ಮೈಸೂರು

ಪದ್ಮ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

Published On :

ಮೈಸೂರು: ಕೇಂದ್ರ ಸರ್ಕಾರದ ಗೃಹ ಸಚಿವಾಲಯದಿಂದ ಪ್ರತಿವರ್ಷ ನೀಡುವ ಪದ್ಮಶ್ರೀ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಾಗಿ ಅಸಾಧಾರಣ ಸಾಧನೆಗೈದಿರುವ ಅರ್ಹ ಸಾಧಕರಿದಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್ ಹೇಳಿದ್ದಾರೆ. 1954 ರಿಂದ ಪ್ರಾರಂಭಿಸಲಾದ ಈ ಪ್ರಶಸ್ತಿಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವ ದಿನಾಚರಣೆ ವೇಳೆ ಘೋಷಿಸಲಾಗುತ್ತದೆ. ಕಲೆ, ಸಮಾಜ ಕಾರ್ಯ, ಸಾರ್ವಜನಿಕ ವ್ಯವಹಾರ, ವಿಜ್ಞಾನ ಹಾಗೂ ತಂತ್ರಜ್ಞಾನ, ಕೈಗಾರಿಕೆ ಹಾಗೂ ಉದ್ದಿಮೆ, ವೈದ್ಯಕೀಯ, ಸಾಹಿತ್ಯ ಹಾಗೂ ಶಿಕ್ಷಣ ನಾಗರಿಕ ಸೇವೆ, ಕ್ರೀಡೆ ಹಾಗೂ ಇತರೆ ವಿಭಾಗಗಳಲ್ಲಿ ಅಪ್ರತಿಮ, ಅಸಾಧಾರಣ ಸೇವೆ ಸಲ್ಲಿಸಿರುವವರು ಈ ಮಹಾನ್ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆ.31 ಕಡೆ ದಿನ. ಹೆಚ್ಚಿನ ವಿವರಗಳಿಗಾಗಿ ಹಾಗೂ ಅರ್ಜಿ ನಮೂನೆಗಳಿಗಾಗಿ ಜಿಲ್ಲಾ ಯುವಜನ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ, ರಾಜರಾಜೇಶ್ವರಿ ದೇವಸ್ಥಾನದ ರಸ್ತೆ, ಇಂಡಸ್ಟ್ರಿಯಲ್ ಸಬ್ ಅರ್ಬ್, ವಿಶ್ವೇಶ್ವರನಗರ 3ನೇ ಹಂತ, ಮೈಸೂರು - 570008, ದೂ. 2489858 ಸಂಪರ್ಕಿಸಬಹುದು.
ತಪ್ತ ಮುದ್ರಾಧಾರಣೆ
ಮೈಸೂರು: ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮದಲ್ಲಿ ಜು.8 ಮತ್ತು 9 ರಂದು ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥ ಶ್ರೀಪಾದರಿಂದ ತಪ್ತ ಮುದ್ರಾಧಾರಣೆ ಏರ್ಪಡಿಸಿದೆ ಎಂದು ಕಾರ್ಯದರ್ಶಿ ರವಿಶಾಸ್ತ್ರಿ ಹೇಳಿದ್ದಾರೆ. ಜು.8 ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಜು.9ರ ಬೆಳಗ್ಗೆ 11 ರಿಂದ ಮಧ್ಯಾಹ್ನ 3ರವರೆಗೆ ನಡೆಯಲಿದೆ.
ದೇವರನಾಮ ತರಗತಿ
ಮೈಸೂರು: ಬೋಗಾದಿಯ ಪದ್ಮಕಲಾ ಸಿಂಚನ ಹಾಗೂ ರಮಾವಿಲಾಸ ರಸ್ತೆಯ ಮೀರಾ ಸಂಗೀತ ಕಲಾನಿಕೇತನದ ವತಿಯಿಂದ ಶ್ರೀ ರಾಘವೇಂದ್ರಸ್ವಾಮಿ ಆರಾಧಾನ 2014ರ ಅಂಗವಾಗಿ ಜು.10 ರಿಂದ ಆ.10ರವರೆಗೆ ಒಂದು ತಿಂಗಳ ದೇವರನಾಮ ತರಗತಿ ಹಮ್ಮಿಕೊಂಡಿದೆ. ಆಸಕ್ತರು ಹೆಸರು ನೋಂದಾಯಿಸಿಕೊಳ್ಳಲು ಜು.8 ಕಡೆ ದಿನ. ಮಾಹಿತಿಗಾಗಿ ಡಾ. ಸುಕನ್ಯಾ- ಮೊ. 9591332913, ಸುಜಾತ- ಮೊ. 9663832089 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.