ಅಂಧ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಉಚಿತ ತರಬೇತಿ
ಮೈಸೂರು: ಯಂಗ್ ಇಂಡಿಯಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಂಧ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ ಎಂದು ಟ್ರಸ್ಟ್ನ ಕಾರ್ಯದರ್ಶಿ ಎ.ಎಸ್. ಮಹೇಂದ್ರ ಹೇಳಿದರು. ಟ್ರಸ್ಟ್ ಮೂಲಕ ಅಂಧ ಅಭ್ಯರ್ಥಿಗಳ ಪ್ರತಿಭೆ ಮತ್ತು ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಕಲ್ಪಿಸಲಾಗುತ್ತಿದೆ. ಜೊತೆಗೆ ಟ್ರಸ್ಟ್ ಮೂಲಕ ಅಂಧ ಅಭ್ಯರ್ಥಿಗಳಿಗೆ ಎಲ್ಲ ರೀತಿಯ ಸಹಾಯ ಒದಗಿಸುತ್ತಿರುವುದಾಗಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂಗವಿಕಲ ವಿದ್ಯಾರ್ಥಿಗಳಿಗೆ ಪುಸ್ತಕ ವೆಚ್ಚ ಮತ್ತು ಪರೀಕ್ಷಾ ಶುಲ್ಕ ಭರಿಸಲಾಗುವುದು. ಜೀವನ ಕಲೆ ಮತ್ತು ಸಂವಹನ ಕಲೆಯನ್ನು ಹೇಳಿಕೊಡಲಾಗುವುದು ಎಂದರು. ಅಂಧರಿಗಾಗಿರುವ ತಂತ್ರಾಂಶವು ಖರೀದಿಸಲು ಕಷ್ಟಕರವಾಗುತ್ತಿದೆ. ಹೀಗಾಗಿ ಸರ್ಕಾರವು ಉಚಿತವಾಗಿ ತಂತ್ರಾಂಶ ಒದಗಿಸಿದರೆ ಅಂಧರಿಗೆ ತರಬೇತಿ ನೀಡಲು ಅನುಕೂಲವಾಗುತ್ತದೆ. ಸಾರ್ವಜನಿಕರು ಸಹ ಟ್ರಸ್ಟ್ಗೆ ಸಹಾಯ ಮಾಡಬಹುದು ಎಂದು ಹೇಳಿದರು. ಸಹಾಯ ಮಾಡಲು ಬಯಸುವವರು ಮೊ. 94834 28580, 99647 00283 ಸಂಪರ್ಕಿಸಬಹುದು.
ಸ್ತ್ರೀರೋಗ ಉಚಿತ ತಪಾಸಣೆ ಶಿಬಿರ ಇಂದು
ಮೈಸೂರು: ನಗರದ ವಿವಿ ಮೊಹಲ್ಲಾದಲ್ಲಿರುವ ಚಕ್ರದತ್ತ ಆಯುರ್ವೇದ ಚಿಕಿತ್ಸಾಲಯವು ಜೂ.8ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಸ್ತ್ರೀರೋಗಕ್ಕೆ ಸಂಬಂಧಿಸಿದಂತೆ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಆಯೋಜಿಸಿದೆ. ಅತಿಯಾದ ರಕ್ತಸ್ರಾವ, ಬಿಳಿಮುಟ್ಟು, ಬಂಜೆತನ, ಗರ್ಭಕೋಶದ ತೊಂದರೆ ಸೇರಿದಂತೆ ಮೊದಲಾದ ಸ್ತ್ರೀರೋಗ ಸಮಸ್ಯೆಗಳಿಗೆ ಆಯುರ್ವೇದ ಸ್ತ್ರೀರೋಗ ತಜ್ಞರಾದ ಡಾ.ಉಷಾ ಅವರು ಚಿಕಿತ್ಸೆ ನೀಡುವರು. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಚಿಕಿತ್ಸಾಲಯದ ಡಾ.ಎಂ. ರವಿಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು. ವೈದ್ಯರಾದ ಡಾ.ತೇಜಸ್ವಿನಿ, ಡಾ.ಉಷಾ, ಸಮಾಜ ಸೇವಕ ಬದ್ರಿ ಇದ್ದರು. ಹೆಚ್ಚಿನ ಮಾಹಿತಿಗಾಗಿ ಮೊ. 99809 52358, 91644 53071 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

