ಮೈಸೂರು

ಜಮೀನು ಒತ್ತುವರಿ ತೆರವಿಗೆ ಆಗ್ರಹ

Published On :

ಹುಣಸೂರು: ತಾಲೂಕಿನ ಬನ್ನಿಕುಪ್ಪೆ ಗ್ರಾಮದ ನಿವಾಸಿಯೊಬ್ಬರು ಕಸಬಾ ಹೋಬಳಿ ಸರ್ವೇ ನಂ.242, 243 ಮತ್ತು 247ರಲ್ಲಿ ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸಿ ಜಮೀನುಗಳಿಗೆ ದಾರಿ ಗುರುತಿಸಿಕೊಡಬೇಕೆಂದು ರೈತರು ಮನವಿ ಮಾಡಿದ್ದಾರೆ. 1994ರಲ್ಲಿ ಕಂದಾಯ ಇಲಾಖಾಧಿಕಾರಿಗಳು ದಾರಿಯನ್ನು ಗುರುತಿಸಿ ರೈತರು ಜಮೀನುಗಳಿಗೆ ಓಡಾಡಲು ಅನೂಕೂಲ ಮಾಡಿಕೊಟ್ಟಿದ್ದರು. ಆದರೆ ಇತ್ತೀಚೆಗೆ ದಾರಿಯನ್ನು ಶಿವಶೇಖರ್ ಎಂಬವರು ಒತ್ತುವರಿ ಮಾಡಿಕೊಂಡು ಉಳುಮೆ ಮಾಡುತ್ತಿದ್ದಾರೆ. ಇದರಿಂದ 20ಕ್ಕೂ ಹೆಚ್ಚು ರೈತರು ತಮ್ಮ ಜಮೀನುಗಳಿಗೆ ಹೋಗಿಬರಲು ಸಾಧ್ಯವಾಗುತ್ತಿಲ್ಲ. ಕೂಡಲೇ ಕಂದಾಯ ಇಲಾಖಾಧಿಕಾರಿಗಳು ಒತ್ತುವರಿ ತೆರವುಗೊಳಿಸಿ ರೈತರಿಗಾಗುತ್ತಿರುವ ಅನಾನುಕೂಲ ತಪ್ಪಿಸಬೇಕೆಂದು ಗ್ರಾಮದ ಮಹದೇವಯ್ಯ, ನಂಜುಂಡಯ್ಯ, ಚಿಕ್ಕಮೊಗಯ್ಯ, ಸಿದ್ದರಾಜು, ಅಣ್ಣಯ್ಯ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕಾಯಿಲೆ ಬರದಂತೆ ತಡೆಗಟ್ಟುವುದು ಅಗತ್ಯ
ಎಚ್.ಡಿ. ಕೋಟೆ: ಆರೋಗ್ಯವಂತ ಮನುಷ್ಯ ತನ್ನ ಭವಿಷ್ಯ ರೂಪಿಸಬಲ್ಲ, ಕಾಯಿಲೆ ಬರುವ ಮೊದಲು ಆರೋಗ್ಯವನ್ನು ಉತ್ತಮ ರೀತಿಯಲ್ಲಿ ನೋಡಿಕೊಂಡು ಹೋಗಬೇಕು ಎಂದು ಶಾಸಕ ಚಿಕ್ಕಮಾದು ತಿಳಿಸಿದರು. ಸರಗೂರು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನಲ್ಲಿ ಭಾನುವಾರ ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ಬುಡಕಟ್ಟು ಮತ್ತು ಗಿರಿಜನರಿಗೆ ಆಯೋಜಿಸಿದ್ದ ಮಾಹಿತಿ ಮತ್ತು ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿರಿಜನರು ವಾಸವಾಗಿದ್ದು. ವಾಜಪೇಯಿ ಆರೋಗ್ಯಶ್ರೀ ಬಗ್ಗೆ ಮಾಹಿತಿ ಮತ್ತು ತಿಳಿವಳಿಕೆ ನೀಡಬೇಕಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಹೆಚ್ಚಿನ ಮಾಹಿತಿ ತಿಳಿಸಿ, ರಾಷ್ಟ್ರದ ಪ್ರತಿ ಪ್ರಜೆಯ ಆರೋಗ್ಯ ಕಾಪಾಡಬೇಕು. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸೇವಾ ಮನೋಭಾವದಿಂದ ತಾಲೂಕಿನಾದ್ಯಂತ ಕೆಲಸ ಮಾಡುತ್ತಿದೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಎಲ್.ರವಿ ಮಾತನಾಡಿ, ವಾಜಪೇಯಿ ಆರೋಗ್ಯಶ್ರೀ ಯೋಜನೆಯಲ್ಲಿ ಹೃದಯ ರೋಗ, ಕ್ಯಾನ್ಸರ್, ಮೂತ್ರಪಿಂಡ ತೊಂದರೆ, ನರರೋಗ, ಸುಟ್ಟಗಾಯ, ಸಣ್ಣ ಮಕ್ಕಳ ಕಾಯಿಲೆಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದರು. 449 ಮಂದಿಗೆ ಆರೋಗ್ಯ ತಪಾಷಣೆ ನಡೆಸಲಾಯಿತು. ಈ ಪೈಕಿ 51 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳಿಸಲಾಯಿತು. ಜಿಪಂ ಸದಸ್ಯೆ ಭಾಗ್ಯಲಕ್ಷ್ಮಿ, ತಹಸೀಲ್ದಾರ್ ಶಿವಸ್ವಾಮಿ, ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್. ಸೀತಾರಾಮ್, ಸಿಇಒ ಡಾ.ಎಂ.ಎ. ಬಾಲಸುಬ್ರಹ್ಮಣ್ಯ, ಆರೋಗ್ಯಾಧಿಕಾರಿ ಎಚ್.ಎಸ್. ಶರತ್, ವಾಜಪೇಯಿಶ್ರೀ ಯೋಜನೆ ಪ್ರಾದೇಶಿಕ ಸಮಾಲೋಚನ ಅಧಿಕಾರಿ ಜಯರಾಮ್, ಜಿಲ್ಲಾ ವ್ಯವಸ್ಥಾಪಕ ನಿರಂಜನ ಪ್ರಸಾದ್, ಆರೋಗ್ಯ ಮಿತ್ರ ನಟರಾಜು, ರವಿಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.