1.25 ಕೋಟಿ ಕಾಮಗಾರಿಗೆ ಶಾಸಕ ಜಿಟಿ ದೇವೇಗೌಡ ಚಾಲನೆ
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1.25 ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಜಿ.ಟಿ. ದೇವೇಗೌಡರ ಚಾಲನೆ ನೀಡಿದರು.
ದಟ್ಟಗಳ್ಳಿ 2ನೇ ಹಂತದಲ್ಲಿ ರು. 19.09 ಲಕ್ಷ ವೆಚ್ಚದಲ್ಲಿ ಕೆ. ಬ್ಲಾಕ್ ಮತ್ತು ಎಚ್ ಬ್ಲಾಕ್ ಸಂಪರ್ಕಿಸುವ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿ, ದಟ್ಟಗಳ್ಳಿ 2ನೇ ಹಂತದ ಎಂಡಿಎ ನೌಕರರ ಬಡಾವಣೆಯಲ್ಲಿ ರು. 17.49 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಉದ್ಯಾನವನ ಅಭಿವೃದ್ಧಿಪಡಿಸುವ ಕಾಮಗಾರಿ, ರು. 60.13 ಲಕ್ಷ ವೆಚ್ಚದಲ್ಲಿ ದಿಗಂತ ಭವನದ ಹತ್ತಿರ ಚದುರಂಗ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿ, ದಟ್ಟಗಳ್ಳಿ 2ನೇ ಹಂತ ರಾಮಕೃಷ್ಣನಗರ ಎ ಮತ್ತು ಬಿ ಬ್ಲಾಕ್ನಲ್ಲಿ ಬರುವ ಎಚ್ಐಜಿ ಮನೆ ಸಂಖ್ಯೆ 29ರ ಮುಂಭಾಗದ ಮತ್ತು 390ರ ಮುಂಭಾಗದಲ್ಲಿನ ರಸ್ತೆಗಳನ್ನು ರು. 18.02 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ, ಹಾಗೂ ದಟ್ಟಗಳ್ಳಿ 2ನೇ ಹಂತ ರಾಮಕೃಷ್ಣನಗರ ಐ ಬ್ಲಾಕ್ನಲ್ಲಿ ಬರುವ ವಾಸು ಬಡಾವಣೆಯ ನಿ. ಸಂಖ್ಯೆ 12 ರಿಂದ 22ರ ಮುಂಭಾಗ ಹಾಗೂ ದೊಡ್ಡ ಮಳೆ ನೀರು ಚರಂಡಿಯ ಪಕ್ಕದಲ್ಲಿ ಬರುವ ಉದ್ಯಾನವನ ರು. 10.71 ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಚಾಲನೆ ನೀಡಿದರು.
ನಗರಪಾಲಿಕೆ ಸದಸ್ಯ ಶಂಕರ್, ಜೆಡಿಎಸ್ ನಗರಾಧ್ಯಕ್ಷ ರಾಜಣ್ಣ, ಜೆ ಮುಖಂಡರಾದ ಬೆಳವಾಡಿ ಶಿವಮೂರ್ತಿ, ಬೀರಿಹುಂಡಿ ಬಸವಣ್ಣ, ಬೋರಪ್ಪ, ಕೆ.ಜಿ. ಕೊಪ್ಪಲು ಶೇಖರ್, ಗಣೇಶ್, ಈಶ್ವರ್, ವಿಜಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

