ಮೈಸೂರು

ಕೇಂದ್ರದ್ದು ಬಂಡಲ್ ಬಜೆಟ್: ರೈತ ಸಂಘ ವ್ಯಂಗ್ಯ

Published On :

ಮೈಸೂರು: ನೂತನ ಸರ್ಕಾರದ ಪರವಾಗಿ ಸಂಸತ್ತಿನಲ್ಲಿ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಬಂಡಲ್ ಬಜೆಟ್ ಆಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವ್ಯಂಗ್ಯವಾಡಿದೆ. ದೇಶಕ್ಕಾಗಿ ಮತ ಹಾಕಿ ಎಂದು ಮನವಿ ಮಾಡಿ ಅಧಿಕಾರಕ್ಕೆ ಬಂದ ನಂತರ ಎನ್ಡಿಎ ಸರ್ಕಾರ ಚೊಚ್ಚಲ ಬಜೆಟ್ನಲ್ಲೆ ದೇಶದ ಸಂಪತ್ತನ್ನು ವಿದೇಶಿಯರಿಗಾಗಿ ಮೀಸಲಿಟ್ಟಿದೆ. ಖಚಿತ ಸ್ವಯಂ ಬಂಡವಾಳ ಸಂಪನ್ಮೂಲ ಕ್ರೋಢೀಕರಿಸಲು ಯಾವುದೇ ಸ್ಪಷ್ಟ ಅಥವಾ ನಿರ್ದಿಷ್ಟ ಗುರಿ ಈ ಬಜೆಟ್ನಲ್ಲಿ ಇಲ್ಲ. ಎಲ್ಲವನ್ನು ಪರದೇಶದ ಬಂಡವಾಳಿಗರ ಮೇಲೆ ಅವಲಂಬಿಸಿರುವ ಬಜೆಟ್ ಇದಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.


ಶ್ರೀಸಾಮಾನ್ಯರನ್ನು ದುಸ್ತರ ಮಾಡುವ ಬಜೆಟ್: ಪಿಐಎಂಎಲ್


ಮೈಸೂರು: ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಶ್ರೀಸಾಮಾನ್ಯರ ಬದುಕನ್ನು ದುಸ್ತರಗೊಳಿಸುವ ಬಜೆಟ್ ಆಗಿದೆ ಎಂದು ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಚೌಡಹಳ್ಳಿ ಜವರಯ್ಯ ಟೀಕಿಸಿದ್ದಾರೆ. ಚುನಾವಣೆಗಳಲ್ಲಿ ಜನಪ್ರಿಯ ಘೋಷಣೆಗಳನ್ನೇ ಬಂಡವಾಳವನ್ನಾಗಿಟ್ಟುಕೊಂಡು ಸಾಮಾನ್ಯರ ಮುಗ್ದತೆಯನ್ನೇ ಹಾಳು ಮಾಡುವ ಸರ್ಕಾರಗಳು ಶ್ರೀಸಾಮಾನ್ಯರ ಬದುಕನ್ನು ದುರ್ಬಲಗೊಳಿಸಿವೆ. ಅವೈಜ್ಞಾನಿಕ ನೀತಿಗಳು ಮತ್ತು ಬಂಡವಾಳಶಾಹಿಗಳ ಓಲೈಕೆಯಿಂದಾಗಿ ಮಧ್ಯಮ ವರ್ಗದವರ ಪಾಡು ಹೇಳತೀರದಂತಿದೆ. ಕರ್ನಾಟಕ ಸರ್ಕಾರವೂ ಕೂಡ ಬಡ ವರ್ಗದವರಿಗೆ ಮಿಠಾಯಿ ತೋರಿಸುತ್ತಾ ಮೂಲಭೂತ ಅವಶ್ಯಕ ಸಾಮಾಗ್ರಿಗಳ ಬೆಲೆ ಹೆಚ್ಚಿಸುತ್ತಾ ಸಕ್ಕರೆ ಕಡ್ಡಿಗೆ ಡಾಲರ್ ಬೆಲೆ ಎನ್ನುವಂತೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.