ಮೈಸೂರು

ತಂಬಾಕು ಬೆಳೆಗಾರರ ಹಿತ ಗಮನದಲ್ಲಿರಲಿ

Published On :

ರಾವಂದೂರು: ಕೇಂದ್ರ ಸರ್ಕಾರ ಸಿಗರೇಟ್ ಮೇಲೆ ಅಬಕಾರಿ ಸುಂಕ ವಿಧಿಸುವುದನ್ನು ನಿರ್ಧರಿಸಬೇಕಾದರೆ ಲಕ್ಷಾಂತರ ತಂಬಾಕು ಬೆಳೆಗಾರರ ಹಿತವನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಪ್ರಗತಿಪರ ರೈತ ಹಾಗೂ ತಾಲೂಕು ಎಪಿಎಂಸಿ ಅಧ್ಯಕ್ಷ ಕೆ. ಹೊಲದಪ್ಪ ಆಗ್ರಹಿಸಿದರು. ಈಗಾಗಲೇ ಮಳೆ ಇಲ್ಲದೆ ತತ್ತರಿಸಿರುವ ಹಾಗೂ ಸೂಕ್ತ ಸಮಯಕ್ಕೆ ಸರಿಯಾಗಿ ತಂಬಾಕು ಮಂಡಳಿ ರೈತರಿಗೆ ಗೊಬ್ಬರ ವಿತರಿಸದೆ ತಂಬಾಕು ಬೆಳೆ ಅರ್ಧವೂ ಕೈಗೆ ಸಿಗದಂತಿರುವ ಇಂದಿನ ಪರಿಸ್ಥಿತಿಯಲ್ಲಿ ಸಿಗರೇಟ್ ಮೇಲೆ ಸುಂಕ ವಿಧಿಸಲು ಪ್ರಸ್ತಾವನೆ ಸಲ್ಲಿಸಿರುವುದು ರೈತರಿಗೆ ದಿಕ್ಕೆ ತೋಚದಂತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ತಂಬಾಕು ಮತ್ತು ತಂಬಾಕು ಉತ್ಪನ್ನದಿಂದ ದೇಶಕ್ಕೆ 28 ಸಾವಿರ ಕೋಟಿ ಅಬಕಾರಿ ಮತ್ತು ಕಂದಾಯ ಇಲಾಖೆಗೆ ಆದಾಯ ಸಂದಾಯವಾಗುತ್ತಿದ್ದು, ಹಾಗೆಯೇ ತಂಬಾಕು ರಫ್ತಿನಿಂದ ರು 6 ಸಾವಿರ ಕೋಟಿ ವಿದೇಶಿ ವಿನಿಮಯ ದೇಶಕ್ಕೆ ಹರಿದು ಬರುತ್ತಿದ್ದರೂ ಬಡ ತಂಬಾಕು ರೈತರ ಮೇಲೆ ಕರುಣೆ ಇಲ್ಲದೆ ಕೇಂದ್ರ ಸರ್ಕಾರ ಗದಪ್ರಹಾರ ಮಾಡಲು ಹೊರಟಿದೆ. ಕೂಡಲೇ ಈ ಬಗ್ಗೆ ಮರುಪರಿಶೀಲಿಸಿ ಈ ಶುಲ್ಕವನ್ನು ಕೈಬಿಡಬೇಕೆಂದು ಮನವಿ ಮಾಡಿದರು. ಜಿಪಂ ಮಾಜಿ ಸದಸ್ಯರಾದ ಡಿ.ಎ. ಜವರಪ್ಪ, ಎಸ್.ಟಿ. ರಾಜಶೇಖರ್, ಮುಖಂಡ ಅಪ್ಪಾಜಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.