ಜೆಎಸ್ಎಸ್ ಪಾಲಿಟೆಕ್ನಿಕ್ಗೆ ಉತ್ತಮ ಫಲಿತಾಂಶ
ಮೈಸೂರು: ಕರ್ನಾಟಕ ತಾಂತ್ರಿಕ ಶಿಕ್ಷಣಾ ಪರೀಕ್ಷಾ ಮಂಡಳಿ ನಡೆಸಿದ ಪಾಲಿಟೆಕ್ನಿಕ್ ಡಿಪ್ಲೋಮಾ ಪರೀಕ್ಷೆಯಲ್ಲಿ ಜೆಎಸ್ಎಸ್ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿಗೆ ಶೇ.84 ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 173 ವಿದ್ಯಾರ್ಥಿನಿಯರಲ್ಲಿ 76 ಮಂದಿ ಅತ್ಯುನ್ನತ ಶ್ರೇಣಿ, 65 ಮಂದಿ ಉನ್ನತ ಶ್ರೇಣಿ, 4 ಮಂದಿ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿನಿಯರಾದ ಆರ್. ದೀಕ್ಷಿತಾಗೆ ಕಂಪ್ಯೂಟರ್ ಸೈನ್ಸ್ನಲ್ಲಿ 92 ಅಂಕ, ಬಿ. ಪ್ರಿಯಾಗೆ ಇ ಅಂಡ್ ಸಿನಲ್ಲಿ 92 ಅಂಕ ಬಂದಿದೆ.
ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ
ಮೈಸೂರು: ನಗರದ ಎಂಎಂಕೆ ಮತ್ತು ಎಸ್ಡಿಎಂ ಬಾಲಕಿಯರ ಪಿಯು ಕಾಲೇಜಿನ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇನ್ಫೋಸಿಸ್ನ ತರಬೇತುದಾರ ಮುರಳಿ ಮಾತನಾಡಿ, ಯಾವುದೇ ಷರತ್ತುಗಳಿಲ್ಲದೆ ಇತರರನ್ನು ಗೌರವಿಸಬೇಕು. ಉತ್ತಮ ನಡತೆ ಹೊಂದಿರಬೇಕು. ಪರೀಕ್ಷೆಯನ್ನು ಯಾವ ರೀತಿ ಎದುರಿಸಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿಸಿದರು. ಎಸ್ಡಿಎಂ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ವಿ. ದಾಮೋದರಗೌಡ ಅಧ್ಯಕ್ಷತೆ ವಹಿಸಿದ್ದರು. ಪಿಯು ಕಾಲೇಜು ಪ್ರಾಂಶುಪಾಲೆ ಎಂ.ವಿ. ಆಶಾ, ಡೀನ್ ಡಾ.ಓ.ಎಲ್. ಸುಮಾ ಇದ್ದರು. ಚಂದನ ಪ್ರಾರ್ಥಿಸಿದರು. ಸ್ವಾತಿ ಸ್ವಾಗತಿಸಿದರು. ನಯನ ಭಾರದ್ವಾಜ್ ಪರಿಚಯಿಸಿದರು. ಜಮುನ ವಂದಿಸಿದರು. ಹರ್ಷಿತಾ ಆನಂದ್ ವಂದಿಸಿದರು.
ಕೊಡಗು ಗೌಡ ಸಮಾಜಕ್ಕೆ ಪದಾಧಿಕಾರಿಗಳ ನೇಮಕ
ಮೈಸೂರು: ನಗರದ ಕೊಡಗು ಗೌಡ ಸಮಾಜಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರಾಗಿ ಕುದುಪಜೆ ಕೆ. ಕುಶಾಲಪ್ಪ, ಉಪಾಧ್ಯಕ್ಷರಾಗಿ ಚೆಟ್ಟಿಮಾಡ ಯು. ಜನಾರ್ದನ, ಗೌರವ ಕಾರ್ಯದರ್ಶಿಯಾಗಿ ಕುಂಟಿಕಾನ ಎಸ್. ಗಣಪತಿ, ಸಹ ಕಾರ್ಯದರ್ಶಿಯಾಗಿ ಕೂಡಕಂಡಿ ಜಿ. ಭರತ್, ಖಜಾಂಚಿಯಾಗಿ ಕಡ್ಯದ ರವಿ ಭೀಮಯ್ಯ, ನಿರ್ದೇಶಕರಾಗಿ ನಡುಮನೆ ರುಕ್ಮಿಣಿ ಆನಂದ, ನಡುವಟ್ಟೀರ ಗೀತಾ ಲಕ್ಷ್ಮಣ, ಕೋಳಿಮಾಡು ಡಿ. ಅಶೋಕ್, ನಾಗೇಶ್ ಪಾಣತ್ತಲೆ, ಹೊಸೂರು ಎಂ. ವಸಂತಕುಮಾರ್, ನೆಯ್ಯಣಿ ಕೆ. ರಮೇಶ್, ತಡಿಯಪ್ಪನ ಬಿ. ತೇಜಕುಮಾರ್, ಚಂಡೀರ ಕೆ. ಬಸಪ್ಪ, ಕೊಂಬಂಡ ಯು. ಭೀಮಯ್ಯ ಆಯ್ಕೆಯಾಗಿದ್ದಾರೆ.
