ಮೈಸೂರು

ಪಾಸ್ಪೋರ್ಟ್ ಸೇವಾ ಕೇಂದ್ರ ಸ್ಥಾಪನೆಗೆ ಪ್ರಸ್ತಾವ

Published On :

ಮೈಸೂರು: ನಗರದಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ಆರಂಭಿಸುವಂತೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯ ಪ್ರತಾಪ್ ಸಿಂಹ ಅವರು ಮಂಗಳವಾರ ಲೋಕಸಭೆಯಲ್ಲಿ ಆಗ್ರಹಿಸಿದರು.
ವಿದ್ಯುತ್ ವ್ಯತ್ಯಯ ಇಂದು
ಮೈಸೂರು: ಕೆಎಚ್ಬಿ ವಿದ್ಯುತ್ ವಿತರಣ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ ಗೋಕುಲ್ದಾಸ್ ಹಾಗೂ ಕಿರ್ಲೋಸ್ಕರ್ ಮಾರ್ಗದಲ್ಲಿ ಆರ್ಎಪಿಡಿಆರ್ಪಿ ರಿಕಂಡಕ್ಟಿಂಗ್ ಕೆಲಸ ನಿಮಿತ್ತ ಈ ಕೆಳಕಂಡ ಪ್ರದೇಶಗಳಿಗೆ ಜು. 9ರ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದ್ದಾರೆ. ಬೆಳವಾಡಿ ಕೈಗಾರಿಕಾ ಪ್ರದೇಶ, ಬೆಳವಾಡಿ ಗ್ರಾಮ, ಹೂಟಗಳ್ಳಿ ಕೈಗಾರಿಕಾ ಪ್ರದೇಶ, ಹೂಟಗಳ್ಳಿ ಕೆಆರ್ಎಸ್ ರಸ್ತೆ ಕೆಲ ಭಾಗ, ಲಿಂಗದೇವರ ಕೊಪ್ಪಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಪ್ರಾಂಶುಪಾಲರಿಗೆ ಅಭಿನಂದನೆ
ಮೈಸೂರು: ಮಹಾರಾಜ ಕಾಲೇಜು ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಪ್ರೊ.ಬಿ. ನಾಗರಾಜಮೂರ್ತಿ ಅವರನ್ನು ಮಿತ್ರ ಬಳಗದ ವತಿಯಿಂದ ಅಭಿನಂದಿಸಲಾಯಿತು. ಬಳಗದ ಸದಸ್ಯ ಪ್ರೊ.ನಿ.ಗಿರಿಗೌಡ ಮಾತನಾಡಿ, ಮಹಾರಾಜ ಕಾಲೇಜನ್ನು ಆಕ್ಸ್ಫರ್ಡ್ ವಿವಿಗೆ ಹೋಲಿಸಲಾಗುತ್ತದೆ. ಈ ಕಾಲೇಜಿನಲ್ಲಿ ಘನ ಪಾಂಡಿತ್ಯ ಹೊಂದಿದ್ದ ಬಿಎಂಶ್ರೀ, ಎಂ.ವಿ. ಗೋಪಾಲಸ್ವಾಮಿ, ಡಾ.ಎಸ್. ರಾಧಾಕೃಷ್ಣನ್, ರಾಲೋ, ನಿಕ್ಕಂ ಮುಂತಾದವರು ಓದಿ, ಇಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಶೈಕ್ಷಣಿಕ ಗುಣಮಟ್ಟವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಸ್ಮರಿಸಿದರು. ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ.ಎಸ್. ದ್ವಾರಕಿ, ಕನ್ನಡ ಕ್ರಿಯಾ ಸಮಿತಿ ಉಪಾಧ್ಯಕ್ಷ ಎಂ.ಬಿ. ವಿಶ್ವನಾಥ್, ಪ್ರೊ.ರಾಮಸ್ವಾಮಿ, ಸಮಾಜ ಸೇವಕ ಕೆ. ರಘುರಾಂ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.