ಮೈಸೂರು

ಮನುಷ್ಯ ನಿಯಮಗಳಿಗೆ ಬದ್ಧನಾಗಲಿ

Published On :

ಸುತ್ತೂರು: ಮನುಷ್ಯ ಕೆಲವು ನಿಯಮಗಳಿಗೆ ಬದ್ಧನಾಗಿರಬೇಕಾಗುತ್ತದೆ. ಆ ನಿಯಮಗಳಿಂದ ನನಗೂ ಒಳಿತಾಗುವ ಇತರರಿಗೂ ಹಿತವಾಗುವಂತೆ ನಮ್ಮ ನಡೆ ಇರಬೇಕಾಗುತ್ತದೆ ಎಂದು ರಾಮಕೃಷ್ಣ ವಿದ್ಯಾಶಾಲೆಯ ಅಧ್ಯಾಪಕ ಎಸ್.ಆರ್. ರಮೇಶ್ ಅಭಿಪ್ರಾಯಪಟ್ಟರು. ವೀರಸಿಂಹಾಸನ ಮಹಾಸಂಸ್ಥಾನ ಮಠ, ಶಿವರಾತ್ರಿ ಧಾರ್ಮಿಕ ದತ್ತಿ ಮತ್ತು ಜೆಎಸ್‌ಎಸ್ ಮಹಾವಿದ್ಯಾಪೀಠ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುತ್ತೂರು ಶ್ರೀಕ್ಷೇತ್ರದಲ್ಲಿ ಶಿಕ್ಷಕರಿಗಾಗಿ ಆಯೋಜಿಸಿರುವ ನಾಲ್ಕು ದಿನಗಳ ಶಿಬಿರದಲ್ಲಿ ಶನಿವಾರ ನೀತಿ ಬೋಧನೆಯ ಪ್ರಾಯೋಗಿಕ ವಿಧಾನ ವಿಷಯ ಕುರಿತು ಉಪನ್ಯಾಸ ನೀಡಿದರು.
ನಿಸರ್ಗದಲ್ಲಿರುವ ಪ್ರಾಣಿಗಳಲ್ಲಿ ನಿಸರ್ಗದತ್ತವಾದ ಸಹಜ ಪ್ರವೃತ್ತಿಗಳಿರುತ್ತವೆ. ಪ್ರಾಣಿಗಳಿಗಿಂತ ವಿಭಿನ್ನರಾದ ನಾವು, ನಮ್ಮ ನಡೆಗೆ ನಾವೇ ಹೊಣೆಗಾರರಾಗುತ್ತೇವೆ. ಆದ್ದರಿಂದ ಮಾನವ ಸಮುದಾಯದ ವಿಷಯಕ್ಕೆ ಬಂದಾಗ ಅದನ್ನರಿತು ನಡೆಯುವುದೇ ಮಾನವೀಯತೆ ಎಂದು ಹೇಳಿದರು.
ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿಯ ಡೀನ್ ಡಾ.ಎಂ.ಎಸ್. ವಿಘ್ನೇಶ್, ಕರ್ತವ್ಯ ಮತ್ತು ವೃತ್ತಿಪರತೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಮೈಸೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ವಿಜಯಾಹರನ್ ಅವರು ಸಹಿಷ್ಣುತೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ಇನ್ನೊಂದು ಧರ್ಮದ ನಂಬಿಕೆ, ಆಚರಣೆಗಳನ್ನು ಸಹಿಸಿಕೊಳ್ಳುವುದೇ ಸಹಿಷ್ಣುತೆ ಎಂದರಲ್ಲದೆ, ಲೋಕೋಭಿನ್ನರುಚಿ ಎಂಬ ಮಾತಿನಂತೆ ಪ್ರತಿಯೊಂದರಲ್ಲೂ ಭಿನ್ನತೆ ಇರುತ್ತದೆ ಎಂದು ವ್ಯಾಖ್ಯಾನಿಸಿದರು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.