ಮೈಸೂರು

ಪತ್ರಕರ್ತರು ಸ್ವಯಂ ನೀತಿ ಸಂಹಿತೆ ರೂಪಿಸಿಕೊಳ್ಳಲಿ

Published On :

ಚಾಮರಾಜನಗರ: ಪತ್ರಕರ್ತರು ಸ್ವಯಂ ನೀತಿ ಸಂಹಿತೆ ರೂಪಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿರಬೇಕು ಎಂದು ಮಾಧ್ಯಮ ಅಕಾಡೆಮಿ ಸದಸ್ಯ ಅಂಶಿ ಪ್ರಸನ್ನ ಕುಮಾರ್ ಸಲಹೆ ನೀಡಿದರು.  
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಮಾಧ್ಯಮ ಅಕಾಡೆಮಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗು ವಾರ್ತಾ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಕರ್ತರಿಗೆ ವೃತ್ತಿ ತರಬೇತಿ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮತ್ತು ಮಾಧ್ಯಮ ನೀತಿ ಸಂಹಿತೆ ವಿಷಯ ಕುರಿತು ಮಾತನಾಡಿದ ಅವರು, ಪತ್ರಕರ್ತ ಎಂದರೆ ಜನರು ಗೌರವ ಕೊಡುವ ರೀತಿಯಲ್ಲಿ ನಾವು ವೃತ್ತಿ ಮಾಡಬೇಕು. ಅದಕ್ಕಾಗಿ ನಮ್ಮಲ್ಲಿ ನಾವೇ ಕೆಲವು ನೀತಿ ಸಂಹಿತೆ ಅಳವಡಿಸಿಕೊಳ್ಳುವುದು ಅಳವಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ಯಾವುದೇ ವರದಿ ಬರೆಯುವ ಮುನ್ನ ಪತ್ರಕರ್ತರಿಗೆ ಪೂರ್ವ ಸಿದ್ಧತೆ ಮುಖ್ಯವಾಗಿರುತ್ತದೆ. ನಿಖರ ಅಂಕಿ ಅಂಶ ದಾಖಲೆಗಳನ್ನು ಸಮರ್ಪಕವಾಗಿ ಸಂಗ್ರಹಿಸಿದ ಬಳಿಕವೇ ವರದಿ ತಯಾರಿಸಬೇಕು. ನಿರ್ಲಕ್ಷ್ಯತೆಯಿಂದ ಸಿದ್ಧವಾದ ವರದಿಯಿಂದ ಮಾನನಷ್ಟ ಮೊಕದ್ದಮೆಯಂತಹ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದ ಅನಿವಾರ್ಯತೆ ಉಂಟಾಗಬಹುದು ಎಂದರು.
ವರದಿಗಾರ ಯಾವುದೇ ವರದಿಗಾರಿಕೆಯಲ್ಲಿ ವಾಸ್ತವ ಅಂಶಗಳನ್ನು ಬಿಂಬಿಸಬೇಕೆ ವಿನಹ ತನ್ನ ವಿಶ್ಲೇಷಣೆ ಅಭಿಪ್ರಾಯಗಳನ್ನು ಓದುಗರ ಮೇಲೆ ಹೇರಬಾರದು. ನ್ಯಾಯಾಲಯ ಪ್ರಕರಣಗಳ ವರದಿ ಮಾಡುವ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆ ವಹಿಸಬೇಕು. ನ್ಯಾಯಾಲಯ ನೀಡುವ ತೀರ್ಪಿಗೆ ಯಾವುದೇ ಬಾಧಕವಾಗದಂತೆ ಸೂಕ್ಷ್ಮವಾಗಿ ವರದಿ ಮಾಡಬೇಕು ಎಂದರು. ಪತ್ರಿಕೋದ್ಯಮ ಹೊಸ ಆಯಾಯ ಕುರಿತು ವಿಜಯವಾಣಿ ಸ್ಥಾನಿಕ ಸಂಪಾದಕ ಸಿ.ಕೆ. ಮಹೇಂದ್ರ, ವಿದ್ಯುನ್ಮಾನ ಮಾಧ್ಯಮ - ಸವಾಲುಗಳು ಮತ್ತು ನಿರ್ವಹಣೆ ಕುರಿತು ಹಿರಿಯ ಪತ್ರಕರ್ತ ಈಶ್ವರ ದೈತೋಟ, ನವ ಮಾಧ್ಯಮಗಳು ಕುರಿತು ಧಾರವಾಡ ವಿವಿ ನಿವೃತ್ತ ಮುಖ್ಯಸ್ಧ ಡಾ.ಎ.ಎಸ್. ಬಾಲಸುಬ್ರಮಣ್ಯಂ, ವರದಿಗಾರರ ನುಡಿ ವ್ಯಾಯಮ ಕುರಿತು ಪ್ರಜಾವಾಣಿ ಹಿರಿಯ ವರದಿಗಾರ ಕೆ. ನರಸಿಂಹಮೂರ್ತಿ ವಿಷಯ ಮಂಡಿಸಿದರು.   ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಪೊನ್ನಪ್ಪ, ಸದಸ್ಯರಾದ ಮಹಮದ್ ಯೂನಸ್, ಕಾರ್ಯದರ್ಶಿ ಶಂಕರಪ್ಪ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷಎ.ಡಿ.ಸಿಲ್ವ,  ಕಾರ್ಯದರ್ಶಿ ಆರ್.ಎನ್. ಸಿದ್ದಲಿಂಗಸ್ವಾಮಿ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎನ್.ಎಸ್. ಮಹೇಶ್ ಇದ್ದರು. ಪತ್ರಕರ್ತ ಫಾಲಲೋಚನ ಆರಾಧ್ಯ ಕಾರ್ಯಕ್ರಮ ನಿರ್ವಹಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.