ಪಿಂಚಣಿ ವಿಳಂಬ ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ
ಮೈಸೂರು: ವೃದ್ಧಾಪ್ಯ ವೇತನ (ಪಿಂಚಣಿ) ದೊರೆಯುವಲ್ಲಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಮೈಸೂರು ತಾಲೂಕು ಜಯಪುರ ಹೋಬಳಿ ಮದ್ದೂರು ಮತ್ತು ಮದ್ದೂರು ಹುಂಡಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು. ಜಯಪುರ ನಾಡಕಚೇರಿಯಿಂದ ನೀಡಿದ್ದ ಪಿಂಚಣಿ ಆದೇಶದ ಪ್ರತಿಯಲ್ಲಿ ನಮೂದಿಸಿರುವ ದಿನಾಂಕದಿಂದ ಪಿಂಚಣಿ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಪಿಂಚಣಿ ಬರುವುದು 2-3 ತಿಂಗಳ ವಿಳಂಬವಾಗುತ್ತಿದೆ. ಬಹುತೇಕ ಫಲಾನುಭವಿಗಳಿಗೆ 6 ತಿಂಗಳಿಂದ ವರ್ಷವಾದರೂ ಪಿಂಚಣಿ ದೊರೆತಿಲ್ಲ ಎಂದು ಆರೋಪಿಸಿದರು. ಪಿಂಚಣಿ ಸೌಲಭ್ಯ ಸರ್ಕಾರದ ಸಕಾಲ ಯೋಜನೆಗೆ ಒಳಪಟ್ಟರೂ ನಿಗದಿತ ನಿಯಮ ಪಾಲಿಸದೇ ವಿಳಂಬ ಮಾಡುತ್ತಿರುವುದು ಸರಿಯಲ್ಲ. ನಾಡಕಚೇರಿ ಮತ್ತು ಖಜಾನೆ ನಡುವೆ ವಿಭಿನ್ನ ವ್ಯವಸ್ಥೆಯೇ ಇದಕ್ಕೆ ಕಾರಣ ಎಂದು ಅವರು ಕಿಡಿಕಾರಿದರು. ವೃದ್ಧ ಪಿಂಚಣಿದಾರರಿಗೆ ಆದೇಶ ನೀಡಿದ ದಿನದಿಂದಲೇ ಪಿಂಚಣಿ ದೊರೆಯಬೇಕು. ಬಾಕಿ ಇರುವ ಪಿಂಚಣಿ ಪಾವತಿಸಲು ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಒತ್ತಾಯಿಸಿದರು. ಸಮಾಜ ಸೇವಕ ಭಾಸ್ಕರ್ ಶರ್ಮ, ಪಿಂಚಣಿ ಫಲಾನುಭವಿಗಳಾದ ಹಿರಿಗಂಡು, ಸಣ್ಣ ತಾಯಮ್ಮ, ಚಿನ್ನಮ್ಮ ಇತರರಿದ್ದರು.
ಆಶಾ ಕಾರ್ಯಕರ್ತೆಯರ ಬಾಕಿ ಹಣ ಪಾವತಿಸುವಂತೆ ಆಗ್ರಹ
ಮೈಸೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 35 ಸಾವಿರಕ್ಕೂ ಹೆಚ್ಚು ಮಂದಿ ಆಶಾ ಕಾರ್ಯಕರ್ತೆಯರಿಗೆ ನೀಡಬೇಕಾದ ಮ್ಯಾಚ್ ಗ್ರ್ಯಾಂಟ್ ಹಣವನ್ನು ಬಾಕಿ ಉಳಿಸಿಕೊಂಡಿದ್ದು ಕೂಡಲೇ ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಸರ್ಕಾರವನ್ನು ಆಗ್ರಹಿಸಿದೆ. ಸಂಘದ ನಿರಂತರ ಹೋರಾಟದ ಫಲವಾಗಿ ಪ್ರೋತ್ಸಾಹ ಧನದ ಮೊದಲ ಕಂತಿನ ಹಣವನ್ನು ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಮೈಸೂರು ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಗ್ರ್ಯಾಂಟ್ ಹಣ ನೀಡಬೇಕು. ಕಾರ್ಯಕರ್ತೆಯೊಬ್ಬರಿಗೆ ಪ್ರಯಾಣ ಭತ್ಯೆ, ಪಿಎಚ್ಸಿ ಮೀಟಿಂಗ್, ವಿಎಚ್ಸಿ ಮೀಟಿಂಗ್, ವಿಎಚ್ಎನ್ಡಿ ಮೀಟಿಂಗ್ಗಳ ಪ್ರೋತ್ಸಾಹ ಧನ ಸೇರಿದಂತೆ ಒಟ್ಟು 2900 ಹಣ ಬರಬೇಕಾಗಿದೆ ಎಂದು ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಪಿ.ಎಸ್. ಸಂಧ್ಯಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

