ಪಾಲಿಸಿದಾರರ ಹಣ ಹಿಂದಿರುಗಿಸಲು ಆಗ್ರಹ
ಮೈಸೂರು: ಎಲ್ಐಸಿ ಮೈಕ್ರೋ ಇನ್ಸೂರೆನ್ಸ್ ಪಾಲಿಸಿದಾರರಿಗೆ ಹಣ ಹಿಂದಿರುಗಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಹಾಸನ ಜಿಲ್ಲಾ ಸಮಿತಿಯವರು ಮೈಸೂರಿನ ಬನ್ನಿಮಂಟಪದಲ್ಲಿರುವ ಎಲ್ಐಸಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.
ಮೈಕ್ರೋ ಇನ್ಸೂರೆನ್ಸ್ ಪಾಲಿಸಿಯಲ್ಲಿ ಖಾಸಗಿ ಏಜೆನ್ಸಿಗಳ (ಸ್ವಯಂ ಸೇವಾ ಸಂಸ್ಥೆಗಳು) ಪಾತ್ರದ ಬಗ್ಗೆ ಪಾಲಿಸಿದಾರರಿಗೆ, ಸಬ್ ಏಜೆಂಟರು ಆದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ನಿರುದ್ಯೋಗಿಗಳಿಗೆ ಎಲ್ಐಸಿ ಯಾವುದೇ ಮಾಹಿತಿ ನೀಡಿಲ್ಲ. 2008ರಲ್ಲಿ ಆರಂಭವಾದ ಈ ಪ್ರಕ್ರಿಯೆಯಲ್ಲಿ ಕೇವಲ 2 ವರ್ಷದ ಹಣವನ್ನು ಮಾತ್ರ ಎನ್ಜಿಒಗಳು ಎಲ್ಐಸಿ ಕಚೇರಿಗೆ ಪಾವಸಿವೆ. ನಂತರ ಪಾಲಿಸಿದಾರರು ಮತ್ತು ಸಬ್ ಏಜೆಂಟರುಗಳಿಂದ ಪಡೆದ ಹಣವನ್ನು ಎಲ್ಐಸಿಗೆ ನೀಡಿಲ್ಲ ಎಂದು ದೂರಿದರು.
ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ, ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲೂಕಿನಲ್ಲೂ ಸಾಕಷ್ಟು ಪಾಲಿಸಿದಾರರಿಗೆ ಮೋಸ ಮಾಡಿದ್ದಾರೆ. ಈ ಸಂಬಂಧ ಸಿಐಡಿ ತನಿಖೆ ನಡೆಯುತ್ತಿದ್ದರೂ ಈವರೆಗೂ ಪಾಲಿಸಿದಾರರು ಮತ್ತು ಸಬ್ ಏಜೆಂಟರುಗಳಿಗೆ ಹಣ ವಾಪಸ್ ನೀಡಿಲ್ಲ ಎಂದು ಕಿಡಿಕಾರಿದರು.
ಸಿಐಡಿ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ, ಪಾಲಿಸಿದಾರರು ಮತ್ತು ಸಬ್ ಏಜೆಂಟರ ಹಣ ವಾಪಸ್ ಕೊಡಿಸಬೇಕು. ಹಣ ಕೊಡುವ ಜವಾಬ್ದಾರಿಯನ್ನು ಎಲ್ಐಸಿ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಅಂಗನವಾಡಿ ನೌಕರರ ಸಂಘದ ಹಾಸನ ಜಿಲ್ಲಾ ಸಮಿತಿ ಅಧ್ಯಕ್ಷೆ ಇಂದ್ರಮ್ಮ, ಕಾರ್ಯದರ್ಶಿ ಶಾಂತಲಕ್ಷ್ಮಿ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