ದಸಂಸ ಪ್ರತಿಭಟನೆ ಇಂದು
ಮೈಸೂರು: ಉತ್ತರಪ್ರದೇಶ ಬದಾಯಾಂನದಲ್ಲಿ ಮೂವರು ದಲಿತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹಲ್ಲೆ ಮಾಡಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಜು.10ರ ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಆಲಗೂಡು ಶಿವಕುಮಾರ್ ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿ ಸಾವು
ಮೈಸೂರು: ನಗರದ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯ ಜೆಎಂಪಿ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಸರಿಯಾದ ಊಟ ಇಲ್ಲದೆ, ಯಾವುದೋ ಕಾಯಿಲೆಯಿಂದ ನರಳಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ. ಚಹರೆ- 65 ವರ್ಷ, 5.5 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಣಕಲು ದೇಹ, ಬಿಳಿ ತಲೆ ಕೂದಲು, ಕಪ್ಪು ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ.0821- 2418306 ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ.
ಶಾಲಾ ಮಂತ್ರಿಮಂಡಲ, ಸಾಂಸ್ಕೃತಿಕ ವೇದಿಕೆಗೆ ಆಯ್ಕೆ
ಕೆ.ಆರ್. ನಗರ: ಪಟ್ಟಣದ ಲಯನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 2014-15ನೇ ಸಾಲಿನ ಶಾಲಾ ಮಂತ್ರಿ ಮಂಡಲ ಹಾಗೂ ಸಾಂಸ್ಕೃತಿಕ ವೇದಿಕೆ ರಚಿಸಲಾಗಿದ್ದು, ಮುಖ್ಯಮಂತ್ರಿಯಾಗಿ ಜೆ.ಸಿ. ಪವನ್ ಆಯ್ಕೆಯಾಗಿದ್ದಾರೆ.
ಕೆ.ಎಸ್. ತೇಜಸ್(ಶಿಕ್ಷಣ ಮಂತ್ರಿ), ಸೈಯದ್ಅಹಮದ್ (ವಾರ್ತಾ ಮಂತ್ರಿ), ಎಂ. ಸಿಂಚನ (ಕ್ರೀಡಾ ಮಂತ್ರಿ), ಕೆ.ಎಂ. ವರ್ಷ(ಆಹಾರ ಮಂತ್ರಿ), ವಿ.ಆರ್. ಕೃತಿಕ(ಸಾಂಸ್ಕೃತಿಕ ಮಂತ್ರಿ), ಎಸ್. ಕೀರ್ತನ (ಆರೋಗ್ಯ ಮಂತ್ರಿ), ಸುಚಿತ್ರ (ಸ್ವಚ್ಛತಾ ಮಂತ್ರಿ), ಕೆ. ತೇಜಸ್ (ತೋಟಗಾರಿಕಾ ಮಂತ್ರಿ) ಆಯ್ಕೆಯಾದರು. ಸಾಂಸ್ಕೃತಿಕ ವೇದಿಕೆ ಪದಾಧಿಕಾರಿಗಳಾಗಿ ಎಸ್.ಪಿ. ವಿಸ್ಮಯ (ಗೌರವಾಧ್ಯಕ್ಷರು), ಎನ್.ಜಿ. ಚರಣ್ಕುಮಾರ್ (ಅಧ್ಯಕ್ಷರು), ಎಸ್.ಆರ್. ಸಹನ (ಉಪಾಧ್ಯಕ್ಷೆ), ಪ್ರತಿಭಾ (ಕಾರ್ಯದರ್ಶಿ), ಎಚ್.ಕೆ. ಗಣೇಶ್ (ಸಹ ಕಾರ್ಯದರ್ಶಿ), ಎಂ.ಕೆ. ಪುಣ್ಯಶ್ರೀ (ಖಜಾಂಚಿ), ನಿಶಾ ಎಚ್. ಪಾಟೀಲ್ (ಸಂಚಾಲಕಿ), ಎ.ವೈ. ಪವನ್ಕುಮಾರ್ (ನಿರ್ದೇಶಕ) ಹಾಗೂ ಆರ್.ಎನ್. ಮೌಲ್ಯ (ಸಲಹೆಗಾರರು) ಆಯ್ಕೆಯಾಗಿದ್ದಾರೆ.
