ಅರಮನೆ ಸುತ್ತಮುತ್ತ ಗೂಡಂಗಡಿ ಬೇಡ
ಮೈಸೂರು: ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಸುತ್ತಮುತ್ತಲಿರುವ ಗೂಡಂಗಡಿಗಳನ್ನು ತೆರವುಗೊಳಿಸಲು ಆಗ್ರಹಿಸಿ ಮೈಸೂರು ರಕ್ಷಣಾ ವೇದಿಕೆಯವರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು. ಅರಮನೆ ದಕ್ಷಿಣ ದ್ವಾರದಲ್ಲಿ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಬೇಕು. ಅರಮನೆ ಮಂಡಳಿಯು ಕೆಎಂಎಫ್, ಹಾಪ್ಕಾಮ್ಸ್, ಕಾವೇರಿ ಎಂಪೋರಿಯಂ ಸೇರಿದಂತೆ 5-6 ಅಂಗಡಿಗಳಿಗೆ ಮಾತ್ರ ಅನುಮತಿ ನೀಡಿದೆ. ಆದರೆ, ಅನಧಿಕೃತವಾಗಿ ಹಲವಾರು ಗೂಡಂಗಡಿಗಳು, ಅರಮನೆ ಸೌಂದರ್ಯಕ್ಕೆ ಧಕ್ಕೆ ತರುವಂತಹ ಹಲವಾರು ಗಾಡಿ ಹೊಟೇಲ್ಗಳು ತಲೆ ಎತ್ತಿವೆ ಎಂದು ಆರೋಪಿಸಿದರು. ಅರಮನೆಗೆ ಭಯೋತ್ಪಾದಕರಿಂದ ಅಪಾಯವಿದೆ. ಅರಮನೆ ಸುತ್ತಮುತ್ತಲಿನ ಗೂಡಂಗಡಿಗಳಲ್ಲಿರುವ ವ್ಯಾಪಾರಿಗಳ ಬಗ್ಗೆ ಅರಮನೆ ಮಂಡಳಿ, ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಬಳಿ ಯಾವುದೇ ಮಾಹಿತಿ ಇಲ್ಲ. ಅರಮನೆ ಭದ್ರತೆ ದೃಷ್ಟಿಯಿಂದ ಈ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಗೂಡಂಗಡಿ ವ್ಯಾಪಾರಿಗಳು ಪ್ರವಾಸಿಗರಿಂದ ಹೆಚ್ಚಿನ ಹಣ ಪಡೆಯುತ್ತಿದ್ದಾರೆ. ಅರಮನೆ ಮಂಡಳಿ ಮತ್ತು ಪೊಲೀಸರು ವ್ಯಾಪಾರಿಗಳಿಂದ ಹಣ ಪಡೆಯುತ್ತಿರುವ ಆರೋಪವಿದ್ದು, ಈ ಸಂಬಂಧ ಸೂಕ್ತ ತನಿಖೆ ಆಗಬೇಕು. ರಾಜಮಾರ್ಗ ಸೌಂದರ್ಯಕ್ಕೂ ಗೂಡಂಗಡಿಗಳಿಂದ ಧಕ್ಕೆ ಆಗಿದೆ. ಭಯೋತ್ಪಾದಕ ಸಂಘಟನೆಯವರು ಇಂತಹ ಗೂಡಂಗಡಿಗಳನ್ನು ಸುಲಭವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈ ಅಂಗಡಿಗಳನ್ನು ತೆರವುಗೊಳಿಸಿ, ಅರಮನೆ ಸೌಂದರ್ಯ ಉಳಿಸಬೇಕು ಎಂದು ಆಗ್ರಹಿಸಿದರು. ವೇದಿಕೆಯ ಅಧ್ಯಕ್ಷ ಮೈ.ಕಾ. ಪ್ರೇಮ್ಕುಮಾರ್, ಮುಖಂಡರಾದ ಕುಮಾರ್ಗೌಡ, ರಾಕೇಶ್ ಭಟ್, ಗುರುರಾಜ್ ಶೆಟ್ಟಿ, ಪ್ರಮೋದ್ಗೌಡ, ವಿಕ್ರಮ್, ಎಸ್.ಎನ್. ರಾಜೇಶ್, ಗುರುಮೂರ್ತಿ, ಅಜಯ್ ಶಾಸ್ತ್ರಿ, ಪ್ರಶಾಂತ್, ಮಂಜೇಶ್, ಚಂದ್ರು, ಕುಮಾರ್, ದೀಪಕ್, ಸಂತೋಷ್ ನಿತಿನ್, ಮಹೇಶ್ಗೌಡ, ಜಯಣ್ಣ, ನರಸಿಂಹೇಗೌಡ, ಮಂಜುನಾಥ್, ವೀರಭದ್ರಸ್ವಾಮಿ, ಮಧು, ಆನಂದ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

