ನಕಲಿ ದಾಖಲೆ: ನಾಲ್ವರ ವಿರುದ್ಧ ಕೇಸು
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಎಂಡಿಎ) ಸೇರಿದ ಎರಡು ನಿವೇಶನಗಳ ಸಂಬಂಧ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವ ಹಾಗೂ ಖರೀದಿಸಿರುವ ನಾಲ್ವರ ವಿರುದ್ಧ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಹರದನಹಳ್ಳಿ 1ನೇ ಹಂತ ಬಡಾವಣೆಯ ನಿವೇಶನ ಸಂಖ್ಯೆ 700 ಮತ್ತು 701 ರಲ್ಲಿ ಅಕ್ರಮವಾಗಿ ಪ್ಲಾಟ್ಗಳನ್ನು ನಿರ್ಮಿಸಿಕೊಂಡು, ನಗರಪಾಲಿಕೆಯಲ್ಲಿ ಸೃಜಿಸಿರುವ ಸುಳ್ಳು ದಾಖಲಾತಿಗಳನ್ನು ನೀಡಿ ಖಾತಾಪತ್ರ ಪಡೆದು ಕಂದಾಯ ಪಾವತಿಸಿದ್ದಾರೆ.
ಪ್ರಸ್ತುತ ನಿವೇಶನಗಳ ಮಂಜೂರಾತಿ ಪತ್ರ, ಸ್ವಾಧೀನ ಪತ್ರ ಹಾಗೂ ಕ್ರಯಪತ್ರಗಳು ಸೃಜಿಸಲ್ಪಟ್ಟ ದಾಖಲೆಯಾಗಿವೆ. 2004ರಲ್ಲಿ ಚಿಕ್ಕತಾಯಮ್ಮ ನಿವೇಶನ ಸಂಖ್ಯೆ 700 ಅನ್ನು ಎನ್.ಶಶಿಕುಮಾರ್ ಎಂಬವರಿಗೆ ಶುದ್ಧಕ್ರಯಕ್ಕೆ ಮಾರಾಟ ಮಾಡಿರುತ್ತಾರೆ. ಮಹದೇವಮ್ಮ ಅವರು ನಿವೇಶನ ಸಂಖ್ಯೆ 701 ಅನ್ನು ಲಕ್ಷ್ಮಿ ಅವರಿಗೆ ಕ್ರಯಕ್ಕೆ ಮಾರಾಟ ಮಾಡಿದ್ದು, ಲಕ್ಷ್ಮೀ ಅವರು ಎನ್.ಶಶಿಕುಮಾರ್ಗೆ ದಾನಪತ್ರದ ಮೂಲಕ ನೀಡಿದ್ದಾರೆ.
ಈ ನಿವೇಶನಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸ್ವತ್ತಾಗಿದ್ದು, ಅಲ್ಲದೆ ನಗರ ಪಾಲಿಕೆಗೆ ಎನ್. ಶಶಿಕುಮಾರ್ ಕಟ್ಟಡ ಪರವಾನಗಿ ನೀಡುವ ಸಮಯದಲ್ಲಿ ತಪ್ಪು ಮಾಹಿತಿ ನೀಡಿ, ಸುಳ್ಳು ದಾಖಲಾತಿಗಳನ್ನು ಸಲ್ಲಿಸಿ ಕಟ್ಟಡ ನಕ್ಷೆ ಅನುಮೋದನೆ ಪಡೆದು ಕಟ್ಟಡ ನಿರ್ಮಿಸಿಕೊಂಡಿದ್ದಾರೆ.
ಹೀಗಾಗಿ ಸುಳ್ಳು ಮಾಹಿತಿ ನೀಡಿ ಕಟ್ಟಡ ನಿರ್ಮಿಸಿರುವ ಎನ್.ಶಶಿಕುಮಾರ್, ನಕಲಿ ಕ್ರಯಪತ್ರದ ಮೂಲಕ ಮಾರಾಟ ಮಾಡಿರುವ ಚಿಕ್ಕತಾಯಮ್ಮ, ಮಹದೇವಮ್ಮ ಹಾಗೂ ಲಕ್ಷ್ಮಿ ವಿರುದ್ಧ ಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಂಡಿಎ ಆಯುಕ್ತ ಎಸ್.ಪಾಲಯ್ಯ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