ರವಿಕುಮಾರ್ ಆಯ್ಕೆ
ಪಿರಿಯಾಪಟ್ಟಣ : ಸಂಘದ ಸದಸ್ಯರು ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಪಟ್ಟಣದ ಕಾರು ಚಾಲಕರ ಹಾಗೂ ಮಾಲೀಕರ ಸಂಘದ ನೂತನ ಅಧ್ಯಕ್ಷ ರವಿಕುಮಾರ್ ಹೇಳಿದರು. ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಮಾತನಾಡಿದ ಅವರು, ಸಂಘದ ಸಮಸ್ಯೆಗಳು ಹಲವಾರು ಇವೆ. ಅವುಗಳನ್ನು ಶಾಸಕರ, ಅಧಿಕಾರಿಗಳ ಸಹಕಾರದೊಂದಿಗೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಉಪಾಧ್ಯಕ್ಷ ಜಮೀಲ್ಅಹಮದ್, ಕಾರ್ಯದರ್ಶಿ ಬಿ. ರವಿ, ಸಹ ಕಾರ್ಯದರ್ಶಿ ಮಹೇಶ್ಗೌಡ, ಖಜಾಂಚಿ ಪ್ರಮಥೇಶ್, ಸದಸ್ಯರಾದ ಅತಿಕ್, ಐ.ಬಿ. ಕುಮಾರ್, ಕೆ. ಸುರೇಶ್, ಪಿ.ಆರ್. ಗಣೇಶ್, ಪ್ರಕಾಶ್, ಮಂಜಣ್ಣ, ಬಾಬು, ಗೌಸ್ಷರೀಫ್, ರಫೀಕ್ ಇದ್ದರು.
ಕೋಗಿಲವಾಡಿಯಲ್ಲಿ ಚಿರತೆ ಪ್ರತ್ಯಕ್ಷ
ಪಿರಿಯಾಪಟ್ಟಣ: ತಾಲೂಕಿನ ಕೋಗಿಲವಾಡಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಗ್ರಾಮದ ಹೊರವಲಯದಲ್ಲಿರುವ ಮನೆಯೊಂದರ ಬಳಿ ಮಂಗಳವಾರ ರಾತ್ರಿ ಚಿರತೆ ಪ್ರತ್ಯಕ್ಷಗೊಂಡು ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರುಗಳ ಮೇಲೆ ದಾಳಿ ನಡೆಸಲು ಮುಂದಾಗಿದ್ದ ಚಿರತೆಯನ್ನು ಕಂಡ ಮನೆಯವರು ಹಾಗೂ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಶಬ್ಧ ಮಾಡಿ ಚಿರತೆಯನ್ನು ಓಡಿಸಿದ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬೇಟಿ ನೀಡಿ ಚಿರತೆ ಬಂದಿರುವ ಬಗ್ಗೆ ಮಾಹಿತಿ ಕಲೆಹಾಕಿದರು. ಈ ಸಂಬಂಧ ವಲಯ ಅರಣ್ಯಾಧಿಕಾರಿ ಎಂ.ಎಸ್. ಚಿಣ್ಣಪ್ಪ ಮಾತನಾಡಿ, ಕಾಡಂಚಿನ ಗ್ರಾಮಗಳಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಸಾಧ್ಯವಾದಷ್ಟು ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇಟ್ಟುಕೊಳ್ಳುವಂತೆ ಹಾಗೂ ಚಿರತೆ ಸೇರಿದಂತೆ ಕಾಡುಪ್ರಾಣಿಗಳು ಕಂಡುಬಂದಲ್ಲಿ ವಲಯ ಅರಣ್ಯಾಧಿಕಾರಿಗಳ ಕಚೇರಿ ದೂ. ಸಂಖ್ಯೆ 08223-274279 ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಪುಷ್ಪಾ ರಮೇಶ್ಗೆ ಅವಕಾಶ ನೀಡಲು ಮನವಿ
ಭೇರ್ಯ: ಜಿಪಂ ಸದಸ್ಯೆ ಪುಷ್ಪಲತಾ ರಮೇಶ್ ಅವರಿಗೆ ಈ ಬಾರಿ ಜಿಪಂ ಉಪಾಧ್ಯಕ್ಷ ಸ್ಥಾನ ನೀಡುವಂತೆ ಜಿಲ್ಲಾ ಕಾಂಗ್ರೆಸ್ ವರಿಷ್ಠರನ್ನು ಗ್ರಾಪಂ ಅಧ್ಯಕ್ಷೆ ಪುಟ್ಟತಾಯಮ್ಮ ಒತ್ತಾಯಿಸಿದ್ದಾರೆ.
