ಮೈಸೂರು

ಸೆಷನ್ಸ್ ಕೋರ್ಟ್ ಆರಂಭಕ್ಕೆ ಚಿಂತಿಸಿ

Published On :

ಕ.ಪ್ರ.ವಾರ್ತೆ ಟಿ.ನರಸೀಪುರ ಜೂ.1
ರಾಜ್ಯ ಸರ್ಕಾರ ಗ್ರಾಮೀಣರ ಪ್ರಕರಣಗಳ ತ್ವರಿತ ವಿಲೇವಾರಿಗೆ ನರಸೀಪುರ ನ್ಯಾಯಾಲಯದಲ್ಲಿಯೇ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆರಂಭಿಸಲು ಚಿಂತನೆ ನಡೆಸಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಚಂದ್ರಶೇಖರ ಸಲಹೆ ನೀಡಿದರು.
ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 2.75 ಕೋಟಿ ವೆಚ್ಚದ ಮೇಲಂತಸ್ತಿನ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ನರಸೀಪುರದಲ್ಲಿನ ನ್ಯಾಯಾಲಯ ಜಿಲ್ಲಾ ನ್ಯಾಯಾಲಯದ ಕಾರ್ಯನಿರ್ವಹಣೆಗೆ ಯೋಗ್ಯವಾಗಿರುವ ಹಿನ್ನೆಲೆಯಲ್ಲಿ ವಕೀಲರ ಸಂಘ ಸೆಷನ್ಸ್ ನ್ಯಾಯಾಲಯ ಆರಂಭಿಸುವ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಚಿವರ ಮೇಲೆ ಒತ್ತಡ ಹೇರಬೇಕು ಎಂದರು.
ವಕೀಲರ ಸಂಘ ಸಲ್ಲಿಸಿದ ಪ್ರಸ್ತಾವನೆಯನ್ನು ಅಂಗೀಕರಿಸಿರುವ ಸರ್ಕಾರ, ನ್ಯಾಯಾಲಯದ ಮೇಲಂತಸ್ತಿನ ನೂತನ ಕಟ್ಟಡ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಮೂಲಕ ಅನುದಾನ ನೀಡಿದೆ. ನೂತನ ನ್ಯಾಯಾಲಯ ಸೇರಿದಂತೆ ಗ್ರಂಥಾಲಯ ಹಾಗೂ ಸಭಾಂಗಣ ಹೆಚ್ಚುವರಿಯಾಗಿ ನ್ಯಾಯಾಲಯದ ಸಂಕೀರ್ಣಕ್ಕೆ ಸೇರ್ಪಡೆ ಆಗಲಿವೆ. ನೂತನ ನ್ಯಾಯಾಲಯದಲ್ಲಿ ತಲಕಾಡು ಹಾಗೂ ಬನ್ನೂರು ಹೋಬಳಿ ವ್ಯಾಪ್ತಿಯ ಪ್ರಕರಣಗಳ ವಿಚಾರಣೆ ನಡೆಯಲಿದೆ ಎಂದು ನ್ಯಾಯಾಧೀಶ ಚಂದ್ರಶೇಖರ ತಿಳಿಸಿದರು.
ಕಿರಿಯ ಶ್ರೇಣಿ ನ್ಯಾಯಾಧೀಶ ಬಿ.ಜಿ.ದಿನೇಶ್, ವಕೀಲರ ಸಂಘದ ಅಧ್ಯಕ್ಷ ಬಿ.ಎಂ.ನಾಗಭೂಷಣಮೂರ್ತಿ, ಲೋಕೋಪಯೋಗಿ ಇಲಾಖೆ ಎಇಇ ನಟರಾಜನ್, ಸಹಾಯಕ ಎಂಜಿನಿಯರ್ ಹರೀಶ್‌ಕುಮಾರ್, ಎಂ. ಜಯಸ್ವಾಮಿ, ಗುತ್ತಿಗೆದಾರ ಎಂ.ದಾಮ್ಟೋರ್, ವಕೀಲರಾದ ಎಸ್.ಜಯದೇವಣ್ಣ, ಬಿ.ಎಂ. ಶಿವಣ್ಣ, ಕೆ.ಬಿ. ಬಸವಣ್ಣ, ಕೆ.ಶಂಭುಲಿಂಗಸ್ವಾಮಿ, ಭುವನೇಶ್, ಎಂ.ಉಮೇಶ್ ಕುಮಾರ್, ಜಿ.ರವಿಶಂಕರ್, ಕನ್ನಹಳ್ಳಿಮೂರ್ತಿ ಇದ್ದರು.

ಇಒ ಆಗಿ ಲಕ್ಷ್ಮಣ್‌ರಾವ್ ಅಧಿಕಾರ ಸ್ವೀಕಾರ
ಟಿ. ನರಸೀಪುರ: ತಾಪಂ ಪ್ರಭಾರ ಇಒ ಆಗಿ ಜಿಪಂ ತಾಂತ್ರಿಕ ಉಪ ವಿಭಾಗದ ಎಇಇ ಪಿ. ಲಕ್ಷ್ಮಣ್‌ರಾವ್ ಅವರು ನಿರ್ಗಮಿತ ಕಾರ್ಯನಿರ್ವಹಕ ಅಧಿಕಾರಿ ಕೆ.ಬಿ.ಪುಟ್ಟಸ್ವಾಮಿ ಅವರಿಂದ ಅಧಿಕಾರ ವಹಿಸಿಕೊಂಡರು.
ತಾಪಂ ಹಿಂದಿನ ಇಒ ಜೈಕೃಷ್ಣ ಬಡ್ತಿ ಪಡೆದು ವರ್ಗಾವಣೆಯಾದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ಕೆ.ಬಿ.ಪುಟ್ಟಸ್ವಾಮಿ ನಿಯೋಜನೆಯಾಗಿದ್ದರು. ಕೇವಲ ಮೂರು ದಿನಗಳ ಕಾಲವಷ್ಟೇ ಇಒ ಆಗಿ ಕಾರ್ಯನಿರ್ವಹಿಸಿದ ಪುಟ್ಟಸ್ವಾಮಿ ಅವರು ನಿವೃತ್ತಿಯಾದ ಹಿನ್ನೆಲೆಯಲ್ಲಿ ಪಿ. ಲಕ್ಷ್ಮಣ್‌ಣರಾವ್ ಅಧಿಕಾರ ಸ್ವೀಕರಿಸಿದ್ದಾರೆ.
ನಂತರ ತಾಪಂ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುಟ್ಟಸ್ವಾಮಿ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ಪ್ರಭಾರ ಇಒ ಪಿ.ಲಕ್ಷ್ಮಣ್‌ರಾವ್, ಕಚೇರಿ ಅಧೀಕ್ಷಕಿ ಶಾಂತಕುಮಾರಿ, ಸಹಾಯಕ ಲೆಕ್ಕಾಧಿಕಾರಿ ಕೃಷ್ಣಾಚಾರ್, ಸಾಕ್ಷರ ಸಂಯೋಜಕಿ ನಾಗಮ್ಮ, ಪಿಡಿಒಗಳಾದ ಆರ್.ಲಿಂಗರಾಜು, ನಿಂಗಯ್ಯ, ನಾಗರಾಜು, ಪ್ರಭುಸ್ವಾಮಿ, ಎಂ. ಬಸವಯ್ಯ, ಟಿಒಟಿ ನಾಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.