಣೆಗೆ ತರುವಂತಹ ಕೆಲಸಗಳು ಆಗಬೇಕಿದೆ. ಕೇವಲ ಆತಂಕ ಸೃಷ್ಟಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.
ಕೃಷಿಯನ್ನು ಮುಂದುವರೆಸಲು ಹಲವು ಸವಾಲುಗಳು ಎದುರಾಗಿವೆ. ಸಮಸ್ಯೆ ಇದೆ ಎಂದ ಮಾತ್ರ ಎದೆಗುಂದಿ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ರಾಜ್ಯದಲ್ಲಿರುವ ಅನೇಕ ಕೃಷಿ ವಿವಿಗಳು ಕೃಷಿಗೆ ಸಂಬಂಧಿಸಿದಂತೆ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿಪಡಿಸಿ ಕ್ಯಾಂಪಸ್ ಒಳಗೆ ಇಟ್ಟುಕೊಳ್ಳಬಾರದು. ಅದನ್ನು ರೈತರಿಗೆ ತಲುಪಿಸಲು ಮುಂದಾಗಬೇಕು. ಆಗ ಸುಸ್ಥಿರ ಕೃಷಿ ಪದ್ಧತಿ ಬೆಳವಣಿಗೆ ಹೊಂದಿ ರೈತರಿಗೆ ಅನುಕೂಲವಾಗುತ್ತದೆ. ಹಾಗೆ ರೈತರು ಕೂಡ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು.
ಅನೇಕ ಹಳೆ ಪದ್ಧತಿಗಳನ್ನು ಮತ್ತೆ ಆರಂಭಿಸುವ ಬದಲು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದರು.
ಮುಂದಿನ ತಿಂಗಳು ಕೃಷಿ ಬೆಲೆ ಆಯೋಗ: ಬಜೆಟ್ನಲ್ಲಿ ಘೋಷಿಸಿದಂತೆ ರೈತರು ಬೆಳೆದ ಬೆಳೆಗೆ ತಕ್ಕುದಾದ ಬೆಲೆ ನೀಡಲು ಕೃಷಿ ಬೆಲೆ ಆಯೋಗವನ್ನು ಜಾರಿಗೆ ತರಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮುಂದಿನ ತಿಂಗಳು ಮುಖ್ಯಮಂತ್ರಿಗಳು ಚಾಲನೆ ನೀಡುವರುಎಂದರು.
ರಾಮಕೃಷ್ಣ ಆಶ್ರಮದ ಸ್ವಾಮಿ ಮಹೇಶಾತ್ಮಾನಂದಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಎಂ.ವಿ. ರಾಜಶೇಖರನ್, ರಾಣಿ ಸತೀಶ್, ಲೀಲಾದೇವಿ ಪ್ರಸಾದ್, ಶಾಸಕ ಗೋ. ಮಧುಸೂದನ್, ಸಿ. ಸೋಮಶೇಖರ್, ಸುರೇಶ್ ಹಾಲಭಾವಿ ಇತರರು ಇದ್ದರು.
ಕೃಷಿ ನೀತಿಯಲ್ಲಿ ಸ್ಪಷ್ಟತೆ ಇರಲಿ
ರಾಜ್ಯ ಸರ್ಕಾರ ಕೃಷಿ ನೀತಿ ಜಾರಿಗೆ ತಂದಲ್ಲಿ ಸುಧಾರಣೆ ಸಾಧ್ಯವಾಗಲಿದೆ. ಯಾವ ರೈತ ಯಾವ ಯಾವ ಕಾಲದಲ್ಲಿ, ಯಾವ ಬೆಳೆಯನ್ನು ಬೆಳೆಯಬೇಕು ಎಂಬುದನ್ನು ನೀತಿಯಲ್ಲಿ ತಿಳಿಸಬೇಕು.
ಟಿ ಡಾ.ಎಸ್.ಬಿ. ದಂಡಿನ್,ತೋಟಗಾರಿಕೆ ವಿವಿ ಕುಲಪತಿ
ಮಳೆ ನೀರು ಸದ್ಬಳಕೆಯಾಗಲಿ
ಬಿದ್ದ ಮಳೆಯನ್ನು ಬಿದ್ದ ಜಾಗದಲ್ಲಿಯೇ ಶೇಖರಿಸಿ ಇಡುವಂತೆ ಮಾಡುವುದು ಕೃಷಿಕನ ಜಾಣ್ಮೆಯಾಗಿದೆ. ಅದಕ್ಕಾಗಿ ಇಳಿಜಾರು ಪ್ರದೇಶದಲ್ಲಿ ಒಡ್ಡುಗಳಾಗಿ ಬದುಗಳನ್ನು ನಿರ್ಮಿಸಿ ಬಿತ್ತನೆ ಮಾಡಿದರೆ ಮಳೆ ನೀರು ವ್ಯಯವಾಗುವುದಿಲ್ಲ.
ಟಿ ಡಾ.ಎಂ.ಎ. ಶಂಕರ್, ಕೃಷಿ ಸಂಶೋಧಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

