ಮುಸುಕಿನ ಜೋಳಕ್ಕೆ ಬೇಡಿಕೆ ಹೆಚ್ಚಳ
ಬೈಲುಕುಪ್ಪೆ: ಹಿಂದಿನ ವರ್ಷಗಳು ಕಳೆದಂತೆ ಮುಸುಕಿನ ಜೋಳಕ್ಕೆ ಹೆಚ್ಚಿನ ಬೇಡಿಕೆಯಾಗುತ್ತಿದೆ ಎಂದು ತಳಿ ವಿಜ್ಞಾನಿ ಡಾ. ಪುಟ್ಟರಾಮನಾಯಕ್ ಹೇಳಿದರು.
ಇಲ್ಲಿಗೆ ಸಮೀಪದ ಮುತ್ತೂರು ಗ್ರಾಮದ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಮುಸುಕಿನ ಜೋಳದ ಬೆಳೆಯಲ್ಲಿ ನಿಖರ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಸುಕಿನ ಜೋಳವನ್ನು ಆಹಾರ ಪದ್ಧತಿ ಜೊತೆಗೆ ಕೋಳಿ ಸಾಕಣೆ ಮತ್ತು ಕಾರ್ಖಾನೇತರಗಳಿಗೂ ವಿಸ್ತರಣೆಯಾಗುತ್ತಿದ್ದು, ಉತ್ಪಾದನೆಯು ಸಹ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ಆದರೆ ವ್ಯವಸಾಯ ಭೂಮಿ ಕೊರತೆಯಾಗುತ್ತಿರುವುದರಿಂದ ಇರುವ ಭೂಮಿಯಲ್ಲೇ ನಿಯಮಾನುಸಾರವಾಗಿ ಉತ್ತಮ ಇಳುವರಿ ಪಡೆಯಲು ರೈತರು ಮುಂದಾಗಬೇಕು ಎಂದು ಮಾಹಿತಿ ನೀಡಿದರು.
ಪಿರಿಯಾಪಟ್ಟಣದ ಸಹಾಯಕ ಕೃಷಿ ನಿರ್ದೇಶಕ ಡಾ.ಕೆ.ರಾಜು ಮಾತನಾಡಿ, ಮುಸುಕಿನ ಜೋಳ ಬೇಸಾಯಕ್ಕೆ ಪಿರಿಯಾಪಟ್ಟಣ ತಾಲೂಕಿನ ಮಣ್ಣು ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ತಂಬಾಕು ಉತ್ಪಾದನೆ ರದ್ದಾಗುವ ಸೂಚನೆ ಇರುವುದರಿಂದ ಮುಸುಕಿನ ಜೋಳದ ಬೇಸಾಯದ ಬಗ್ಗೆ ಪೂರ್ಣ ಪ್ರಮಾಣವಿದ್ದಲ್ಲಿ ರೈತರು ಅರಿವು ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಮಣ್ಣು ಪರೀಕ್ಷಾ ತಜ್ಞ ಡಾ.ಎಸ್.ಎಸ್. ಪ್ರಕಾಶ್ ಮಾತನಾಡಿ, ಕೊಟ್ಟಿಗೆ ಗೊಬ್ಬರದ ಕೊರತೆಯಿಂದ ಮತ್ತು ರಾಸಾಯನಿಕ ಗೊಬ್ಬರವನ್ನು ಅತೀ ಹೆಚ್ಚು ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಆದ್ದರಿಂದ ನಿಯಮಾನುಸಾರವಾಗಿ ಬಿತ್ತನೆ ಮಾಡುವ ಮೂಲಕ ನಿಗದಿತ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ರಸಗೊಬ್ಬರ ಬಳಸಿ ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಅಧಿಕ ಉತ್ಪಾದನೆ ಮಾಡಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಕೃಷಿ ತಜ್ಞ ಡಾ.ಎಸ್.ಪಿ. ಯೋಗಾನಂದ, ಡಾ.ಆರ್.ಕೃಷ್ಣಮೂರ್ತಿ, ಡಾ.ಡಿ.ಕೆ. ಸಿದ್ದೇಗೌಡ, ಸಿಬ್ಬಂದಿ ವರ್ಗದವರಾದ ಎಂ.ಕೆ. ಶ್ರುತಿ, ಎಂ.ದಿವ್ಯ, ಟಿ. ಸತೀಶ್, ಪ್ರಕಾಶ್, ಅಕ್ರಂ ಹಾಗೂ ನೂರಾರು ಮಂದಿ ರೈತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