ಜಿಪಂ ಕ್ಷೇತ್ರಕ್ಕೆ ಪುಷ್ಪಲತಾ ಆಯ್ಕೆಯಾದ ಮೇಲೆ 5.80 ಕೋಟಿ ಅನುದಾನ ನೀಡಿದ್ದು, ಅದರಲ್ಲಿ 4 ಕೋಟಿಗಳನ್ನು ಪ್ರತಿಯೊಂದು ಗ್ರಾಮಕ್ಕೂ ಕುಡಿಯುವ ನೀರು ಸರಬರಾಜು ಯೋಜನೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ ಇದು ಶ್ಲಾಘನೀಯ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲೆಯಲ್ಲಿ ವೀರಶೈವ ಸಮಾಜದಿಂದ ಏಕೈಕ ಜಿಪಂ ಸದಸ್ಯೆಯಾಗಿ ಆಯ್ಕೆಯಾಗಿದ್ದು, ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದು, ಕ್ಷೇತ್ರದ ಮೂಲ ಸಮಸ್ಯೆಗಳಿಗೆ ಹೆಚ್ಚು ಒತ್ತು ಕೊಟ್ಟು ಹಾಗೂ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಇವರಿಗೆ ಈ ಬಾರಿ ಜಿಪಂ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ತಾಲೂಕಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಶಕ್ತಿ ತುಂಬಿದ ಹಾಗೆ ಎಂದು ಕಾಂಗ್ರೆಸ್ ವರಿಷ್ಠರಲ್ಲಿ ಮನವಿ ಮಾಡಿದರು.ಗ್ರಾಪಂ ಸದಸ್ಯರಾದ ಪ್ರಕಾಶ್, ಕೃಷ್ಣೇಗೌಡ, ಕಾಂಗ್ರೆಸ್ ಮುಖಂಡರಾದ ಕಾಳೇಗೌಡ, ಮೋಹನ್ ಇದ್ದರು.
ಅಂತಾರಾಜ್ಯ ವಧುವರಾನ್ವೇಷಣಾ ಸಮಾವೇಶ ಆ.3ಕ್ಕೆ
ಮೈಸೂರು: ನಗರದ ಸಪ್ತಪದಿ ವಿವಾಹ ವೇದಿಕೆಯು ಅಂತಾರಾಜ್ಯ ಮಟ್ಟದ ಬ್ರಾಹ್ಮಣ ವಧುವರಾನ್ವೇಷಣ ಸಮಾವೇಶವನ್ನು ಆ.3 ರಂದು ನಾದಬ್ರಹ್ಮ ಸಂಗೀತ ಸಭಾದಲ್ಲಿ ಆಯೋಜಿಸಿದೆ. ಆ. 3ರ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಬ್ರಾಹ್ಮಣ ವಧುವರಾನ್ವೇಷಣೆ ನಡೆಯಲಿದೆ. ಬ್ರಾಹ್ಮಣ ಸಮಾಜದ ವಧು ವರರು, ವಿಧವೆಯರು, ವಿಚ್ಛೇದಿತರು ಈ ನೋಂದಣಿ ಅಭಿಯಾನದಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಪಾಲ್ಗೊಳ್ಳಬಹುದು. ವಧು ವರರ ಪೋಷಕರು ಜಾತಕ, ಭಾವಚಿತ್ರದೊಂದಿಗೆ ಹೆಸರು ನೋಂದಾಯಿಸಿ ಸಮಾವೇಶದಲ್ಲಿ ಪಾಲ್ಗೊಳ್ಳಬಹುದು ಎಂದು ವಂಗೀಪುರ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹೆಚ್ಚಿನ ಮಾಹಿತಿಗೆ ಮೊ. 9036299942 ಸಂಪರ್ಕಿಸಬಹುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

